Breaking News

ಸರ್ಕಾರಿ ಕಚೇರಿಯ ಮುಂದೆಯೇ ವ್ಯಕ್ತಿಯ ಭೀಕರ ಕೊಲೆ…!

Spread the love

ಗದಗ: ಯುವಕನೋರ್ವ ಅಶ್ಲೀಲವಾಗಿ ಬೈದಾಡುತ್ತಿದ್ದ ಸಂಬಂಧಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಬೆಟಗೇರಿಯ ಕುರಹಟ್ಟಿ ಪೇಟೆನಲ್ಲಿ ನಡೆದಿದೆ.

ಕುರಹಟ್ಟಿ ಪೇಟೆ ನಿವಾಸಿ ಪ್ರವೀಣ್ ಗದುಗಿನ (23) ಕೊಲೆಗೈದ ಯುವಕ. ಪ್ರವೀಣ್ ತನ್ನ ಸಂಬಂಧಿಯಾದ ಮಂಜುನಾಥ್ ಗದುಗಿನ (44)ನನ್ನು ಕೊಲೆ ಮಾಡಿದ್ದಾನೆ. ಮಂಜುನಾಥ್ ಆಗಾಗ ಪ್ರವೀಣ್ ಮನೆ ಬಳಿ ಬಂದು ಅಶ್ಲೀಲವಾಗಿ ಬೈದಾಡುತ್ತಿದ್ದ. ಮಂಗಳವಾರ ರಾತ್ರಿ ಸಹ ಮಂಜುನಾಥ್ ಬೈದಾಡುತ್ತಿದ್ದ. ಇದರಿಂದ ಕೋಪಗೊಂಡ ಪ್ರವೀಣ್ ಆತನ ಕುತ್ತಿಗೆಗೆ ಚಾಕು ಹಾಕಿ ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ಬೆಟಗೇರಿ ನಾಡ ಕಾರ್ಯಾಲಯ ಬಳಿ ಈ ಭೀಕರ ಹತ್ಯೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಬೆಟಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಟಗೇರಿ ಠಾಣೆ ಪೊಲೀಸರು ನಾಪತ್ತೆಯಾದ ಆರೋಪಿಗೆ ಬಲೆ ಬೀಸಿದ್ದಾರೆ


Spread the love

About Laxminews 24x7

Check Also

ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ

Spread the loveದೇವನಹಳ್ಳಿ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಆದ ಶ್ರೀ ಪ್ರಸಾದ್ ಕುಮಾರ್ ರವರ ಅಣ್ಣ ಶಾಮಣ್ಣನವರ ಪುತ್ರ, ನಮ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ