Breaking News
Home / Uncategorized / ರಕ್ತರಹಿತವಾದ ಬಕ್ರೀದ್ ಆಚರಿಸೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಆಚರಿಸೋಣ

ರಕ್ತರಹಿತವಾದ ಬಕ್ರೀದ್ ಆಚರಿಸೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಆಚರಿಸೋಣ

Spread the love

ಚಿಕ್ಕಮಗಳೂರು: ರಕ್ತರಹಿತವಾದ ಬಕ್ರೀದ್ ಆಚರಿಸೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಆಚರಿಸೋಣ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು, ಪಟಾಕಿ ನಿಷೇಧದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಸಿರು ಪಟಾಕಿಯಂತೆ. ಇದ್ಯಾವುದು ಹೊಸದು. ಎಲೆ ಸುತ್ತಬೇಕಾ ಅಥವಾ ಪೇಪರ್ ಹರಿದು ಹಸಿರು ಬಣ್ಣದ ಪೇಪರ್ ಸುತ್ತಬೇಕಾ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಿಎಸ್‍ವೈ ಪೂರ್ಣಾವಧಿ ಸಿಎಂ ಎಂದು ಯಾವಾಗಲೂ ಹೇಳುತ್ತಿರುತ್ತೇನೆ. ಹಿಂದೂಗಳಿಗೆ ಹೀಗೆ ಮಾಡಿದರೆ ಮೂರು ತಿಂಗಳೂ ಇರುವುದಿಲ್ಲ. ಉಂಡುಂಡು ಮಲಗೋದು, ದಿನಕ್ಕೊಂದು ಕಾನೂನು ತರೋದಷ್ಟೆ ಸರ್ಕಾರದ ಸಾಧನೆಯಾಯ್ತು. ಯೋಗಿ ಸರ್ಕಾರವನ್ನು ನೋಡಿ ಕಲಿಯರಿ. ಅವರು 6 ಲಕ್ಷ ದೀಪ ಹಚ್ಚುತ್ತಿದ್ದಾರೆ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

ಮೊದಲು ರಕ್ತವಿಲ್ಲದ ಬಕ್ರೀದ್ ಮಾಡೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಮಾಡೋಣ. ಮೊದಲು ಅವೆಲ್ಲವನ್ನೂ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ದತ್ತಮಾಲಾ ಅಭಿಯಾನಕ್ಕೆ ಕಡಿಮೆ ಜನ ಸೇರಿಸಿ ಎಂದು ಹೇಳಿರುವ ಜಿಲ್ಲಾಡಳಿತದ ವಿರುದ್ಧವೂ ರಿಷಿಕುಮಾರ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ನೀವು ಹೇಳುವ ಕೋವಿಡ್ ನಿಯಂತ್ರಣಕ್ಕೆ ನಾವು ಬದ್ಧ. ಅದಕ್ಕೆ ಈ ಬಾರಿ ರೋಡ್ ಶೋ ನಿಲ್ಲಿಸಿದ್ದೇವೆ. ಅಂತರ ಕಾಪಾಡಾಲು ಬದ್ಧ. ಹಿಂದೂ ಕಾರ್ಯಕ್ರಮಗಳಿಗೆ ಏಕೆ ತಡೆ ಒಡ್ಡುತ್ತೀರಾ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದೇ ತಿಂಗಳ 26ರಂದು ದತ್ತಮಾಲಾ ಅಭಿಯಾನ ನಡೆಯಲಿದೆ. ಈ ವರ್ಷ ಜಿಲ್ಲಾಡಳಿತ ತಡೆಯೊಡ್ಡುತ್ತಿದೆ. ಜನರನ್ನ ಸೇರಿಸಿ ಆದರೆ, ಕಡಿಮೆ ಜನರನ್ನ ಸೇರಿಸಿ. ನೀವು ಮಾತ್ರ ಹೋಗಿ ಬನ್ನಿ ಎಂದು ಹೇಳಿದೆ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು


Spread the love

About Laxminews 24x7

Check Also

ಉಚಿತ ಭಾಗ್ಯ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ

Spread the love Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ