Breaking News
Home / ರಾಜ್ಯ / IPL Auction 2021: ಐಪಿಎಲ್​ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹುದಾದ ದೇಶಿ-ವಿದೇಶಿ ಆಟಗಾರರು ಇವರೆ

IPL Auction 2021: ಐಪಿಎಲ್​ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹುದಾದ ದೇಶಿ-ವಿದೇಶಿ ಆಟಗಾರರು ಇವರೆ

Spread the love

ಚೆನ್ನೈ: ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದಂತಹ ಐಪಿಎಲ್​ 2020 ಕೊರೊನಾ ಸಾಂಕ್ರಾಮಿಕ ಮಹಾಮಾರಿಯ ನಡುವೆಯೂ ಭಾರಿ ಯಶಸ್ಸು ಪಡೆದಿತ್ತು. ಗ್ಯಾಲರಿಯಲ್ಲಿ ಪ್ರೇಕ್ಷಕರಿಲ್ಲದೆ ನಡೆದ ಸರಣಿಯಾದರೂ, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಾವುದೇ ರೀತಿಯಾಗಿ ಹಿಂದೇಟು ಹಾಕಲಿಲ್ಲ. ಹೀಗಾಗಿ ಐಪಿಎಲ್​ 2020 ಕ್ರಿಕೆಟ್​ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಐಪಿಎಲ್​ 2020 ಗಾಗಿ, 2019 ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಆಟಗಾರರು ನಿರೀಕ್ಷೆಗೂ ಮೀರಿದ ಹಣಕ್ಕೆ ಹರಾಜಾಗಿದ್ದರು. ಅಂತಹ ಟಾಪ್​ 10 ಆಟಗಾರರ ಮಾಹಿತಿ ಇಲ್ಲಿದೆ.

ಐಪಿಎಲ್​ 2020ಯಲ್ಲಿ ಅಧಿಕ ಮೊತ್ತ ಪಡೆದಿದ್ದ ಆಟಗಾರರು..

Name Team Price
ಪ್ಯಾಟ್ ಕಮ್ಮಿನ್ಸ್ ಕೋಲ್ಕತಾ ನೈಟ್ ರೈಡರ್ಸ್ 15.5 ಕೋಟಿ
ಗ್ಲೆನ್ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ 10.75 ಕೋಟಿ
ಕ್ರಿಸ್ ಮೋರಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಕೋಟಿ
ಶೆಲ್ಡನ್ ಕಾಟ್ರೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ 8.5 ಕೋಟಿ
ನಾಥನ್ ಕೌಲ್ಟರ್-ನೈಲ್ ಮುಂಬೈ ಇಂಡಿಯನ್ಸ್ 8 ಕೋಟಿ
ಶಿಮ್ರಾನ್ ಹೆಟ್ಮಿಯರ್ ಡೆಲ್ಲಿ ಕ್ಯಾಪಿಟಲ್ಸ್​ 7.75 ಕೋಟಿ
ಪಿಯೂಷ್ ಚಾವ್ಲಾ ಚೆನ್ನೈ ಸೂಪರ್ ಕಿಂಗ್ಸ್ 6.75 ಕೋಟಿ
ಸ್ಯಾಮ್ ಕುರ್ರನ್ ಚೆನ್ನೈ ಸೂಪರ್ ಕಿಂಗ್ಸ್ 5.5 ಕೋಟಿ
ಇಯೊನ್ ಮೋರ್ಗಾನ್ ಕೋಲ್ಕತಾ ನೈಟ್ ರೈಡರ್ಸ್ 5.25 ಕೋಟಿ
ಮಾರ್ಕಸ್ ಸ್ಟೋನಿಸ್ ಡೆಲ್ಲಿ ಕ್ಯಾಪಿಟಲ್ಸ್​ 4.8 ಕೋಟಿ

ಆದರೆ ಹರಾಜಿನಲ್ಲಿ ಅಧಿಕ ಬೆಲೆ ಪಡೆದರೂ, ಆಟಗಾರರು ಮಾತ್ರ ಹಣಕ್ಕೆ ತಕ್ಕಂತಹ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಧಿಕ ಮೊತ್ತ ಪಡೆದ ಪ್ಯಾಟ್​ ಕಮಿನ್ಸ್​ ಅಷ್ಟೇನೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಹೋದರು. ಕೆಲವೊಂದು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಜೊತೆಗೆ ಏಕಾಂಗಿ ಹೋರಾಟ ನಡೆಸಿ ಕೆಲವು ಪಂದ್ಯಗಳನ್ನು ಸಹ ಗೆಲ್ಲಿಸಿಕೊಟ್ಟರು. ಆದರೆ ಉಳಿದಂತೆ ಹಲವಾರು ಆಟಗಾರರು ಬೆಲೆಗೆ ತಕ್ಕಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಹಲವು ಫ್ರಾಂಚೈಸಿಗಳು ಅಂತಹವರನ್ನು ತಮ್ಮ ತಂಡದಿಂದ ಕೈಬಿಟ್ಟಿವೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ