Home / ರಾಜಕೀಯ / ಕ್ರಿಸ್​ಮಸ್​ ಹಬ್ಬಕ್ಕೆ ಸಾವಿರ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ KSRTC

ಕ್ರಿಸ್​ಮಸ್​ ಹಬ್ಬಕ್ಕೆ ಸಾವಿರ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ KSRTC

Spread the love

ಕ್ರಿಸ್​ಮಸ್​ ಹಬ್ಬಕ್ಕೆ ರಜೆ ಹಿನ್ನೆಲೆ ಹೆಚ್ಚುವರಿ KSRTC ಬಸ್​ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯದ ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಗೋಕರ್ಣ, ಶಿರಸಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಬಸ್​ಗಳು ಹೊರಡಲಿದ್ದು, ಅದರಂತೆ ತಮಿಳುನಾಡು, ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್​ಗಳು ಸಂಚರಿಸಲಿವೆ.

ಬೆಂಗಳೂರು, ಡಿ.23: ಕ್ರಿಸ್​ಮಸ್​ ಹಬ್ಬಕ್ಕೆ ರಜೆಯಿರುವ ಹಿನ್ನೆಲೆಕೆಎಸ್​ಆರ್​ಟಿಸಿ(KSRTC) ಹೆಚ್ಚುವರಿಯಾಗಿ 1000 ಬಸ್​ ವ್ಯವಸ್ಥೆ ಮಾಡಿದೆ. ಪ್ರಯಾಣಿಕರಿಗೆ ತೊಂದರೆ ಆಗದ ಹಿನ್ನಲೆ ಡಿ. 22 ರಿಂದ ಡಿ.24 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ ಹೆಚ್ಚುವರಿ ಬಸ್​ಗಳು ಕಾರ್ಯನಿರ್ವಹಿಸಲಿವೆ. ಅದರಂತೆ ಡಿ.25 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್​ಗಳು ಕಾರ್ಯಾಚರಣೆಗೊಳ್ಳಲಿದೆ.

ವಿವಿಧ ಸ್ಥಳಗಳಿಗೆ ಬಸ್​ ವ್ಯವಸ್ಥೆ; ಪ್ರಯಾಣಿಕರು ಮೊದಲೇ ಸೀಟ್ ರಿಸರ್ವ್ ಮಾಡಬಹುದು

ರಾಜ್ಯದ ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಗೋಕರ್ಣ, ಶಿರಸಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಬಸ್​ಗಳು ಹೊರಡಲಿದ್ದು, ಅದರಂತೆ ತಮಿಳುನಾಡು, ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್​ಗಳು ಸಂಚರಿಸಲಿವೆ. ಪ್ರಯಾಣಿಕರು ಮೊದಲೇ ಸೀಟ್ ರಿಸರ್ವ್ ಮಾಡಬಹುದಾಗಿದೆ. ಇ-ಟಿಕೆಟ್ ಸಹ ವೆಬ್ ಸೈಟ್ ಮೂಲಕ ಪಡೆಯಬಹುದು. ಇನ್ನು ನಾಲ್ಕು ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಟಿಕೆಟ್ ಕಾಯ್ದಿರಿಸಿದರೆ, 5 % ರಿಯಾಯಿತಿ ನೀಡಿದರೆ, ಹೋಗುವ ಹಾಗೂ ಬರುವ ಟಿಕೆಟ್ ಕಾಯ್ದಿರಿಸಿದರೆ ಬರೊಬ್ಬರಿ 10% ರಿಯಾಯಿತಿ ಕೊಡುತ್ತಿದೆ ಕೆಎಸ್​ಆರ್​ಟಿಸಿ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ