Home / ಜಿಲ್ಲೆ / ಬೆಂಗಳೂರು / 2021ರ ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮ’ಗಳು ಪ್ರಕಟ : ಹೀಗಿದೆ ಸರ್ಕಾರಿ ನೌಕರರ ‘ನೂತನ ನಡೆತೆ ನಿಯಮಾವಳಿ’ಗಳು

2021ರ ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮ’ಗಳು ಪ್ರಕಟ : ಹೀಗಿದೆ ಸರ್ಕಾರಿ ನೌಕರರ ‘ನೂತನ ನಡೆತೆ ನಿಯಮಾವಳಿ’ಗಳು

Spread the love

ಬೆಂಗಳೂರು : ರಾಜ್ಯ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆಯು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು-2021 ಪ್ರಕಟಗೊಳಿಸಿದೆ. ಇಂತಹ ನಡತೆಯ ನಿಯಮಗಳಲ್ಲಿ ಸರ್ಕಾರಿ ನೌಕರನ ಕುಟುಂಬ ಸದಸ್ಯರು ಎಂದರೆ?, ಸಂಘ/ ಸಂಸ್ಥೆಗಳಿಗೆ ಸೇರಿಕೊಳ್ಳುವುದು, ಚುನಾವಣೆಗೆ ಸ್ಪರ್ಧೆಯ ಸಂದರ್ಭದಲ್ಲಿ ಹೇಗಿರಬೇಕು, ಸಮೂಹ ಮಾಧ್ಯಮಗಳೊಂದಿಗೆ ಸಂಪರ್ಕ, ಪುಸ್ತಕ, ಲೇಖನಗಳ ಪ್ರಕಟಣೆಗೊಳಿಸುವ ಮೊದಲು ಯಾವೆಲ್ಲಾ ನಿಯಮ ಪಾಲಿಸಬೇಕು ಸೇರಿದಂತೆ ವಿವಿಧ ನೂತನ ತಿದ್ದುಪಡಿಗಳ ನಡತೆಯ ನಿಯಮ ಪ್ರಕಟಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರ್ನಾಟಕ ರಾಜ್ಯ ಪತ್ರದ ಮೂಲಕ ಅಧಿಸೂಚನೆ ಹೊರಡಿಸಿದ್ದು, ಪ್ರತಿಯೊಬ್ಬ ಸರ್ಕಾರಿ ನೌಕರರನು ಸಂಪೂರ್ಣವಾಗಿ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು, ಪ್ರತಿಯೊಬ್ಬ ಸರ್ಕಾರಿ ನೌಕರನು ಉನ್ನತ ನೈತಿಕ ಆದರ್ಶಗಳನ್ನು ಹೊಂದಿರತಕ್ಕದ್ದು, ರಾಜಕೀಯವಾಗಿ ತಟಸ್ಥನಾಗಿರತಕ್ಕದ್ದು ಎಂಬುದಾಗಿ ತಿಳಿಸಿದೆ.

ಇನ್ನೂ ಮುಂದುವರೆದು,ಯಾರೇ ಸರ್ಕಾರಿ ನೌಕರನು ಯಾವುದೇ ಕಂಪನಿಯಲ್ಲಿ ಅಥವಾ ಫಾರ್ಮ್ ನಲ್ಲಿ ಅಥವಾ ಸಂಸ್ಥೆಯಲ್ಲಿ ತನ್ನ ಕುಟುಂಬದ ಯಾರೇ ಸದಸ್ಯನಿಗೆ ಉದ್ಯೋಗವನ್ನು ದೊರಕಿಸಿಕೊಡಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ಥಾನವನ್ನು ಅಥವಾ ಪ್ರಭಾವವನ್ನು ಬಳಸತಕ್ಕದ್ದಲ್ಲ ಎಂಬುದಾಗಿ ತಿಳಿಸಿದೆ.

ಇದಲ್ಲದೇ ಯಾರೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂತ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ. ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ. ಅದರ ಸಹಾಯಾರ್ಥ ವಂತಿಕೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ಹೇಳಿದೆ.

ಸರ್ಕಾರಿ ನೌಕರನು ಕ್ರೀಡಾ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಾಗ, ಸರ್ಕಾರಿ ನೌಕರನು ಸಂಘ-ಸಂಸ್ಥೆಗೆ ಸೇರಿಕೊಳ್ಳುವಾಗ, ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು ಬಿಡ್ಡು ಹೋಗುವಾಗ ಮತ್ತು ಖಾಸಗಿ ವಿದೇಶ ಪ್ರವಾಸ ಕೈಗೊಳ್ಳುವಾಗ ಅನುಸರಿಸಬೇಕಾದ ನಿಯಮಾವಳಿಗಳು ಏನು ಎನ್ನುವ ಬಗ್ಗೆ ಹೇಳಲಾಗಿದೆ.

ಇದಲ್ಲದೇ, ವಂತಿಗೆ, ಉಡುಗೊರೆ, ಗೌರವಾರ್ಥ ಸಮಾರಂಭದಲ್ಲಿ ಹೇಗೆ ನಡೆದುಕೊಳ್ಳಬೇಕು. ಖಾಸಗಿ ವ್ಯಾಪಾರ & ಉದ್ಯೋಗ ಕೈಗೊಳ್ಳಬೇಕೇ ಬೇಡವೇ, ಸರಕಾರಿ ನೌಕರನ ಸಾಮಾನ್ಯ ತತ್ವಗಳೇನು.? ಕುಟುಂಬದ ಸದಸ್ಯರಿಗೆ ಉದ್ಯೋಗ ಕುರಿತಾಗಿ ಹೇಗೆ ನಡೆದುಕೊಳ್ಳಬೇಕು. ರಾಜಕೀಯ& ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ, ಬಹಿರಂಗ ಸಭೆ & ಮುಷ್ಕರಗಳ ಬಗ್ಗೆ, ಸರಕಾರದ ಕ್ರಮ/ ನೀತಿ ಯ ಬಗ್ಗೆ ಟೀಕೆ, ತಾನೇ ಅಥವಾ ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ಟ್ಯೂಷನ್, ಟ್ಯುಟೋರಿಯಲ್ ನಡೆಸದಿರುವ ಬಗ್ಗೆ ನಿಯಮಗಳೇನು, ಬಡ್ಡಿ ವ್ಯವಹಾರದ ಕುರಿತು ಸೇರಿದಂತೆ ಇತರೆ ಹಲವು ಎಲ್ಲ ಮಾಹಿತಿಯನ್ನು ಒಳಗೊಂಡ ಸರಕಾರಿ ನೌಕರರ ನಡತೆಗಳ ನಿಯಮಗಳನ್ನು ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವರದಿ : ವಸಂತ ಬಿ ಈಶ್ವರಗೆರೆ

ಗೆಜೆಟ್ ಅಧಿಸೂಚನೆ ಡೌನ್ ಲೋಡ್ ಮಾಡಿಕೊಂಡು ಸರ್ಕಾರಿ ನೌಕರರು, ಸರ್ಕಾರಿ ನೌಕರರ ನಡತೆ-ನಿಯಮಗಳೇನು ಎನ್ನುವ ಬಗ್ಗೆ ತಿಳಿಯಲು, ಈ ಕೆಳಕಂಡ ಲಿಂಕ್ , ಡೌನ್ ಲೋಡ್ ಮಾಡಿಕೊಳ್ಳಿ.

https://dpar.karnataka.gov.in/new-page/Conduct-rules%201966/kn


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ