Home / Uncategorized / ಸಿಡಿ ಸ್ಫೋಟ ಹಿಂದಿನ ಸತ್ಯಾಂಶ,,?ದೊಡ್ಡ ರಾಜಕಾರಣಿಗಳ ನೆರಳು ಇರುವುದು ಕಾಣುತ್ತಿದೆ?.

ಸಿಡಿ ಸ್ಫೋಟ ಹಿಂದಿನ ಸತ್ಯಾಂಶ,,?ದೊಡ್ಡ ರಾಜಕಾರಣಿಗಳ ನೆರಳು ಇರುವುದು ಕಾಣುತ್ತಿದೆ?.

Spread the love

ಬೆಂಗಳೂರು, ಮಾರ್ಚ್ 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಸ್ಫೋಟ ಹಿಂದಿನ ಸತ್ಯಾಂಶ ಕುರಿತು ವಿಶೇಷ ತನಿಖಾ ತಂಡ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಎರಡು ರಾಜಕೀಯ ಪಕ್ಷಗಳ ನಡುವಿನ ಸಮರವೂ ಮುಂದುವರೆದಿದೆ.

ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವ ಇಬ್ಬರು ವ್ಯಕ್ತಿಗಳು ವಿಡಿಯೋ ಬಿಡುಗಡೆ ಮಾಡುವ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಯಾರು ಸತ್ಯ ? ಯಾರು ಸುಳ್ಳು ? ಯಾರು ಯಾರಿಗೆ ಟಾರ್ಗೆಟ್ ಎಂಬ ಅಸಲಿ ಸತ್ಯಾಂಶ ಮಾತ್ರ ಎಸ್‌ಐಟಿ ತನಿಖೆಯಿಂದಲೇ ಹೊರ ಬೀಳಬೇಕು. ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವ ವ್ಯಕ್ತಿಗಳ ಸರಣಿ ವಿಡಿಯೋಗಳು ಬಿಡುಗಡೆಯಾಗಿವೆ. ಇವತ್ತು ಬೆಳಗ್ಗೆ ಭವಿತ್ ಎಂಬಾತ ವಿಡಿಯೋ ಬಿಡುಗಡೆ ಮಾಡಿದ ಕೆಲವೇ ಕ್ಷಣದಲ್ಲಿ ನರೇಶ್ ಗೌಡ ಎಂಟು ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಬಿಡುಗಡೆಯ ತಂತ್ರ ಪ್ರತಿ ತಂತ್ರ ಹಿಂದೆ ದೊಡ್ಡ ರಹಸ್ಯ ಅಡಗಿದೆ.

 

ಇನ್ನೊಂದೆಡೆ, ಕಣ್ಮರೆಯಾಗಿರುವ ಸಿಡಿ ಗರ್ಲ್ ಕೆಲ ದಿನಗಳ ಹಿಂದೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಳು. ಸಿಡಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ರಚನೆಯಾಗಿ ರಮೇಶ್ ಜಾರಕಿಹೊಳಿ ದೂರು ನೀಡುತ್ತಿದ್ದಂತೆ ಈ ಬೆಳವಣಿಗೆ ನಡೆದಿತ್ತು. ಸರಣಿ ವಿಡಿಯೋಗಳ ಬಿಡುಗಡೆ ಹಿಂದಿನ ಸೀಕ್ರೇಟ್ ಏನಿರಬಹುದು? ಮಂದೆ ಓದಿ…

ನರೇಶ್ ವಿಡಿಯೋ ಹೇಳಿಕೆ ಬಿಡುಗಡೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ಎಂಟು ನಿಮಿಷ ವಿಡಿಯೋ ಬಿಡುಗಡೆ ಮಾಡಿರುವ ನರೇಶ್ ಗೌಡ , ಎಸ್‌ಐಟಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾನೆ. ಐದರಿಂದ ಎಂಟು ದಿನದ ಬಳಿಕ ವಾಪಸು ಬರುತ್ತೇನೆ. ನೇರವಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತ ಯುವತಿ ತನ್ನ ಜತೆ ಇರುವುದಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಕಿಂಗ್‌ಪಿನ್ ಆರೋಪದಡಿ ಸುದ್ದಿ ಮಾಧ್ಯಮಗಳಿಗೆ ಆಹಾರವಾಗಿರುವ ನರೇಶ್ ಗೌಡ ವಿಡಿಯೋ ಎಸ್‌ಐಟಿ ಅಧಿಕಾರಿಗಳಿಗೆ ತಲೆ ಬಿಸಿ ಉಂಟು ಮಾಡಿದೆ. ಕಳೆದ ಒಂದು ವಾರದಿಂದ ಎಸ್‌ಐಟಿ ಶೋಧ ಕಾರ್ಯ ನಡೆಸುತ್ತಿದ್ದರೂ ಸುಳಿವು ಪತ್ತೆ ಮಾಡಲಾಗಿಲ್ಲ. ಅಜ್ಞಾತ ಸ್ಥಳದಿಂದ ದಿಢೀರ್ ವಿಡಿಯೋ ಬಿಡುಗಡೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಆತ ಹೇಳಿದ್ದೆಲ್ಲವೂ ಸತ್ಯವಿದ್ದರೆ ಯಾಕೆ ಓಡಿ ಹೋಗಬೇಕಿತ್ತು. ? ಎಲ್ಲಿಯೋ ಕೂತು ವಿಡಿಯೋ ಬಿಡುಗಡೆ ಮಾಡಬೇಕಿತ್ತು ಎಂಬ ಮಾತು ಕೇಳಿ ಬರುತ್ತಿದೆ.

ಈಗ ಬಂದ್ರೆ ಏನಾಗುತ್ತದೆ ಅನ್ನೋದು ಗೊತ್ತಿದೆ

ನಾನು ಈಗ ಬಂದರೆ ಏನಾಗುತ್ತದೆ ಎಂಬ ಅರಿವು ನನಗಿದೆ. ಎಸ್‌ಐಟಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ಮಾಡುತ್ತಿದೆ. ತಪ್ಪು ಮಾಡಿರುವುದು ಜಾರಕಿಹೊಳಿ. ಆದರೆ ಸಂತ್ರಸ್ತ ಯುವತಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಸಂತ್ರಸ್ತ ಯುವತಿ ಪರ ಬ್ಯಾಟಿಂಗ್ ಆಡುವ ಜತೆಗೆ ಆಕೆ ಜತೆಯಲ್ಲಿರುವುದಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಪ್ರಭಾವಿ ನಾಯಕರು ತನ್ನ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾತು ಹೇಳಿಕೊಂಡಿದ್ದಾರೆ. ಅಂದರೆ ಎಸ್‌ಐಟಿ ಬಳಿ ಸಾಕ್ಷಿಗಳಿಲ್ಲ ಎಂದು ಸಾರಿ ಹೇಳಿದಂತಿದೆ. ಈ ಮೂಲಕ ಬೆಳಗಾವಿ ಪೊಲೀಸರು ದಾಖಲಿಸಿರುವ ಅಪಹರಣ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದಡೆ ಎಸ್‌ಐಟಿ ಪೊಲೀಸರು ಅಂತೂ ಹಿಡಿಯಲ್ಲ, ನಾನೇ ಹತ್ತು ದಿನದಲ್ಲಿ ಬರುತ್ತೇನೆ ಎಂದು ಹೇಳಿಕೆ ನೀಡಿವುದು ಎಸ್‌ಐಟಿ ಅಧಿಕಾರಿಗಳನ್ನು ಕೆರಳಿಸಿದೆ.

ರಮೇಶ್ ಜಾರಕಿಹೊಳಿ ಸಿಡಿ ವಿಡಿಯೋ ಸಂಬಂಧ ವಾಯ್ಸ್ ಒವರ್ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಪತ್ರಕರ್ತ ಭವಿತ್ ಕೂಡ ವಿಡಿಯೋ ಬಿಡುಗಡೆ ಮಾಡಿದ್ದಾರೆ. ತನ್ನದೇನೂ ಪಾತ್ರವಿಲ್ಲ, ನಾನು ಎಸ್‌ಐಟಿ ಅಧಿಕಾರಿಗಳ ತನಿಖೆಗೆ ಸ್ಪಂದಿಸಿದ್ದೇನೆ. ಮುಂದೆಯೂ ಸ್ಪಂದಿಸುತ್ತೇನೆ. ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಹಲವು ಬಾರಿ ಎಸ್‌ಐಟಿ ವಿಚಾರಣೆ ಎದುರಿಸಿರುವ ಭವಿತ್ ಯಾಕೆ ವಿಚಾರಣೆಗೆ ಹಾಜರಾಗದೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರು ? ಅಶ್ಲೀಲ ಸಿಡಿ ಸ್ಫೋಟದಲ್ಲಿ ಸಿಕ್ಕ ಮಾಹಿತಿಯನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಒಮ್ಮೆ ನನ್ನ ಮೇಲಿನ ಆರೋಪ ಸುಳ್ಳು ಎಂದು ಬಿಂಬಿಸಿಕೊಳ್ಳುವ ಅಗತ್ಯತೆ. ಇನ್ನು ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿ ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಗಳ ಮುಂದೆ ದಾಖಲಿಸಿದರೆ ಮುಂದೆ ತನಿಖೆ ಎದುರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಹೀಗೊಂದು ಹೇಳಿಕೆ ಬಿಡುಗಡೆ ಮಾಡಿ ಎಸ್‌ಐಟಿ ವಿಚಾರಣೆಯಿಂದ ದೂರ ಉಳಿಯುವ ಪ್ರಯತ್ನ ನಡೆಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತದೆ.

ಮಹಾ ಸ್ಟ್ರಾಟಜಿ

ಸಿಡಿ ಸ್ಪೋಟ ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡುವುದರ ಹಿಂದೆಯೂ ಮಹಾ ತಂತ್ರ ಅಡಗಿದೆ. ಎಲ್ಲಾ ಮಾಧ್ಯಮಗಳು ಸಿಡಿ ಸ್ಫೋಟ ಪ್ರಕರಣ ಹಿಂದೆ ಬದ್ದಿವೆ. ಇಂತಹ ಸಂದರ್ಭದಲ್ಲಿ ಒಂದು ಸಣ್ಣ ಹೇಳಿಕೆ ಕೂಡ ಮಹತ್ವ ಪಡೆದುಕೊಳ್ಳುತ್ತಿದೆ. ಎಸ್‌ಐಟಿ ತನಿಖೆ ಆಧರಿಸಿ ಬರುತ್ತಿರುವ ವರದಿಗಳಿಗೆ ಯೂ ಟರ್ನ್ ನೀಡಲು ವಿಡಿಯೋ ಹೇಳಿಕೆ ಮೊರೆ ಹೋಗಿರುವ ಅನುಮಾನ ಕಾಣುತ್ತದೆ. ಹೀಗೆ ವಿಡಿಯೋಗಳ ಹೇಳಿಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ಪ್ರಕರಣದ ಮಹತ್ವವನ್ನು ಕುಗ್ಗಿಸುವ ಪ್ಲಾನ್ ಅಡಗಿದೆಯೋ ? ಇಲ್ಲವೇ ಎಸ್‌ಐಟಿ ತನಿಖೆಗೆ ಚೆಕ್ ಮೇಟ್ ಕೊಡಲು ಹೊಸ ರಣ ತಂತ್ರ ರೂಪಿಸಿದ್ದು, ಅದರ ಭಾಗವಾಗಿ ಈ ವಿಡಿಯೋ ಗಳ ಬಿಡುಗಡೆ ಮಾಡಿದಂತಿದೆ.

ಖಾಸಗಿ ಸಂಸ್ಥೆಯಿಂದ ತನಿಖೆ, ಎಸ್‌ಐಟಿ ರಚನೆ, ಎಸ್‌ಐಟಿಗೆ ದೂರು ಸಲ್ಲಿಸುವ ಮೂಲಕ ಎಲ್ಲಾ ರೀತಿಯಲ್ಲೂ ಒಂದೆಜ್ಜೆ ಮುಂದೆ ಇಟ್ಟಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಗರ್ಲ್ ಹೇಳಿಕೆ ಬಿಡುಗಡೆ ಮಾಡಿದ್ದಳು. ಈ ಮೂಲಕ ಒಂದೆಜ್ಜೆ ಮುಂದಿಡಬೇಡಿ, ನೀವು ಇಟ್ಟರೆ, ನಾನೇ ಸ್ವತಃ ಬಂದು ನಿಮ್ಮ ಮೇಲೆ ದೂರು ನೀಡಬೇಕಾಗುತ್ತದೆ ಎಂಬ ಸಂದೇಶ ರವಾನಿಸಿದ್ದರು. ಇದರಿಂದ ರಮೇಶ್ ಜಾರಕಿಹೊಳಿ ಕೂಡ ವಿಚಲಿತರಾಗಿದ್ದರು. ಅದು ಅತ್ಯಾಚಾರವೋ, ಹನಿಟ್ರ್ಯಾಪೋ, ಲೈಂಗಿಕ ದೌರ್ಜನ್ಯ ಯಾವುದೇ ಆಗಿರಲಿ, ಸಂತ್ರಸ್ತೆ, ಆಕೆಯ ಹೇಳಿಕೆ ಬಹುಮುಖ್ಯ ವಾಗುತ್ತದೆ. ಇದನ್ನೇ ಕಾನೂನು ಹೇಳುತ್ತದೆ. ಯುವತಿಯ ಹೇಳಿಕೆ ನಡುವೆಯೂ ರಮೇಶ್ ಜಾರಕಿಹೊಳಿ ಇಟ್ಟ ಹೆಜ್ಜೆ ಮುಂದಿಟ್ಟಿಲ್ಲ. ಸದ್ಯ ಇನ್ನೆರಡು ದಿನದಲ್ಲಿ ಈ ಪ್ರಕರಣಕ್ಕೆ ಎಸ್‌ಐಟಿ ಅಧಿಕಾರಿಗಳು ತಾರ್ಕಿಕ ಅಂತ್ಯ ಕಾಣಿಸುವ ಸಾಧ್ಯತೆಯಿದೆ. ಎಲ್ಲಾ ಬೆಳವಣಿಗೆ ನೋಡಿದರೆ, ಈ ಸಿಡಿ ಸ್ಫೋಟ ಪ್ರಕರಣದ ಹಿಂದೆ ದೊಡ್ಡ ರಾಜಕಾರಣಿಗಳ ನೆರಳು ಇರುವುದು ಕಾಣುತ್ತಿದೆ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ