Breaking News

ಚುನಾವಣೆ ಯಾವುದೇ ಇರಲಿ, ಬೆರಳಿಗೆ ಇಂಕ್ ಹಚ್ಚುವುದು ಕಡ್ಡಾಯ. ಒಮ್ಮೆ ಹಚ್ಚಿದ ಇಂಕ್ ಎಷ್ಟೇ ಉಜ್ಜಿ, ತೀಡಿದರೂ ಅದು ಹೋಗಲ್ಲ.

Spread the love

(ಡಿಸೆಂಬರ್​.21): ಚುನಾವಣೆ ಯಾವುದೇ ಇರಲಿ, ಬೆರಳಿಗೆ ಇಂಕ್ ಹಚ್ಚುವುದು ಕಡ್ಡಾಯ. ಒಮ್ಮೆ ಹಚ್ಚಿದ ಇಂಕ್ ಎಷ್ಟೇ ಉಜ್ಜಿ, ತೀಡಿದರೂ ಅದು ಹೋಗಲ್ಲ. ಅಂತಹ ಅಳಿಸಲಾಗದ ಶಾಯಿಯನ್ನು ಜಗತ್ತಿನ ಹಲವು ರಾಷ್ಟ್ರಗಳಿಗೆ ಸರಬರಾಜು ಮಾಡುವುದು ನಮ್ಮ ಮೈಸೂರಿನ ಹೆಚ್ಚುಗಾರಿಕೆ. ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಇದೀಗ ಗ್ರಾಮ ಪಂಚಾಯಿತಿ ಚುನಾವಣೆಗೂ ಇಂಕ್ ಸರಬರಾಜು ಮಾಡಿದ್ದು, 1ನೇ ಹಂತದ ಚುನಾವಣೆಗೆ ಇಂಕ್ ತಲುಪಿಸಿದ್ರೆ, 2ನೇ ಹಂತದ ಚುನಾವಣೆಗೆ ಪ್ಯಾಕಿಂಗ್ ಕಾರ್ಯವು ಮುಗಿದಿದೆ. ಚುನಾವಣೆಯಲ್ಲಿ ಕಳ್ಳ ವೋಟು ಹಾಕುವುದಕ್ಕೆ ಅವಕಾಶ ಇರುವುದಿಲ್ಲ. ಒಮ್ಮೆ ವೋಟ್ ಮಾಡಿ ಬೆರಳಿಗೆ ಶಾಯಿ ಹಾಕಿಸಿಕೊಂಡ್ರೆ ಮುಗಿದೇ ಹೋಯ್ತು. ಜಪ್ಪಯ್ಯ ಅದನ್ನ ಅಂದರೂ ಅಳಿಸುವುದಕ್ಕೆ ಸಾಧ್ಯವಿಲ್ಲ. ಸೋಪು, ಹ್ಯಾಂಡ್​ವಾಷ್, ಸೀಮೆ ಎಣ್ಣೆ, ಪೆಟ್ರೋಲ್ ಹಾಕಿ ತೊಳೆದರೂ ಅಳಿಸಿ ಹೋಗುವುದಿಲ್ಲ. ಅಂತಹದ್ದೊಂದು ಅಳಿಸಲಾಗದ ಶಾಯಿಯನ್ನು ಪ್ರಪಂಚದ ಹಲವು ದೇಶಗಳಿಗೆ ಸರಬರಾಜು ಮಾಡೋದು ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಶ್ ಲಿಮಿಟೆಡ್. ಮೈಸೂರು ಅರಸರು ಸ್ಥಾಪಿಸಿದ ಕಾರ್ಖಾನೆಯಲ್ಲೀಗ ಉತ್ಪಾದನಾ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ. 

ಇನ್ನು ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ತೆಲಂಗಾಣ, ಉತ್ತರ ಪ್ರದೇಶ, ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಬ್ಯಾಲೆಟ್ ಮಾರ್ಕಿಂಗ್ ಪೆನ್ ಸರಬರಾಜು ಮಾಡಲಾಗಿತ್ತು. ಚುನಾವಣಾ ಆಯೋಗದ ಬೇಡಿಕೆಗೆ ತಕ್ಕಂತೆ ಅಳಿಸಲಾಗದ ಶಾಯಿ ಪೂರೈಸುವ ಮೈಸೂರು ಪೇಂಟ್ ಆ್ಯಂಡ್ ವಾರ್ನಿಸ್ ಕಂಪನಿ, ಗುಣಮಟ್ಟದ ಇಂಕ್ ಕಾರಣಕ್ಕಾಗಿ ಜಾಗತಿಕ ಮನ್ನಣೆ ಗಳಿಸಿರುವುದು ವಿಶೇಷ.ಅಲ್ಲದೆ, ಕಂಪನಿಯ ಆರ್ಥಿಕ ಸ್ಥಿತಿಗತಿ ಕೂಡ ಬೆಳವಣಿಗೆಯಾಗುತ್ತಿದ್ದು, 2019-20ನೇ ಸಾಲಿನಲ್ಲಿ ಮೈಲ್ಯಾಕ್ 21.52 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಗಾಗಿ 5 ಎಂ.ಎಲ್. ಇಂಕ್​ವುಳ್ಳ 99,000 ಫಿಯಲ್ಸ್​ಗಳನ್ನು ಸರಬರಾಜು ಮಾಡುವಂತೆ ಬೇಡಿಕೆ ಸಲ್ಲಿಸಿದೆ. ಜತೆಗೆ 6,580 ಪ್ಯಾಕೆಟ್ ಸೀಲಿಂಗ್ ವ್ಯಾಕ್ಸ್​ಗೂ ಬೇಡಿಕೆ ಸಲ್ಲಿಸಿದೆ. ಎಲ್ಲವನ್ನೂ ನಿಗದಿತ ದಿನಾಂಕದೊಳಗೆ ಸರಬರಾಜು ಮಾಡಲಾಗುತ್ತೆ ಅಂತಾರೆ ಮೈಲ್ಯಾಕ್ ಅಧ್ಯಕ್ಷರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ