Breaking News
Home / Uncategorized / ಕಿವಿ ಕೇಳದೇ-ಮಾತೂ ಬಾರದೇ ಪಾಕ್​ನಲ್ಲಿ ಸಿಲುಕಿದ್ದ ಗೀತಾ; ಕೊನೆಗೂ ತಾಯಿ ಮಡಿಲು ಸೇರಿದ್ರು

ಕಿವಿ ಕೇಳದೇ-ಮಾತೂ ಬಾರದೇ ಪಾಕ್​ನಲ್ಲಿ ಸಿಲುಕಿದ್ದ ಗೀತಾ; ಕೊನೆಗೂ ತಾಯಿ ಮಡಿಲು ಸೇರಿದ್ರು

Spread the love

2015ರಲ್ಲಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಸಿನಿಮಾದ ಮುನ್ನಿ ಕ್ಯಾರೆಕ್ಟರ್​ಗೆ ಇಡೀ ದೇಶವೇ ಸಲಾಂ ಹೊಡೆದಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಅದಕ್ಕಿಂತ ಹೆಚ್ಚು ಸದ್ದು ಮಾಡಿದ್ದು, ಭಾರತದಿಂದ ಆಕಸ್ಮಿವಾಗಿ ಪಾಕ್ ಸೇರಿ ಅಲ್ಲಿನ ಎನ್​ಜಿಓ ಒಂದರಲ್ಲಿ ರಕ್ಷಣೆ ಪಡೆದಿದ್ದ ಗೀತಾ ಎಂಬ ಹೆಸರಿನ ರಿಯಲ್ ಮುನ್ನಿ. ಈಕೆಗೆ ನಿಜವಾದ ಭಾಯಿಜಾನ್ ಆಗಿದ್ದು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್.

ಪಾಕಿಸ್ತಾನದಲ್ಲಿದ್ದ ಕಿವುಡ ಮತ್ತು ಮಾತು ಬಾರದ ಗೀತಾ ಎಂಬ ಹುಡುಗಿಯನ್ನ ಅಕ್ಟೋಬರ್ 26, 2015 ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು, ರಕ್ಷಣೆ ಮಾಡಿ ಭಾರತಕ್ಕೆ ಕರೆ ತರುವಲ್ಲಿ ಸಫಲರಾಗಿದ್ದರು. ತಾನು ಭಾರತೀಯಳು ಅಂತಾ ತನ್ನದೇ ಭಾಷೆಯಲ್ಲಿ ಅಭಿವ್ಯಕ್ತಪಡಿಸುತ್ತಿದ್ದ ಗೀತಾ, ತಾಯ್ನಾಡಿಗೆ ಮರಳಿದ್ದರೂ, ಹೆತ್ತವರು ಸಿಕ್ಕಿರಲಿಲ್ಲ. ಲೇಟೆಸ್ಟ್ ಹಾಗೂ ಗುಡ್​ನ್ಯೂಸ್ ಏನಂದರೆ ಇದೀಗ ಈ ಗೀತಾಳ ಫ್ಯಾಮಿಲಿ ಸಿಕ್ಕಿದೆ. ಅಂದ್ಹಾಗೆ ಈಕೆಯ ನಿಜವಾದ ಹೆಸರು ರಾಧಾ ವಾಗ್ಮೋರೆ ಎಂದು ತಿಳಿದುಬಂದಿದೆ.

ಪಾಕ್​ನಿಂದ ಭಾರತಕ್ಕೆ ಮರಳಿದ್ದ ಗೀತಾಳನ್ನ ಇಂದೋರ್​ ಮೂಲದ ಎನ್​ಜಿಒ ಸಂಸ್ಥೆಯೊಂದು ಕಳೆದ ಐದು ವರ್ಷದಿಂದ ರಕ್ಷಣೆ ನೀಡಿತ್ತು. ಇದೀಗ ಮಹಾರಾಷ್ಟ್ರದಲ್ಲಿರುವ ಗೀತಾಳ ತಾಯಿ ಸಿಕ್ಕಿದ್ದಾರೆ. ಮಹಾರಾಷ್ಟ್ರದ ಪ್ರಭ್ನಿ ಗ್ರಾಮದಲ್ಲಿ ಗೀತಾಳ ಅಮ್ಮ ವಾಸವಿದ್ದಾರೆ. ಡಿಎನ್​ಎ ಪರೀಕ್ಷೆಯಲ್ಲಿ ತಾಯಿ-ಮಗಳಿಬ್ಬರು ಹೌದು ಅಂತಾ ದೃಢಪಟ್ಟಿದೆ. ಅಲ್ಲದೇ ಗೀತಾ ಕೂಡ ಈಕೆಯೆ ತನ್ನ ಅಮ್ಮಾ ಎಂದು ಗುರುತಿಸಿದ್ದಾಳೆ. ಆದರೆ ಗೀತಾಳ ತಂದೆ ನಿಧನ ಹಿನ್ನೆಲೆಯಲ್ಲಿ ಈಕೆ ಮರುಮದುವೆ ಆಗಿದ್ದಾಳೆ ಅಂತಾ ಹೇಳಲಾಗಿದೆ. ಅಂದ್ಹಾಗೆ ಗೀತಾರ ತಾಯಿ ಹೆಸರು ಮೀನಾ, ತಂದೆಯ ಹೆಸರು ಸುಧಾಕರ್ ವಾಗ್ಮೋರೆ ಎಂದಾಗಿದೆ.

ಮಾತು ಬಾರ, ಕಿವಿ ಕೇಳದ ಹಿನ್ನೆಲೆಯಲ್ಲಿ ಗೀತಾಳ ಕುಟುಂಬ ಹುಡುಕಲು ತುಂಬಾ ಕಷ್ಟದ ಕೆಲಸವಾಗಿತ್ತು. ಸರಿ ಸುಮಾರು 5 ವರ್ಷಗಳಿಂದ ಗೀತಾರ ಫ್ಯಾಮಿಲಿ ಹುಡುಕಾಟ ನಡೆದಿತ್ತು. ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಶೋಧ ನಡೆಸಲಾಗಿತ್ತು.

ಪಹಲ್ ಎಂಬ ಎನ್​ಜಿಒನ ಅಧಿಕಾರಿ ಆನಂದ್ ನೀಡಿರುವ ಮಾಹಿತಿ ಪ್ರಕಾರ.. ಜುಲೈ 20, 2020 ರಲ್ಲಿ ಗೀತಾರನ್ನ ಇಂದೋರ್​ ಮೂಲದ ಎನ್​ಜಿಒ ಆನಂದ್ ಸರ್ವೀಸ್ ಸೊಸೈಟಿಗೆ ಹಸ್ತಾಂತರ ಮಾಡಲಾಗಿತ್ತು. ಗೀತಾಳ ಕುಟುಂಬದ ಹುಡುಕಾಟದಲ್ಲಿದ್ದ ಎನ್​ಜಿಒ ಕಳೆದ ಡಿಸೆಂಬರ್​ನಲ್ಲಿ ಪ್ರಭ್ನಿ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮೀನಾ ಅವರು ತಮ್ಮ ಮಗಳು ಕಾಣೆಯಾಗಿರೋದ್ರ ಬಗ್ಗೆ ಎನ್​​ಜಿಒ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದರು. ಸದ್ಯ ಗೀತಾರನ್ನ ತನ್ನ ಮೂಲ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಕಸ್ಮಿಕವಾಗಿ ಪಾಕ್​ಗೆ ತೆರಳಿದ್ದ ಬಾಲಕಿಗೆ ಈಧಿ ಫೌಂಡೇಷನ್ ಆಕೆಯನ್ನ ರಕ್ಷಣೆ ಮಾಡಿ ಗೀತಾ ಎಂದು ಹೆಸರಿಟ್ಟಿತ್ತು. ಇದೇ ಹೆಸರಿನಿಂದಲೇ ಗೀತಾ ಖ್ಯಾತಿ ಗಳಿಸಿದ್ದಳು. ಪಾಕಿಸ್ತಾನದ ಕರಾಚಿನ ರೈಲ್ವೆ ನಿಲ್ದಾಣದಲ್ಲಿ ಒಂಟಿಯಾಗಿ ಸಿಕ್ಕಾಗಿ ಗೀತಾಗೆ 12 ವರ್ಷಗಳಾಗಿತ್ತು. ಸುಮಾರು 12 ವರ್ಷಗಳ ಬಳಿಕ ತಾಯ್ನಾಡಿಗೆ ಗೀತಾ ಮರಳಿದ್ದಳು. ಭಾರತಕ್ಕೆ ಮರಳಿ, ಐದು ವರ್ಷಗಳ ಬಳಿಕ ಗೀತಾ ಮತ್ತೆ ಹೆತ್ತವರ ಮಡಿಲು ಸೇರಿಕೊಂಡಿದ್ದಾಳೆ.


Spread the love

About Laxminews 24x7

Check Also

ನೀರಿಲ್ಲದಿದ್ದರೇನು..? ಬಿಯರ್ ಇದೆಯಲ್ಲ.. : ಬೆಂಗಳೂರಲ್ಲಿ ಬಿಯರ್‌ಗೆ ಫುಲ್ ಡಿಮ್ಯಾಂಡ್!

Spread the loveಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ಹೆಚ್ಚಾಗುತ್ತಿದ್ದು, ಬಿಯರ್‌ಗೂ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ