Breaking News
Home / ರಾಜ್ಯ / ಹಣ ನೀಡದಕ್ಕಾಗಿ ಸ್ಕೆಚ್:ಮುಬಾರಕ್ ಬೆಳಗಾವಿ ಜೈಲು ಪಾಲಾಗುತ್ತಾನೆ

ಹಣ ನೀಡದಕ್ಕಾಗಿ ಸ್ಕೆಚ್:ಮುಬಾರಕ್ ಬೆಳಗಾವಿ ಜೈಲು ಪಾಲಾಗುತ್ತಾನೆ

Spread the love

ನೆಲಮಂಗಲ (ಫೆಬ್ರವರಿ 28): ಒಂದು ಕಾಲದಲ್ಲಿ ಬಾಯ್ ಬಾಯ್ ಅಂತಿದ್ದ ಇಬ್ಬರು ಸ್ನೇಹಿತರ ನಡುವೆ ಶುರುವಾಯಿತು ವೈಮನಸ್ಸು ಶುರುವಾಗಿ ದ್ವೇಷ ಕಟ್ಟಿಕೊಂಡು ಮಚ್ಚು ಮಸಿಯುತ್ತಿದ್ದಾರೆ, ಕೊಲೆ ಪ್ರಕರಣದ ಅಪರಾದಿ ಗ್ರಾಮ ಪಂಚಾಯ್ತಿ ಸದಸ್ಯನ ಹತ್ಯೆಗೆ ಜೈಲಿನಲ್ಲಿದ್ದುಕೊಂಡು ಸಂಚು ರೂಪಿಸಿದ್ದಾನೆ. ಪ್ಲಾನ್ ಎಲ್ಲಾ ರೆಡಿಯಾಗಿ ಇನ್ನೇನು ಅಂದುಕೊಂಡಂತೆ ಮುಗಿಸಬೇಕು ಎನ್ನೋವಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಸ್ಕೆಚ್ ಮಿಸ್ ಆಗಿ ಹೋಯ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಣೇಗೌಡಣಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸಲೀಂ ಪಾಷ ಹತ್ಯೆಗೆ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟಿದ್ದ ಮುಬಾರಕ್ ಪ್ಲಾನ್ ರೆಡಿ ಮಾಡಿದ್ದ. ಕೊಲೆ ಪ್ರಕರಣವೊಂದರಲ್ಲಿ ಬೆಳಗಾವಿ ಜೈಲಿನಲ್ಲಿದ್ದ ಮುಭಾರಕ್ ಇಸ್ಲಾಂಪುರ ನಿವಾಸಿ ಗ್ರಾಮ ಪಂಚಾಯ್ತಿ ಸದಸ್ಯ ಸಲೀಂ ಪಾಷ‌ನನ್ನ ಮುಗಿಸಲು ತನ್ನ ಶಿಷ್ಯ ಇರ್ಫಾನ್‌ಗೆ ಸುಪಾರಿ ಕೊಟ್ಟಿದ್ದ, ಅಂದುಕೊಂಡಂತೆ ಎಲ್ಲಾ ಆಗಿದ್ದದ್ದರೆ ಗ್ರಾಮ ಪಂಚಾಯ್ತಿ ಸದಸ್ಯ ಸಲೀಂ ಕತೆ ನೆಲಮಂಗಲ ರಕ್ತ ಚರಿತ್ರೆಯ ಇತಿಹಾಸ ಪುಟ ಸೇರುತ್ತಿತ್ತು ಆದ್ರೆ ಅಂದುಕೊಂಡಿದ್ದು ಒಂದು ಆಗಿರೋದೆ ಮತ್ತೊಂದು. ಇದೇ ಫೆಬ್ರವರಿ 15ರ ತಡರಾತ್ರಿ ಇಸ್ಲಾಂಪುರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸಲೀಂ ಪಾಷ ಮೇಲೆ ಮೂರು ಜನರ ಗುಂಪು ಡೆಡ್ಲಿ ಅಟ್ಯಾಕ್‌ಗೆ ಮುಂದಾಗಿತ್ತು, ಆದ್ರೆ ಸಲೀಂ ಪಾಷ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ ಡೆಡ್ಲಿ ಅಟ್ಯಾಕ್‌ನಿಂದ ಸಲೀಂ ಬದುಕುಳಿದಿದ್ದ. ಕೊಲೆ ಪ್ರಕರಣ ಅಪರಾದಿ ಮುಬಾರಕ್:

2007ರಲ್ಲಿ ರಾಮನಗರ ನಗರಸಭೆ ಸದಸ್ಯ ಫಯಾಜ಼್ ಖಾನ್ ನಡುಬೀದಿಯಲ್ಲಿ ಬೀದಿ ಯಣವಾಗುತ್ತಾನೆ, ಆ ಪ್ರಕರಣದ ಎ 2 ಆರೋಪಿಯಾಗಿದ್ದ ಮುಬಾರಕ್‌ನ ಮೇಲಿದ್ದ ಆರೋಪ ಸಾಭೀತಾಗಿದ್ದರಿಂದ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಮುಬಾರಕ್‌ ಶಿಕ್ಷೆ ನೀಡುತ್ತದೆ. ನ್ಯಾಯಾಲಯದ ಆದೇಶದಂದೆ ಮುಬಾರಕ್ ಬೆಳಗಾವಿ ಜೈಲು ಪಾಲಾಗುತ್ತಾನೆ.ಹಣ ನೀಡದಕ್ಕಾಗಿ ಸ್ಕೆಚ್:

ಜೈಲಿನಲ್ಲಿದ್ದ ಮುಬಾರಕ್‌ಗೆ ಖರ್ಚಿಗೆ ಹಣ ಬೇಕಾಗಿದ್ದ ಕಾರಣ ತನ್ನೂರಿನ ಗ್ರಾಮ ಪಂಚಾಯ್ತಿ ಸದಸ್ಯ ಸಲೀಂ ಮೇಲೆ‌ ಕಣ್ಣು ಬೀಳುತ್ತೆ. ಕಳೆದ ಕೆಲ ವರ್ಶಗಳ ಹಿಂದೆ ಹೀರೋ ನಾನಲ್ಲ ಎನ್ನೋ ಚಿತ್ರ ಮಾಡಿ, ಒಮ್ಮೆ ತಾಲೂಕು ಪಂಚಾಯ್ತಿ ಸದಸ್ಯನಾಗಿ ಸಹ ಆಯ್ಕೆ ಆಗಿದ್ದ ಸಲೀಂ ಸದ್ಯ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾರೆ. ರಿಯಲ್ ಎಸ್ಟೇಟ್ ಸೇರಿದಂತೆ ಸಣ್ಣ ಪುಟ್ಟ ಉದ್ಯಮ ನಡೆಸುತ್ತಿದ್ದ ಸಲೀಂ ಬಳಿ ಮುಬಾರಕ್ ಹಣ ಕೇಳಿದ್ದಾನೆ. ನೋಡಪ್ಪ ನನ್ನತ್ರ ಈಗ ದುಡ್ಡಿಲ್ಲ, ಚುನಾವಣೆಗೆ ಎಲ್ಲಾ ಖಾಲಿ ಆಗಿದೆ ಇನ್ನೊಂದು ಸಲ ಯಾವಾಗ್ಲಾದ್ರು ಕೊಡ್ತಿನಿ ಅಂದಿದ್ದಕ್ಕೆ ಮುಬಾರಕ್ ಕೋಪಗೊಂಡು ತನ್ನ ಶಿಷ್ಯ ಇರ್ಫಾನ್ ಸುಫಾರಿ ಕೊಟ್ಟಿದ್ದಾನೆ.

ರಾಜಕೀಯದಿಂದ ಹಿನ್ನೆಲೆ:ಈ ಕೊಲೆ ಯತ್ನ ಪ್ರಕರಣದಲ್ಲಿ ರಾಜಕೀಯ ವಾಸನೆ ಸಹ ಬೀರುತ್ತಿದೆ, ಈ ಹಿಂದೆ ತಾಲೂಕು ಪಂಚಾಯ್ತಿ ಸದಸ್ಯನಾಗಿದ್ದ ಸಲೀಂ ಪಾಷ ಈ ಭಾರಿ ತನ್ನ ಊರದ ಇಸ್ಲಾಂ ಪುರ ವಾರ್ಡ್‌ನಿಂದ ಕಣೇಗೌಡನಹಳ್ಳಿ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸುತ್ತಾನೆ, ತಾನೂ ಸೇರಿದಂತೆ ತನ್ನ ಜೊತೆ ಇದ್ದ ಒಟ್ಟು 8 ಜನ ಸದಸ್ಯರನ್ನ ಗೆಲ್ಲಿಸಿಕೊಳ್ಳುವ ಮೂಲಕ ಇಡೀ ಗ್ರಾಮದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ ಸಲೀಂ ಪಾಷ. ಸದ್ಯ ಆರೋಪಿ ಸ್ಥಾನದಲ್ಲಿರುವ ಮುಬಾರಕ್ ಸಂಬಂಧಿಯೊಬ್ಬರು ಈ ಚುನಾವಣೆಯಲ್ಲಿ ಪರಾಭಗೊಂಡಿದ್ದು ಕೆಲ ದಿನಗಳ ಹಿಂದೆ ಸಲೀಂ ಹಾಗೂ ಮುಬಾರಕ್ ಸಂಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತಂತೆ, ಈಗಾಗಿ ಉದ್ರಿಕ್ತಗೊಂಡ ಮುಬಾರಕ್ ತನ್ನ ಶಿಷ್ಯ ಇರ್ಫಾನ್‌ಗೆ ಸುಪಾರಿ ಕೊಟ್ಟಿದ್ದಾನೆ ಎನ್ನಲಾಗಿದೆ.

: ಸರ್ಕಾರಿ ಶಾಲೆ ಆವರಣದೊಳಗೆ ಎಣ್ಣೆ ಪಾರ್ಟಿ; ಓರ್ವ ಶಿಕ್ಷಕ ಸೇರಿ ಇಬ್ಬರು ಸಿಬ್ಬಂದಿ ಅಮಾನತು: ವಿಡಿಯೋ ವೈರಲ್

ಮೂರು ಜನರಿಂದ ಅಟ್ಯಾಕ್:

ಫೆಬ್ರವರಿ 15ರ ರಾತ್ರಿಯ ನಮಾಜ್ ಮುಗಿಸಿಕೊಂಡು ಸಲೀಂ ಪಾಷ ಮನೆಗೆ ಬರುತ್ತಿದ್ದ ವೇಳೆ ಇರ್ಫಾನ್ ತನ್ನ ಸ್ನೇಹಿತರಾದ ಚೋಟು ಹಾಗೂ ಮತ್ತೋರ್ವನೊಂದಿಗೆ ಸೇರಿ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಆದ್ರೆ ಅಂದು ಸಲೀಂ ಮಿಸ್ ಆಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿ ಇಮ್ರಾನ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮುಬಾರಕ್ ಜೈಲಿನಲ್ಲಿದ್ದುಕೊಂಡೆ ಸುಫಾರಿ ಕೊಟ್ಟಿರೋದಾಗ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.

ಇಬ್ಬರು ಎಸ್ಕೇಪ್:

ಸದ್ಯ ವಾರೆಂಟ್ ಪಡೆದು ಮುಬಾರಕ್‌ನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇಮ್ರಾನ್ ಈಗಾಗಲೆ ಪೊಲೀಸರ ವಶದಲ್ಲಿದ್ದು ಇಮ್ರಾನ್ ಸ್ನೇಹಿತ ಚೋಟು ಹಾಗೂ ಮತ್ತೊಬ್ಬ ಎಸ್ಕೇಪ್ ಆಗಿದ್ದು ಆರೋಪಿಗ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ