Breaking News
Home / ರಾಜಕೀಯ / ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ

ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ

Spread the love

ಸಿಂದಗಿ: 600 ಮಹಿಳೆಯರಿಗೆ ಉಚಿತವಾಗಿ ಸಹಜ ಹೆರಿಗೆ ಮಾಡಿಸಿದ ತಾಲ್ಲೂಕಿನ ಯರಗಲ್ ಬಿ.ಕೆ. ಗ್ರಾಮದ ಲಕ್ಷ್ಮೀಬಾಯಿ ಪಂಚಯ್ಯ ಗುಬ್ಬೇವಾಡ ಇವರಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಲ್ಲಿಯ ಊರನಹಿರಿಯಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ರಾತ್ರಿ ಶಾಂತವೀರ ಪಟ್ಟಾಧ್ಯಕ್ಷರ 44ನೆಯ ಸ್ಮರಣೋತ್ಸವದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಪ್ರಶಸ್ತಿ ₹5 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಅಫಜಲಪುರ ಸಂಸ್ಥಾನಹಿರೇಮಠದ ಪೀಠಾಧ್ಯಕ್ಷ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

ಸಾಹಿತಿಗಳಾದ ಚನ್ನಪ್ಪ ಕಟ್ಟಿ, ಎಂ.ಎಂ.ಪಡಶೆಟ್ಟಿ ಹಾಗೂ ಜಿ.ಎಸ್.ಭೂಸಗೊಂಡ ಉಪಸ್ಥಿತರಿದ್ದರು.
ಶಾಂತ ಸಿರಿ ಪ್ರಶಸ್ತಿ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೋತ್ಸವ ಸಮಾರಂಭದಲ್ಲಿ ಲಿಂ.ಮಾತೋಶ್ರೀ ಶಂಕರಮ್ಮನವರು ಮರಯ್ಯ ಹಿರೇಮಠ ಇವರ ಸ್ಮರಣಾರ್ಥ ಪ್ರದಾನ ಮಾಡಲಾಗುವುದು ಎಂದು ಶ್ರೀಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಜಾನಪದ ವಿದ್ವಾಂಸ ಎಂ.ಎಂ.ಪಡಶೆಟ್ಟಿ ಮಾತನಾಡಿ, ಇಷ್ಟು ವರ್ಷಗಳಾದರೂ ಯಾರೂ ಗುರುತಿಸದೇ ಇದ್ದ ಎಲೆ ಮರೆಯ ಕಾಯಿಯಂತೆ ಯಾವುದೇ ಫಲಾಫೇಕ್ಷವಿಲ್ಲದೇ ಸೇವಾ ಕಾರ್ಯ ಮುಂದುವರೆಸಿಕೊಂಡು ಸಾಗಿದ ಸೂಲಗಿತ್ತಿ ಲಕ್ಷ್ಮೀಬಾಯಿ ಅವರಿಗೆ ಶ್ರೀಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಗುರುತಿಸಿ ಗೌರವಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅಭಿನಂದಿಸಿದರು.

ಸಾಹಿತಿ ಚನ್ನಪ್ಪ ಕಟ್ಟಿ ಅವರು ಗದಗ-ಡಂಬಳ ತೊಂಟದಾರ್ಯಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಗುರು ಸ್ಮರಣೆ ಮಾಡುತ್ತ ಮಾತನಾಡಿದರು.

ಜಿ.ಎಸ್.ಭೂಸಗೊಂಡ ಯೋಗ ಮತ್ತು ಆರೋಗ್ಯ ವಿಷಯ ಕುರಿತು ಉಪನ್ಯಾಸ ನೀಡಿದರು.

ಅಫಜಲಪುರ ಸಂಸ್ಥಾನಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಶಾಂತವೀರ ಪಟ್ಟಾಧ್ಯಕ್ಷರು ಮತ್ತು ಗದಗ ತೋಂಟದಾರ್ಯಮಠದ ಸಿದ್ಧಲಿಂಗ ಶ್ರೀಗಳ ಸಮಾಜಮುಖಿ ಸೇವಾ ಕಾರ್ಯ ಕುರಿತು ಗುಣಗಾನ ಮಾಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ