Breaking News
Home / ರಾಜ್ಯ / ಸಿಂಧಗಿ ಕ್ಷೇತ್ರವನ್ನು ತನ್ನತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಇದಕ್ಕಾಗಿ ರಣತಂತ್ರ ಹೆಣೆಯಲು ಇಬ್ಬರು ಉಪಮುಖ್ಯಮಂತ್ರಿಗಳೂ ಸೇರಿದಂತೆ ಐವರು ಸಚಿವರನ್ನು ನಿಯೋಜಿಸಿದೆ.

ಸಿಂಧಗಿ ಕ್ಷೇತ್ರವನ್ನು ತನ್ನತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಇದಕ್ಕಾಗಿ ರಣತಂತ್ರ ಹೆಣೆಯಲು ಇಬ್ಬರು ಉಪಮುಖ್ಯಮಂತ್ರಿಗಳೂ ಸೇರಿದಂತೆ ಐವರು ಸಚಿವರನ್ನು ನಿಯೋಜಿಸಿದೆ.

Spread the love

ಬೆಂಗಳೂರು,ಮಾ.12- ಸಿಂಧಗಿ ಉಪಚುನಾವಣೆ ಸನ್ನಿಹಿತವಾಗುತ್ತಿರು ವಂತೆಯೇ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ಜೆಡಿಎಸ್ ಶಾಸಕರಾಗಿದ್ದ ದಿವಂಗತ ಎಂ.ಸಿ.ಮನಗೂಳಿ ಯವರ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.

ಸಿಂಧಗಿ ಕ್ಷೇತ್ರವನ್ನು ತನ್ನತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಇದಕ್ಕಾಗಿ ರಣತಂತ್ರ ಹೆಣೆಯಲು ಇಬ್ಬರು ಉಪಮುಖ್ಯಮಂತ್ರಿಗಳೂ ಸೇರಿದಂತೆ ಐವರು ಸಚಿವರನ್ನು ನಿಯೋಜಿಸಿದೆ. ಪ್ರಮುಖವಾಗಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ ಮತ್ತು ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಸಿ.ಸಿ.ಪಾಟೀಲ್‍ರನ್ನು ನಿಯೋಜಿಸಲಾಗಿದೆ.ಅಲ್ಲದೆ ಸಂಸದ ರಮೇಶ್ ಜಿಗಜಿಣಗಿ, ಎಂಎಲ್‍ಸಿ ಅರುಣ್ ಶಹಾಪುರ ಮತ್ತು ಚಂದ್ರಶೇಖರ್ ಕವಟಗಿ ಅವರಿಗೆ ಚುನಾವಣೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹೈಕಮಾಂಡ್‍ನ ಈ ನಡೆ ಉಪಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ ಎಂಬುದರ ಸೂಚನೆಯಾಗಿದೆ. ಸಿಂಧÀಗಿ ಉಪ ಚುನಾವಣೆಯ ಫಲಿತಾಂಶದಿಂದ ಹಾಲಿ ಸರ್ಕಾರಕ್ಕೆ ಯಾವುದೇ ರೀತಿಯ ಹಾನಿಯಿಲ್ಲ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ