Breaking News

ವಿಧಾನಪರಿಷತ್​ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ತಮ್ಮ ಸರ್ಕಾರಿ ಬಂಗಲೆ ಮತ್ತು ಕಾರನ್ನು ವಾಪಸ್​ ಮಾಡಿದ್ದಾರೆ.

Spread the love

ಬೆಂಗಳೂರು (ಡಿ. 21): ವಿಧಾನ ಪರಿಷತ್​ನಲ್ಲಿ ಕಳೆದ ವಾರ ನಡೆದ ಕೋಲಾಹಲ ಬೆನ್ನಲ್ಲೇ ಇದೀಗ ವಿಧಾನಪರಿಷತ್​ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ತಮ್ಮ ಸರ್ಕಾರಿ ಬಂಗಲೆ ಮತ್ತು ಕಾರನ್ನು ವಾಪಸ್​ ಮಾಡಿದ್ದಾರೆ. ಸರ್ಕಾರಿ ಮನೆ ತೊರೆದಿರುವ ಅವರು ತಮ್ಮ ಸ್ವ ಕ್ಷೇತ್ರಕ್ಕೆ ತೆರಳಿದ್ದಾರೆ. ಅಲ್ಲದೇ ತಮ್ಮ ಮನೆಯ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುವಂತೆ ಸಭಾಪತಿಯವರೇ ಲೋಕೋಪಯೋಗಿ ಇಲಾಖೆಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ. ಪರಿಷತ್ ಸಭಾಪತಿ​ ಸ್ಥಾನಕ್ಕೆ ರಾಜೀನಾಮೆಯನ್ನು ನೀಡದ ಪ್ರತಾಪ್​ ಚಂದ್ರ ಶೆಟ್ಟಿ, ಸರ್ಕಾರಿ ಬಂಗಲೆ ತೊರೆದಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಅವರು ರಾಜೀನಾಮೆ ನೀಡಲು ಮುಂದಾಗಿದ್ದರೂ ಕಾಂಗ್ರೆಸ್​ ಅವರನ್ನು ತಡೆದಿತ್ತು. ಪರಿಷತ್​ನಲ್ಲಿ ಆದ ಗಲಾಟೆ ಬಳಿಕವೂ ಹುದ್ದೆಯಲ್ಲಿ ಮುಂದುವರೆದರೆ ಅಧಿಕಾರಕ್ಕಾಗಿ ತಾವು ಇನ್ನು ಹುದ್ದೆಯಲ್ಲಿದ್ದೇವೆ ಎಂಬ ಸಂದೇಶ ರವಾನೆಯಾಗುತ್ತದೆ. ಈ ಹಿನ್ನಲೆ ರಾಜೀನಾಮೆ ನೀಡುತ್ತೇವೆ ಎಂದು ಪ್ರತಾಪ್​ ಚಂದ್ರ ಶೆಟ್ಟಿ ತಿಳಿಸಿದ್ದರು. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದಕ್ಕೆ ತಡೆಯಾಗಿದ್ದಾರೆ. ಅಲ್ಲದೇ ಅವಿಶ್ವಾಸ ಸೂಚನೆ ಚರ್ಚೆಯಾಗಿ ಮತದಾನದ ಕ್ಷಣದವರೆಗೂ ರಾಜೀನಾಮೆ ಪ್ರಸ್ತಾಪ ಮಾಡದಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆ ಪ್ರತಾಪ ಚಂದ್ರ ಶೆಟ್ಟಿ ಇನ್ನು ರಾಜೀನಾಮೆ ಬಗ್ಗೆ ನಿರ್ಧರಿಸಿಲ್ಲ ಎನ್ನಲಾಗಿದೆ. ಆದರೆ, ಬಿಜೆಪಿ ನಾಯಕರು ಸಭಾಪತಿಯವರಿಗೆ ಸಂಖ್ಯಾಬಲ ಇಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಜೆಡಿಎಸ್​ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್​ ಬೆಂಬಲ ನೀಡುವುದಾಗಿ ತಿಳಿಸಿದೆ. ಈ ಹಿನ್ನಲೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. ವಿಧಾನಪರಿಷತ್​ನಲ್ಲಿ ನಡೆದ ಘಟನೆ ಕುರಿತು ಡಿ. 15ರೊಳಗೆ ಪರಿಷತ್​ ಕಾರ್ಯದರ್ಶಿಗೆ ವಿವರಗಳನ್ನು ನೀಡುವಂತೆ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿಗೆ ನೋಟಿಸ್​ ಜಾರಿಗೊಳಿಸಿದ್ದಾರೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ