Breaking News
Home / Uncategorized / ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ:ಪಿಯೂಷ್ ಗೋಯಲ್

ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ:ಪಿಯೂಷ್ ಗೋಯಲ್

Spread the love

ನವದೆಹಲಿ: ಭಾರತೀಯ ರೈಲ್ವೆ ಖಾಸಗೀಕರಣದ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದು, ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರೈಲ್ವೆಗಾಗಿ ಬಿಡುಗಡೆಯಾದ ಅನುದಾನ ಕುರಿತು ಸದಸ್ಯರು ಕೇಳಿದ ಪ್ರಶ್ನೆಗೆ ಚರ್ಚೆವೇಳೆ ಉತ್ತರಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಹೂಡಿಕೆಯನ್ನು ಹೆಚ್ಚಿಸಿದೆ. 2019-20ರ ಆರ್ಥಿಕ ವರ್ಷದಲ್ಲಿ 1.5 ಲಕ್ಷ ಕೋಟಿ ಇದ್ದ ಹೂಡಿಕೆ 2021-22ರ ಹಣಕಾಸು ವರ್ಷದಲ್ಲಿ 2.15 ಲಕ್ಷ ಕೋಟಿಗೆ ಹೆಚ್ಚಿಸಿದೆ. ಅಂತೆಯೇ ಭಾರತೀಯ ರೈಲ್ವೇ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ರೈಲ್ವೆ ಅಪಘಾತದಿಂದಾಗಿ ಯಾವುದೇ ಪ್ರಯಾಣಿಕರ ಸಾವು ಸಂಭವಿಸಿಲ್ಲ ಎಂದು ಹೇಳಿದರು.

ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ದೇಶವು ಹೆಚ್ಚಿನ ಬೆಳವಣಿಗೆಯತ್ತ ಸಾಗಬಹುದು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂಬುವುದು ಸತ್ಯ. ಆದರೆ ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯನ ಆಸ್ತಿಯಾಗಿದೆ. ಹಾಗೂ ಇದು ಹಾಗೆಯೇ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ. ಪ್ರಮೋದ್ ಮುತಾಲಿಕ್

Spread the love ಹುಣಸೂರು: ಜಿಹಾದಿ ಸಂಸ್ಕೃತಿ ಇರುವ ಕಡೆಗಳಲ್ಲಿ ಹಿಂದೂ ಯುವಕರ ಕೊಲೆ. ಆತ್ಮಹತ್ಯೆಗೆ ಪ್ರಚೋದನೆ ನಡೆಯುತ್ತಲೇ ಇರುತ್ತದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ