Breaking News
Home / Uncategorized / ” ಬೆಳಗಾವಿ” ಯನ್ನು” ಬೆಳಗಾಂ” ಎಂದು ಕರೆಯುವದು ಸರಿಕಾಣಿಸುವದಿಲ್ಲ. ಮಾನ್ಯ ಶ್ರೀ ಡಿ.ಕೆ.ಶಿವಕುಮಾರ: ಅಶೋಕ ಚಂದರಗಿ

” ಬೆಳಗಾವಿ” ಯನ್ನು” ಬೆಳಗಾಂ” ಎಂದು ಕರೆಯುವದು ಸರಿಕಾಣಿಸುವದಿಲ್ಲ. ಮಾನ್ಯ ಶ್ರೀ ಡಿ.ಕೆ.ಶಿವಕುಮಾರ: ಅಶೋಕ ಚಂದರಗಿ

Spread the love

ಮಾನ್ಯ ಶ್ರೀ ಡಿ.ಕೆ.ಶಿವಕುಮಾರ
ಅಧ್ಯಕ್ಷರು, ಕರ್ನಾಟಕ ಪ್ರದೇಶ
ಕಾಂಗ್ರೆಸ್ ಸಮಿತಿ

ಬೆಳಗಾವಿ ಮಹಾನಗರ ಪಾಲಿಕೆ
ಚುನಾವಣೆಯಲ್ಲಿ ಪಕ್ಷದ ಚಿನ್ಹೆಯ
ಮೇಲೆ ಅಭ್ಯರ್ಥಿಗಳನ್ನು ನಿಲ್ಲಿಸಲು
ತಾವು ಒಂದು ಸಮಿತಿಯನ್ನು ರಚಿಸಿದ್ದೀರಿ.
ಈ ಬಗ್ಗೆ ಚುನಾವಣೆ ಬಂದಾಗ ನಾವು
ನಮ್ಮ ನಿಲುವನ್ನು ಸೂಕ್ತ ಸಮಯದಲ್ಲಿ ಹೇಳುತ್ತೇವೆ.
ಆದರೆ ಒಂದು ಜವಾದ್ಬಾರಿಯುತ
ಪಕ್ಷವಾಗಿ ತಾವು ” ಬೆಳಗಾವಿ” ಯನ್ನು” ಬೆಳಗಾಂ” ಎಂದು ಕರೆಯುವದು ಹಾಗೂ ತಮ್ಮ ಅಧಿಕೃತ ಪ್ರಕಟಣೆಗಳಲ್ಲಿ ಬರೆಯುವದು ಸರಿಕಾಣಿಸುವದಿಲ್ಲ.ಅಚ್ಚರಿಯೆಂದರೆ ತಮ್ಮ ಸರಕಾರವಿದ್ದಾಗಲೇ2015 ರಲ್ಲಿ
ಬೆಳಗಾವಿ ಸಹಿತ ರಾಜ್ಯದ ಅನೇಕ ನಗರಗಳ
ಮರುನಾಮಕರಣವಾಗಿದೆ.

 

ಗಡಿಭಾಗದಲ್ಲಿ ಚುನಾವಣೆ
ಎದುರಿಸಲು ಸನ್ನದ್ಧವಾಗಿರುವ ತಮ್ಮ ಪಕ್ಷವು ಈಗಲೇ ” ಬೆಳಗಾಂ” ಎಂದು ಬರೆಯುವ ಮೂಲಕ ಮರಾಠಿಗರನ್ನು ಖುಶಿ ಪಡೆಸಿದರೆ ಹೇಗೆ?
ತಾವು ಬೆಳಗಾವಿ ಎಂದೇ ಬರೆಯಬೇಕು.ಕರೆಯಬೇಕು.ಈ ವಿಷಯದಲ್ಲಿ ಸುಮ್ಮನೇ ಪ್ರತಿಷ್ಠೆ ಬೇಡ.
” ಬೆಳಗಾಂ” ಎಂದೇ ಬರೆಯುತ್ತ ಹೋದರೆ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ.
ತಾವು ಗಡಿಭಾಗದ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಿರೆಂಬ
ವಿಶ್ವಾಸದಿಂದಲೇ ನಾನು ಈ ನಮ್ರ
ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ.
ವಂದನೆಗಳು
ತಮ್ಮ ವಿಶ್ವಾಸಿ
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ ಮೊ:9620114466


Spread the love

About Laxminews 24x7

Check Also

ಉಚಿತ ಭಾಗ್ಯ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ

Spread the love Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ