Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದಲ್ಲಿ ಅಪಘಾತಗಳಿಗೆ ನಿತ್ಯ 30 ಸಾವು

ರಾಜ್ಯದಲ್ಲಿ ಅಪಘಾತಗಳಿಗೆ ನಿತ್ಯ 30 ಸಾವು

Spread the love

ಬೆಂಗಳೂರು : ರಸ್ತೆ ಅಪಘಾತಗಳಲ್ಲಿ ಸಂಭವಿಸುವ ನಾವು ನೋವುಗಳ ಶ್ರೀ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿವೆ. ರಾಜ್ಯದಲ್ಲಿ ಸರಾಸರಿ ನಿತ್ಯ 32 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 30 ಮಂದಿ ಪ್ರಾಣ ಕಳೆದುಕೊಂಡರೆ, 96 ಮಂದಿ ಗಾಯಗೊಳ್ಳುತ್ತಿದ್ದಾರೆ.

 

ಬೆಂಗಳೂರಿನಲ್ಲಿ ದಿನಕ್ಕೆ 2- 3 ರಸ್ತೆ ಅಪಘಾಗತಗಳು ಸಾಮಾನ್ಯಎಂಬಂತಾಗಿದ್ದು, ಕನಿಷ್ಠ ಇಬ್ಬರು ಅಥವಾ ಮೂವರು ಸಾವನ್ನಪ್ಪುತ್ತಿದ್ದಾರೆ. ಇದು ರಾಜ್ಯ ಅಪರಾಧ ದಾಖಲಾತಿ ವಿಭಾಗ (ಎಸ್.ಸಿ.ಆ‌ರ್.ಐ) ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ರಾಜ್ಯದಲ್ಲಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ 2023ನೆ ಸಾಲಿನಲ್ಲಿ 10,830 ಅಘಾತಗಳು ಸಂಭವಿಸಿದ್ದು, ಒಟ್ಟಾರೆ 11,489 ಮಂದಿ ಮೃತಪಟ್ಟಿದ್ದಾರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ.32 ಅಪಘಾತಗಳು ಸಂಭವಿಸಿದರೆ ರಾಜ್ಯ ಹೆದ್ದಾರಿಗಳಲ್ಲಿ ಶೇ.30 ಹಳ್ಳಿಗಾಡು ಪ್ರದೇಶಗಳಲ್ಲಿನ ಅಪಘಾತ ಪ್ರಮಾಣ ರೇ.38 ಆಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ 880 ಮಾರಣಾಂತಿಕ ಅಪಘಾತ ಸಂಭವಿಸಿದ್ದು, 909 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಯಲ್ಲಿಯೇ ಹೆಚ್ಚು ಜನಸಂಖ್ಯೆ ಮತ್ತು ವಾಹನದಟ್ಟಣೆ ಕಾರಣಕ್ಕೆ ಸಾವು, ನೋವುಗಳ ಪ್ರಮಾಣದಲ್ಲಿಯೂ ಅಧಿಕ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ. ಅಪಘಾತಕ್ಕೆ ವಾಹನ ಫಿಟ್‌ನೆಸ್, ಚಾಲಕ, ಹವಾಮಾನ ಮತ್ತು ರಸ್ತೆ ಗುಣಮಟ್ಟ ಪ್ರಮುಖ ಕಾರಣವಾಗಿವೆ. ಕಾಲಕಾಲಕ್ಕೆ

ವಾಹನವನ್ನು ಸರ್ವೀಸ್ ಮಾಡಿಸಬೇಕು. ತಯಾರಿಕಾ ಕಂಪನಿ ನೀಡಿರುವ ವಾಹನ ಸಾಮರ್ಥ್ಯಕ್ಕೆ ತಕ್ಕಂತೆ ಚಲಾಯಿಸಬೇಕು. ಇಲ್ಲವಾದರೆ, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತವೆ. ಮತ್ತಿನಲ್ಲಿ, ವಿಶ್ರಾಂತಿ ಇಲ್ಲದೆ ಡೈವಿಂಗ್, ಅಜಾಗರೂಕ ಚಾಲನೆ ಆಕ್ಸಿಡೆಂಟ್‌ಗೆ ಕಾರಣವಾಗುತ್ತಿವೆ. ಹವಾಮಾನ ವೈಪರೀತ್ಯ ಸಹ ಅಪಘಾತಕ್ಕೆ ಕಾರಣವಾಗಿದ್ದು, ಚಳಿಗಾಲದಲ್ಲಿ ಇವುಗಳ ಪ್ರಮಾಣ ಹೆಚ್ಚು. ಮಳೆ ಸುರಿದಾಗ ಚಾಲಕನ ನಿಯಂತ್ರಣ ತಪ್ಪುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ