Breaking News
Home / ಬಳ್ಳಾರಿ / ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ

ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ

Spread the love

ಸಿರುಗುಪ್ಪ :ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಶಾನವಾಸಪುರ,ಸೂಗೂರು, ಹಚ್ಚೊಳ್ಳಿ, ಅರಳಿಗನೂರು ಸೇರಿದಂತೆ ಹಲವು ಗ್ರಾಮಗಳ.35ಕ್ಕೂ ಹೆಚ್ಚು ರೈತರಿಂದ18 ಕೋಟಿ 30 ಲಕ್ಷ ರೂ ಮೌಲ್ಯದ ಭತ್ತವನ್ನು ಮಾರುಕಟ್ಟೆ ಧರಕ್ಕಿಂತ ಹೆಚ್ಚಿನ ಧರದಲ್ಲಿ ಖರೀದಿಸಿದ ವ್ಯಕ್ತಿ ಈಗ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾನಂತೆ.
ಮೂಲತಃ ಕಾರಟಿಗಿಯ ಮೆಹಬೂಬ್ ಭಾಷಾ ಎನ್ನುವಾತ ಸಿರುಗುಪ್ಪದಲ್ಲಿ ವಾಸವಾಗಿದ್ದ ಕಳೆದ ವರ್ಷ ಭತ್ತ ಖರೀದಿಸಿ ರೈತರಿಗೆ ಸಮರ್ಪಕವಾಗಿ ಹಣ ಪಾವತಿ ಮಾಡಿದ್ದ ಆದರೆ ಈ ವರ್ಷ ಖರೀದಿ ಮಾಡಿ ಹಣ ನೀಡದೆ ನಾಪತ್ತೆಯಾಗಿದ್ದಾನೆ.ರೈತರು ಈತನ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರಂತೆ. ಅವರು ಕಾರಟಗಿಯಲ್ಲಿ ಆತನ ತಂದೆ ಮತ್ತಿತರ ಸಂಬಂಧಿಕರನ್ನು ವಿಚಾರಿಸಿದ್ದಾರಂತೆ. ಆದರೂ ಆತ ಈ ವರೆಗೆ ನಾಪತ್ತೆಯಾಗಿದ್ದಾನಂತೆ. ಭತ್ತ ನೀಡಿದ ರೈತರು ಕಾರಟಗಿಯ ಆತನ ಮನೆಗೆ ಹೋದರೆ ಮನೆಯವರು ಗದರಿಸಿ ಕಳಿಸುತ್ತಾರಂತೆ ಹೀಗಾಗಿ ಕಷ್ಟಪಟ್ಟು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಭತ್ತ ನೀಡಿ ಹಣವಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳು ಪೊಲೀಸರು ಆರೋಪಿ ಪತ್ತೆಗೆ ಸಹಕರಿಸಬೇಕೆಂಬುದು ರೈತರ ಅಳಲಾಗಿದೆ.


Spread the love

About Laxminews 24x7

Check Also

ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ: R..ಅಶೋಕ್

Spread the loveಬಳ್ಳಾರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ