Breaking News
Home / ರಾಜಕೀಯ / ಸಿದ್ದೇಶ್ವರ ಜಾನುವಾರು ಜಾತ್ರೆಯ ಮುಖ್ಯ ಆಕರ್ಷಣೆ: ಇದು ಖಿಲಾರಿ ಹೋರಿ… ಬೆಲೆ ಬಲು ದುಬಾರಿ…!

ಸಿದ್ದೇಶ್ವರ ಜಾನುವಾರು ಜಾತ್ರೆಯ ಮುಖ್ಯ ಆಕರ್ಷಣೆ: ಇದು ಖಿಲಾರಿ ಹೋರಿ… ಬೆಲೆ ಬಲು ದುಬಾರಿ…!

Spread the love

ನ್ನ ಗಟ್ಟಿಮುಟ್ಟಾದ ಹೋರಿ ಪಕ್ಕದಲ್ಲಿ ನಿಂತ ಮಾಲೀಕ ವಿದ್ಯಾನಂದ ಅವಟಿ, ದೈತ್ಯ ಗಾತ್ರದ ಪ್ರಾಣಿಯನ್ನು ಹೊಂದಿದ್ದ ಅವರು ಜಾನುವಾರು ಜಾತ್ರೆಯ ಹೀರೋ, ಅವರ ಫೆರಾರಿ…ಅಲ್ಲಲ್ಲ, ಖಿಲಾರಿ ತಳಿ ಹೋರಿ ಜಾತ್ರೆಯ ಮುಖ್ಯ ಆಕರ್ಷಣೆ. ಯಾಕೆ ಅಂತೀರಾ?
ವಿಜಯಪುರ: ತನ್ನ ಗಟ್ಟಿಮುಟ್ಟಾದ ಹೋರಿ ಪಕ್ಕದಲ್ಲಿ ನಿಂತ ಮಾಲೀಕ ವಿದ್ಯಾನಂದ ಅವಟಿ, ದೈತ್ಯ ಗಾತ್ರದ ಪ್ರಾಣಿಯನ್ನು ಹೊಂದಿದ್ದ ಅವರು ಜಾನುವಾರು ಜಾತ್ರೆಯ ಹೀರೋ, ಅವರ ಫೆರಾರಿ…ಅಲ್ಲಲ್ಲ, ಖಿಲಾರಿ ತಳಿ ಹೋರಿ ಜಾತ್ರೆಯ ಮುಖ್ಯ ಆಕರ್ಷಣೆ.
ಯಾಕೆ ಅಂತೀರಾ? ಈ ಖಿಲಾರಿ ಹೋರಿಯ ಎತ್ತರ 6.5 ಅಡಿ ಎತ್ತರ ಮತ್ತು ಉದ್ದ10 ಅಡಿ, ಇದರ ಬೆಲೆ ಫೆರಾರಿ ಕಾರಿಗೆ ಕಮ್ಮಿಯಿಲ್ಲ.. ಬರೋಬ್ಬರಿ 50 ಲಕ್ಷ ರೂಪಾಯಿ. ಖಿಲಾರಿ ತಳಿಯ ಹೋರಿಯನ್ನು ಆವತಿಯವರು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ದೇವಸ್ಥಾನದ ಉತ್ಸವವಾದ ಸಿದ್ದೇಶ್ವರ ಜಾತ್ರೆಯ ನಿಮಿತ್ತ ಇಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಸೂಕ್ತ ಖರೀದಿದಾರರನ್ನು ಹುಡುಕಲು ಉಮರಾಣಿ ಗ್ರಾಮದಿಂದ ತಂದಿದ್ದಾರೆ.

ನಿಮ್ಮ ಪ್ರಾಣಿಗೆ ಇಷ್ಟೊಂದು ದುಬಾರಿ ಬೆಲೆಯನ್ನು ಏಕೆ ಹೇಳುತ್ತಿದ್ದೀರಿ ಎಂದು ಕೇಳಿದಾಗ, ಅವತಿ ಅವರು ತಮ್ಮ ಹೋರಿಯನ್ನು ಚೆನ್ನಾಗಿ ಕಾಳಜಿ ವಹಿಸಿ ಮತ್ತು ದುಬಾರಿ ಆಹಾರ ಪದಾರ್ಥಗಳನ್ನು ಕೊಟ್ಟು ಸಾಕಿ ಸಲಹಿದ್ದೇನೆ ಎನ್ನುತ್ತಾರೆ. ಗಟ್ಟಿಮುಟ್ಟಾದ ದನಗಳ ಸಂತಾನೋತ್ಪತ್ತಿಗಾಗಿ ವೀರ್ಯವನ್ನು ಹೊರತೆಗೆಯಲು ಇಂತಹ ಎತ್ತುಗಳನ್ನು ಬಳಸಲಾಗುತ್ತದೆ.

ಇಂತಹ ಎತ್ತುಗಳು ತುಂಬಾ ದುಬಾರಿಯಾಗಲು ಇದೇ ಕಾರಣ. ವೀರ್ಯವನ್ನು ಮಾರಾಟ ಮಾಡುವ ಮೂಲಕ ಅಥವಾ ಗರ್ಭಧಾರಣೆಯ ಮೂಲಕ ರೈತರು ಹೆಚ್ಚಿನ ಲಾಭವನ್ನು ಗಳಿಸಬಹುದು ಎಂದು ಅವರು ಹೇಳಿದರು.

ಆವತಿಯಂತೆ ಅಕ್ಕಪಕ್ಕದ ಜಿಲ್ಲೆಗಳ ಹಲವು ರೈತರು ಜಾತ್ರೆಯಲ್ಲಿ ಅಚ್ಚರಿ ಮೂಡಿಸುವ ಎತ್ತುಗಳನ್ನು ತಂದಿದ್ದಾರೆ. ಹೋರಿ ಸಾಕಾಣಿಕೆಯಲ್ಲಿ ಒಲವು ಹೊಂದಿರುವ ರೈತರು ವಿವಿಧೆಡೆಯಿಂದ ಪ್ರಾಣಿಗಳನ್ನು ಖರೀದಿಸಲು ಆಗಮಿಸಿದ್ದಾರೆ. ಈ ವರ್ಷ ಜಾನುವಾರುಗಳ ಮಾಲೀಕರು ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಜಾತ್ರೆಗೆ ಕರೆತಂದಿದ್ದಾರೆ ಎನ್ನುತ್ತಾರೆ ಸಂಘಟಕರು.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ