Breaking News
Home / Uncategorized / ಅಮಿತ್ ಶಾ ರಾಜ್ಯ ಪ್ರವಾಸ ಪಟ್ಟಿ ಪ್ರಕಟ: ಬೆಳಗಾವಿಯಲ್ಲಿ 4 ಕಾರ್ಯಕ್ರಮದಲ್ಲಿ ಭಾಗಿ

ಅಮಿತ್ ಶಾ ರಾಜ್ಯ ಪ್ರವಾಸ ಪಟ್ಟಿ ಪ್ರಕಟ: ಬೆಳಗಾವಿಯಲ್ಲಿ 4 ಕಾರ್ಯಕ್ರಮದಲ್ಲಿ ಭಾಗಿ

Spread the love

ನವದೆಹಲಿ – ಇದೇ 16 ಮತ್ತು 17ರಂದು ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಯಲ್ಲಿ 4 ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ಕೆಎಲ್ಇ  ಆಸ್ಪತ್ರೆ ಮತ್ತು ದಿವಂಗತ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಪಕ್ಷದ ಪದಾಧಿಕಾರಿಗಳ ಸಭೆಯನ್ನೂ ನಡೆಸಲಿದ್ದಾರೆ.

ಜ.16ರಂದು ಬೆಳಗ್ಗೆ 9 ಗಂಟೆಗೆ ನವದೆಹಲಿಯಿಂದ ಹೊರಡುವ ಅಮಿತ್ ಶಾ 11.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಭದ್ರಾವತಿಗೆ ಆಗಮಿಸಿ ಅಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸೆಂಟರ್ ಗೆ ಶಂಕುಸ್ಥಾಪನೆ ನೆರವೇರಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ವಿಧಾನಸೌಧದಲ್ಲಿ ಇಆರ್ ಎಸ್ ಎಸ್ ವಾಹನಗಳಿಗೆ ಹಸಿರು ನಿಶಾನೆ ತೋರುವರು. 5 ಗಂಟೆಗೆ ವಿಧಾನಸೌಧದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು 6 ಗಂಟೆಗೆ ಮುಖ್ಯಮಂತ್ರಿಗಳ ಚೆಂಬರ್ ಗೆ ಭೇಟಿ ನೀಡುವರು. ನಂತರ ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವರು.

ರಾತ್ರಿ ಬೆಂಗಳೂರಿನ ಹೊಟೆಲ್ ವಿಂಡ್ಸನ್ ಮೆನರ್ ನಲ್ಲಿ ವಾಸ್ತವ್ಯ ಹೂಡುವ ಅಮಿತ್ ಶಾ, ಜ. 17ರಂದು ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಹೊರಟು 10.30ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ಅಲ್ಲಿಂದ ಹೆಲಿಕಾಪ್ಟರ್ ಮೂಲಕ 1.15ಕ್ಕೆ ಬೆಳಗಾವಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು 3 ಗಂಟೆಗೆ ಕೆಎಲ್ ಇ ಆಸ್ಪತ್ರೆಗೆ ಭೇಟಿ ನೀಡುವರು. ಕೆಎಲ್ಇ ಆಸ್ಪತ್ರೆಯಲ್ಲಿ ಒಂದು ಗಂಟೆ ಕಳೆಯುವ ಅವರು ನಂತರ 4.10ರಿಂದ 5.30ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಅಲ್ಲಿಂದ 5.40ಕ್ಕೆ, ಈಚೆಗೆ ನಿಧನರಾಗಿರುವ ಕೇಂದ್ರದ ಸಚಿವರಾಗಿದ್ದ ಸುರೇಶ ಅಂಗಡಿ ನಿವಾಸಕ್ಕೆ ತೆರಳಿ 6 ಗಂಟೆಯವರೆಗೆ ಇದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಅಲ್ಲಿಂದ ಸಂಕಮ್ ಹೊಟೆಲ್ ಗೆ ತೆರಳಲಿರುವ ಅಮಿತ್ ಶಾ ಅಲ್ಲಿ 6.10ರಿಂದ 7.20ರ ವರೆಗೆ ಪಕ್ಷದ ಪದಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ.

ರಾತ್ರಿ 7.30ಕ್ಕೆ ಬೆಳಗಾವಿಯಿಂದ ನವದೆಹಲಿಗೆ ತೆರಳುವರು.


Spread the love

About Laxminews 24x7

Check Also

ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

Spread the love ಬೆಳಗಾವಿ: ‘ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಆಗಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದು ಎಐಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ