Breaking News
Home / ರಾಜ್ಯ / ಎಸ್‌ಎಸ್‌ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಸಚಿವ ಎಸ್ . ಸುರೇಶ್ ಕುಮಾರ್

ಎಸ್‌ಎಸ್‌ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಸಚಿವ ಎಸ್ . ಸುರೇಶ್ ಕುಮಾರ್

Spread the love

ಧಾರವಾಡ : ಜೂನ್ 21 ರಿಂದ ಜುಲೈ 5 ರವರೆಗೆ ಎಸ್‌ಎಸ್‌ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ಈಗಾಗಲೇ ತಿಳಿಸಿದ್ದರು. ಇದೀಗ ಮತ್ತೆ ಅದರ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಒಂದು ತಿಂಗಳ ಹಿಂದೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು . ವೇಳಾಪಟ್ಟಿಗೆ ಯಾರಿಂದಲೂ ಆಕ್ಷೇಪಣೆ ಬಂದಿಲ್ಲ . ಹೀಗಾಗಿ ಜೂನ್ 21 ರಿಂದ ಪರೀಕ್ಷೆ ನಡೆಯುತ್ತದೆ ಎಂದು ತಿಳಿಸಿದರು.

ಒಂದು ವಿಷಯಕ್ಕೆ ಒಂದು ದಿನ ವಿರಾಮ ಇರುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಜೂನ್ 21 – ಪ್ರಥಮ ಭಾಷೆಗಳಾದ ಕನ್ನಡ , ತೆಲುಗು , ಹಿಂದಿ , ಮರಾಠಿ , ತಮಿಳು , ಉರ್ದು , ಇಂಗ್ಲಿಷ್ , ಸಂಸ್ಕೃತ , ಜೂ . 24 -ಗಣಿತ ಜೂ . 28 -ವಿಜ್ಞಾನ , ಜೂ . 30 -ತೃತೀಯ ಭಾಷೆಗಳಾದ ಹಿಂದಿ , ಕನ್ನಡ , ಇಂಗ್ಲಿಷ್ , ಅರೆಬಿಕ್ , ಪರ್ಷಿಯನ್ , ಉರ್ದು , ಸಂಸ್ಕೃತ , ಕೊಂಕಣಿ , ತುಳುಜುಲೈ 2 – ದ್ವಿತೀಯ ಭಾಷೆ ಇಂಗ್ಲಿಷ್ / ಕನ್ನಡ , ಜು . 5- ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಇನ್ನೊಮ್ಮೆ ಸಚಿವ ವೇಳಾಪಟ್ಟಿಯನ್ನು ತಿಳಿಸಿದರು.

ಅದರೊಂದಿಗೆ ಕಾಲೇಜು ಪುನರಾರಂಭದ ಕುರಿತು ಮಾತನಾಡಿದ ಅವರು, ಪರೀಕ್ಷೆ ಜುಲೈ 5 ರಂದು ಮುಕ್ತಾಯಗೊಳ್ಳಲಿದ್ದು , ಜುಲೈ 15 ರಿಂದ ಈ ಬಾರಿಯ ಅಂದರೆ 2021-2022ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಇನ್ನು 1 ರಿಂದ 5 ನೇ ತರಗತಿ ಆರಂಭ ಮಾಡುವ ವಿಚಾರಕ್ಕೆ ಸಂಬಂಧಿಸಿ , ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಮತ್ತೇ ಕೊರೋನಾ ಹೆಚ್ಚಾಗುತ್ತಿದೆ . ನಮ್ಮ ರಾಜ್ಯದಲ್ಲಿ ದಿನಕ್ಕೆ 300 ಇದ್ದ ಕೇಸ್ ಈಗ 500 ದಾಟಿದೆ . ಕೇರಳ ಮತ್ತು ಮಹಾರಾಷ್ಟ್ರದಲ್ಲೂ ಪ್ರಮಾಣ ಹೆಚ್ಚಾಗಿದೆ . ಹೀಗಾಗಿ ಇನ್ನೊಂದು ವಾರ ಕಾದು ನೋಡುತ್ತೇವೆ ಎಂದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ