Breaking News
Home / ರಾಜ್ಯ / ಬ್ರೇಕ್ ಫೇಲ್ ಆದ ಸರಕು ತುಂಬಿದ ಟ್ರಕ್ ನ್ನು 3 ಕಿ.ಮೀ ರಿವರ್ಸ್ ಓಡಿಸಿದ ಚಾಲಕ

ಬ್ರೇಕ್ ಫೇಲ್ ಆದ ಸರಕು ತುಂಬಿದ ಟ್ರಕ್ ನ್ನು 3 ಕಿ.ಮೀ ರಿವರ್ಸ್ ಓಡಿಸಿದ ಚಾಲಕ

Spread the love

ಮಹಾರಾಷ್ಟ್ರ: ಬ್ರೇಕ್ ಫೇಲ್ ಆದ ಟ್ರಕ್ ಒಂದನ್ನು ಚಾಲಕ 3 ಕಿಲೋಮೀಟರ್ ದೂರದವರೆಗೆ ರಿವರ್ಸ್ ನಲ್ಲಿ ಓಡಿಸಿದ್ದು, ಆಕ್ಸಿಡೆಂಟ್ ಅಪಾಯದಿಂದ ತಪ್ಪಿಸಿ ಸಮರ್ಪಕವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರಕು ತುಂಬಿದ ಟ್ರಕ್ ಇದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ. ಆ ವಾಹನ ರಿವರ್ಸ್ ಗೇರ್‌ನಲ್ಲಿದ್ದ ಕರಣ ನಿಲ್ಲಿಸುವುದು ಇನ್ನು ಕಷ್ಟವಾಗಿ ಪರಿವರ್ತನೆಯಾಗಿತ್ತು. ಅದು ಕೂಡ ಕಿರಿದಾದ ರಸ್ತೆ, ಜೊತೆಗೆ ವಾಹನ ಸಂಚಾರ ಇರುವ ರಸ್ತೆಯಲ್ಲಿ ವಾಹನಗಳು ಎಂದಿನಂತೆ ಓಡಾಡುತ್ತಲೇ ಇದೆ. ಇಂತಹ ರಸ್ತೆಯಲ್ಲಿ ಸುಮಾರು 3 ಕಿ.ಮೀ ರಿವರ್ಸ್ ಗೇರ್‌ನಲ್ಲಿ ತೆರಳಿದ್ದು, ಆತನಿಗೆ ಕೆಲವು ಬೈಕ್ ಸವಾರರು ಸಹಾಯ ಮಾಡಿದ್ದಾರೆ.

ವಾಹನ ಬ್ರೇಕ್ ಫೇಲ್ ಆದಾಗ, ಯಾವ ಗೇರ್ ಬೀಳುವುದಿಲ್ಲ. ಹಾಗೆಯೇ ವಾಹನ ನಿಲ್ಲಿಸುವುದು ಅಸಾಧ್ಯದ ಮಾತು. ಆದರೆ ಇಂತಹ ಸಂಭವವನ್ನು ಸಂಭವವಾಗಿಸಿ ಮಹಾರಾಷ್ಟ್ರದ ಜಲ್ನ-ಸಿಲ್ಲೋಡ್ ರಸ್ತೆಯಲ್ಲಿ ಬಹುದೊಡ್ಡ ಅಪಾಯವನ್ನು ಟ್ರಕ್ ಚಾಲಕ ತಪ್ಪಿಸಿದ್ದಾನೆ.

ಈ ದೃಶ್ಯವನ್ನು ಒಂದು ಖಾಸಗಿ ಯುಟ್ಯೂಬ್ ಚಾನೆಲ್ ನಲ್ಲಿ ಹಾಕಿದ್ದು ಇದೀಗ ವಿಡಿಯೋ ವೈರಲ್ ಆಗಿದೆ. ಚಾಲಕನ ಈ ಸಾಹಸಕ್ಕೆ ಎಲ್ಲರಿಂದ ಪ್ರಶಂಸೆ ದೊರೆಯುತ್ತದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ