Breaking News
Home / ಅಂತರಾಷ್ಟ್ರೀಯ /   ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

  ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

Spread the love

ನವದೆಹಲಿ : ರೈತರ ಹೋರಾಟವನ್ನು ಬೆಂಬಲಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕರು ವಿಧಾನಸಭೆಯಲ್ಲಿ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದರು
 ನಾನು ಮೊದಲು ಈ ದೇಶದ ಪ್ರಜೆ, ನಂತರ ಮುಖ್ಯಮಂತ್ರಿ 

ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರುದ್ಧ ಆಪ್​ ಸರ್ಕಾರ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, ಬಿಜೆಪಿ ಚುನಾವಣೆಗಾಗಿ ಹಣ ಸಂಗ್ರಹಿಸಲು ಈ ಕಾನೂನುಗಳನ್ನು ಮಾಡಿದೆಯೇ ಹೊರತು, ರೈತರಿಗಲ್ಲ. ಹೊಸ ಕೃಷಿ ಕಾನೂಗಳ ಪ್ರತಿಯನ್ನು ಹರಿದು ಹಾಕುವುದರಲ್ಲಿ ನನಗೆ ನೋವಿದೆ, ನಾನು ಇದನ್ನು ಉದ್ದೇಶಿಸಿರಲಿಲ್ಲ. ಆದರೆ, -2 ಡಿಗ್ರಿ ಸೆಲ್ಸಿಯಸ್ ಇರುವ ತಾಪಮಾನದಲ್ಲಿ ಬೀದಿಗಳಲ್ಲಿ ಮಲಗಿರುವ ನನ್ನ ದೇಶದ ರೈತರಿಗೆ ನಾನು ದ್ರೋಹ ಮಾಡಲು ಸಾಧ್ಯವಿಲ್ಲ. ನಾನು ಮೊದಲು ಈ ದೇಶದ ಪ್ರಜೆ, ನಂತರ ಮುಖ್ಯಮಂತ್ರಿ ಎಂದು ಭಾವನಾತ್ಮಕವಾಗಿ ಹೇಳಿದರು


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ