Breaking News
Home / Uncategorized / ಮದ್ವೆಯಾದ 2 ತಿಂಗಳಲ್ಲಿ ಗಂಡನಿಂದಲೇ ಬಿ.ಟೆಕ್​ ವಿದ್ಯಾರ್ಥಿನಿ ಹತ್ಯೆ: ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪಾಲಕರು!

ಮದ್ವೆಯಾದ 2 ತಿಂಗಳಲ್ಲಿ ಗಂಡನಿಂದಲೇ ಬಿ.ಟೆಕ್​ ವಿದ್ಯಾರ್ಥಿನಿ ಹತ್ಯೆ: ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪಾಲಕರು!

Spread the love

ಖಮ್ಮಮ್: ತೆಲಂಗಾಣದ ಖಮ್ಮಮ್​ ಜಿಲ್ಲೆಯ ಪೆನುಬಲ್ಲಿ ವಲಯದ ನ್ಯೂ ಲಂಕಪಲ್ಲಿಯಲ್ಲಿ ಶುಕ್ರವಾರ (ಫೆ.5) ಪತಿಯಿಂದಲೇ ನಡೆದ ನವವಿವಾಹಿತೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಪತ್ನಿಯ ಕೊಲ್ಲುವ ನಿರ್ಧಾರದ ಹಿಂದೆ ಪತಿಯ ಅಕ್ರಮ ಸಂಬಂಧ ಕಾರಣ ಎಂದು ಬಹಿರಂಗವಾಗಿದೆ.

ನವ್ಯಾ ರೆಡ್ಡಿ (22) ಪತಿಯಿಂದಲೇ ಕೊಲೆಯಾದ ದುರ್ದೈವಿ. ಸಾಯಿ ಸ್ಫೂರ್ತಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್​ ವಿದ್ಯಾರ್ಥಿನಿಯಾಗಿದ್ದ ನವ್ಯಾ, ತುಂಬಾ ಕನಸು ಹೊತ್ತುಕೊಂಡು ಸಾಫ್ಟ್​ವೇರ್​ ಇಂಜಿನಿಯರ್​ ಉದ್ಯೋಗಿ ನಾಗಶೇಶು ರೆಡ್ಡಿ ಎಂಬಾತನನ್ನು ಕಳೆದ ಡಿಸೆಂಬರ್​ 9ರಂದು ವಿವಾಹವಾಗಿದ್ದಳು. ಆದರೆ, ಮದುವೆಯಾದ ಎರಡೇ ತಿಂಗಳಲ್ಲಿ ಕೈಹಿಡಿದ ಗಂಡನಿಂದಲೇ ನವ್ಯಾ ಕೊಲೆಯಾಗಿರುವುದು ದುರ್ದೈವದ ಸಂಗತಿ.

ಕಡಿವಾಣ ಬೀಳುವ ಆತಂಕ
ನಾಗಶೇಶು ಮುಂಬೈನಲ್ಲಿ ಸಾಫ್ಟ್​ವೇರ್​ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾದ ಬೆನ್ನಲ್ಲೇ ತನ್ನ ಗಂಡನಿಗೆ ಮತ್ತೊಬ್ಬ ಮಹಿಳೆಯಿಂದ ಸಾಕಷ್ಟು ಫೋನ್​ ಕರೆಗಳು ಬರುವುದನ್ನು ನೋಡಿ ನವ್ಯಾ ವಿಚಲಿತಗೊಂಡಿದ್ದಳು. ಅಲ್ಲದೆ, ಇದೇ ವಿಚಾರವಾಗಿ ನವದಂಪತಿ ನಡುವೆ ಮನಸ್ತಾಪವೂ ಉಂಟಾಗಿತ್ತು. ಎಲ್ಲಿ ಇದು ಹೀಗೆ ಮುಂದುವರಿದು ತನ್ನ ವಿವಾಹೇತರ ಸಂಬಂಧಕ್ಕೆ ಕಡಿವಾಣ ಬೀಳುತ್ತದೆಯೋ ಎಂಬ ದುರಾಲೋಚನೆಯಿಂದ ಪಾಪಿ ನಾಗಶೇಶು ಪತ್ನಿ ನವ್ಯಾಳನ್ನು ಕೊಲೆ ಮಾಡಲು ಸಂಚು ರೂಪಿಸುತ್ತಾನೆ.

ಮಾರ್ಗ ಮಧ್ಯೆಯೇ ಗೊತ್ತಿಲ್ಲದಂತೆಯೇ ಕೃತ್ಯವೆಸಗಿದ
ಬಿ.ಟೆಕ್​ ಓದುತ್ತಿದ್ದ ನವ್ಯಾ, ಫೆ.2ರಂದು ಕಾಲೇಜಿಗೆ ಹೋಗಲು ನಿರ್ಧರಿಸುತ್ತಾಳೆ. ಅದರಂತೆಯೇ ನಾಗಶೇಶು, ನವ್ಯಾಳನ್ನು ತನ್ನ ಸ್ಕೂಟರ್​ನಲ್ಲಿ ಕರೆದುಕೊಂಡು ಹೋಗುತ್ತಾನೆ. ಮಾರ್ಗ ಮಧ್ಯೆಯಲ್ಲಿ ಜ್ಯೂಸ್​ ಕುಡಿಯೋಣ ಎಂದು ಹೇಳಿ ಸ್ಕೂಟರ್​ ನಿಲ್ಲಿಸುತ್ತಾನೆ. ಬಳಿಕ ಜ್ಯೂಸ್​ನಲ್ಲಿ ನಿದ್ದೆ ಮಾತ್ರಗಳನ್ನು ಬೆರೆಸಿ ಕೊಡುತ್ತಾನೆ. ಮತ್ತೆ ಕಾಲೇಜಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಮತ್ತೆ ಮಾರ್ಗ ಮಧ್ಯೆ ನವ್ಯಾಗೆ ಸುಸ್ತಾಗುತ್ತದೆ. ಇದನ್ನು ತಿಳಿದಿ ಪಾಪಿ ಪತಿ, ಆಕೆಯನ್ನು ಮರವೊಂದರ ಬಳಿ ಕರೆದೊಯ್ದು ವಿಶ್ರಾಂತಿ ಪಡೆಯಲು ಹೇಳುತ್ತಾನೆ. ಬಳಿಕ ಆಕೆ ಮೃತಪಟ್ಟಾಗ ಅದೇ ಮರಕ್ಕೆ ನೇಣು ಬಿಗಿಯುತ್ತಾನೆ.

ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ
ನೇಣು ಬಿಗಿದ ಬಳಿಕ ನವ್ಯಾ ಫೋನ್​ ತೆಗೆದುಕೊಂಡು ಆಕೆಯ ತಂದೆಗೆ ನಾಗಶೇಶು ವಾಟ್ಸ್​ಆಯಪ್​ ಮೆಸೇಜ್​ ಮಾಡುತ್ತಾನೆ. ಇಂಜಿನಿಯರ್​ನಲ್ಲಿ ಎರಡು ವಿಷಯ ಬಾಕಿ ಉಳಿದಿವೆ. ಸರಿಯಾಗಿ ಓದಲು ಸಹ ನನಗೆ ಆಗುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಸೇಜ್​ ಮಾಡಿ ತಕ್ಷಣ ಮೊಬೈಲ್​ ಅನ್ನು ಸ್ವಿಚ್​ ಆಫ್​ ಮಾಡುತ್ತಾನೆ. ಮರುದಿನ ಬೆಳಗ್ಗೆ ಎರ್ರುಪಾಳ್ಯಂ ಪೊಲೀಸ್​ ಠಾಣೆಗೆ ಹೋಗಿ ಪತ್ನಿ ನಾಪತ್ತೆಯಾಗಿರುವುದಾಗಿ ನಾಗಶೇಶು ದೂರು ದಾಖಲಿಸುತ್ತಾನೆ.

ತುಂಬಿತು ಪಾಪಿಯ ಪಾಪದ ಕೊಡ
ದೂರು ದಾಖಲಿಸಿಕೊಂಡ ಪೊಲೀಸರು ನವ್ಯಾ ಮತ್ತು ನಾಗಶೇಶು ಮೊಬೈಲ್​ ವಶಕ್ಕೆ ಪಡೆದು ಕಾಲ್​ ಡಾಟಾವನ್ನು ಪರಿಶೀಲಿಸುತ್ತಾರೆ. ಅಲ್ಲದೆ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲಿಸುತ್ತಾರೆ. ಫೆ. 2ರಂದು ನಾಗಶೇಶು ಮತ್ತು ನವ್ಯಾ ಸ್ಕೂಟಿಯಲ್ಲಿ ಹೋಗುತ್ತಿರುವುದು ರೆಕಾರ್ಡ್​ ಆಗಿರುವ ದೃಶ್ಯ ಪತ್ತೆಯಾಗುತ್ತದೆ. ಬಳಿಕ ಅನುಮಾನದಿಂದಲೇ ನಾಗಶೇಶುವನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ಕೊನೆಗೆ ತನ್ನ ತಪ್ಪನ್ನು ನಾಗಶೇಶು ಒಪ್ಪಿಕೊಳ್ಳುತ್ತಾನೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ಶುಕ್ರವಾರ ನವ್ಯಾ ಮೃತದೇಹವನ್ನು ವಶಕ್ಕೆ ಪಡೆದು ಪೆನುಬೆಲ್ಲಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಇತ್ತ ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಮಗಳು ಹೆಣವಾಗಿದ್ದನ್ನು ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆಯ ಹಿಂದಿನ ಕಾರಣ ಕೇಳಿ ಆಘಾತಕ್ಕೊಳಗಾಗಿರುವ ಪಾಲಕರು, ಮದುವೆಗೂ ಮುನ್ನ ಪೂರ್ವಪರ ತಿಳಿದುಕೊಳ್ಳಬೇಕಿತ್ತು ಎಂದು ಕೊರಗುತ್ತಿದ್ದಾರೆ.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ