Breaking News

ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ರೌಡಿಯೊಬ್ಬ ಫೋನ್ ಮಾಡಿ ಧಮಕಿ ಖಾಕಿ ಪಡೆ ಹಿಂಡಲಗಾ ಜೈಲಿನ ಮೇಲೆ ಧಿಡೀರ್ ದಾಳಿ

Spread the love

ಬೆಳಗಾವಿ- ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ರೌಡಿಯೊಬ್ಬ ಫೋನ್ ಮಾಡಿ ಧಮಕಿ ಹಾಕಿದ ಬೆನ್ನಲ್ಲಿಯೇ ಬೆಳಗಾವಿ ಖಾಕಿ ಪಡೆ ಹಿಂಡಲಗಾ ಜೈಲಿನ ಮೇಲೆ ಧಿಡೀರ್ ದಾಳಿ ಮಾಡಿ,ಸುಮಾರು ಐವತ್ತಕ್ಕೂ ಹೆಚ್ಚು ಪೋಲೀಸರು ಜೈಲಿನಲ್ಲಿ ಶೋಧ ಮಾಡಿದಾಗ ಸಿಕ್ಕಿದ್ದು ಒಂದೇ ಒಂದು ಮೋಬೈಲ್…

ಯಾಕಂದ್ರೆ ಹಿಂಡಲಗಾ ಜೈಲಿನಲ್ಲಿದ್ದ ರೌಡಿಯೊಬ್ಬ ಫೋನ್ ಮಾಡಿದ್ದು ಹೇಗೆ,ಜೈಲಿನಲ್ಲಿ ಫೋನ್ ಬಂದಿದ್ದು ಎಲ್ಲಿಂದ ಎಂದು ಮಾದ್ಯಗಳು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಹಿಂಡಲಗಾ ಜೈಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಧಾರಿಸಿಕೊಂಡ ಸಂಧರ್ಭದಲ್ಲಿಯೇ ಬೆಳಗಾವಿ ಪೋಲೀಸರು ದಾಳಿ ಮಾಡಿದ್ದರಿಂದ ಪೋಲೀಸರ ಕೈಗೆ ಕೇವಲ ಒಂದು ಮೋಬೈಲ್ ಮಾತ್ರ ಸಿಕ್ಕಿದೆ.

ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ವಿಕ್ರಂ ಅಮಟೆ ನೇತ್ರತ್ವದಲ್ಲಿ ಡಿಸಿಪಿ 2, ಎಸಿಪಿ 2, ಪಿಐ 8, ಪಿಎಸ್ಐ 8 ಮತ್ತು ಸಿಬ್ಬಂದಿ 55, ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಿರು. ಕಾರ್ಯಾಚರಣೆಯಲ್ಲಿ ಒಂದು ಮೊಬೈಲ್‌ ದೊರತಿದ್ದು, ಇದರ ಬಗ್ಗೆ ವಿಚಾರಾಣೆ ಮಾಡಲಾಗುತ್ತಿದೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ