Breaking News
Home / ಜಿಲ್ಲೆ / ಬೆಳಗಾವಿ / ಹಿರಿಯರ ಆಶೀರ್ವಾದವೇ ನನಗೆ ಶ್ರೀರಕ್ಷೇ: ಲಕ್ಷ್ಮಿ ಹೆಬ್ಬಾಳಕರ್

ಹಿರಿಯರ ಆಶೀರ್ವಾದವೇ ನನಗೆ ಶ್ರೀರಕ್ಷೇ: ಲಕ್ಷ್ಮಿ ಹೆಬ್ಬಾಳಕರ್

Spread the love

ಬೆಳಗಾವಿ – ಕ್ಷೇತ್ರದ ಜನರ ಆಶಿರ್ವಾದ ಎಲ್ಲಕ್ಕಿಂತ ದೊಡ್ಡದು. ನನಗೆ ಗ್ರಾಮೀಣ ಕ್ಷೇತ್ರದ ಜನರ ಆಶಿರ್ವಾದ ಸಿಕ್ಕಿದೆ. ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಆಶಿರ್ವದಿಸಿದ್ದಾರೆ. ಇದಕ್ಕಿಂತ ಸುದೈವ ಬೇರೆ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ ಶ್ರೀ ಮಸ​ಣಾ​ಯಿ ದೇವಸ್ಥಾನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ​ಅವರು ಮಾತನಾಡುತ್ತಿದ್ದರು. ನನ್ನನ್ನು ಕಳೆದ ಚುನಾವಣೆಯಲ್ಲಿ ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಮನೆಮಗಳಂತೆ ಕಂಡಿದ್ದೀರಿ. ನಿಮ್ಮ ಎದುರು ನಾನು ತೀರಾ ಸಣ್ಣವಳು. ನೀವೇ ನನಗೆ ದೇವರ ಸಮಾನ. ಕ್ಷೇತ್ರದ ಜನರಲ್ಲೇ ನಾನು ದೇವರನ್ನು ಕಾಣುತ್ತೇನೆ. ನಿಮ್ಮ ಆಶಿರ್ವಾದ ಸದಾ ಇರಲಿ ಎಂದು ಹೇಳಿದರು. 
​ಕ್ಷೇತ್ರದ ಪ್ರತಿ ಗ್ರಾಮದಲ್ಲಿ ನಾನು ದೇವಸ್ಥಾನ ನಿರ್ಮಾಣಕ್ಕೆ ನೆರವು ನೀಡುತ್ತಿದ್ದೇನೆ. ರಸ್ತೆ, ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದೇನೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಇವೆಲ್ಲ ಜನರ ಬದುಕಿನಲ್ಲಿ ನೆಮ್ಮದಿ ನೀಡುವಂತವು. ಕನಿಷ್ಠ ಅವಶ್ಯಕತೆಗಳನ್ನೂ ಕಲ್ಪಿಸದಿದ್ದರೆ ಜನಪ್ರತಿನಿಧಿಗಳು ತಮ್ಮ ಕರ್ತವ್ಯದಿಂದ ಪಲಾಯನ ಮಾಡಿದಂತಾಗುತ್ತದೆ. ನಾನು ಎಂದಿಗೂ ಜನರಿಂದ ದೂರವಾಗುವವಳಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ನುಡಿದರು. ​
ಈ ಸಂದರ್ಭದಲ್ಲಿ​ ಶ್ರೀ ಮಸ​ಣಾ​ಯಿ ದೇವಸ್ಥಾನ ಕಮೀಟಿಯ​ ಸದಸ್ಯರು, ಗ್ರಾಮದ ಹಿರಿಯರು, ಯುವರಾಜ ಕದಂ, ಶಿವಾಜಿ ಅತಿವಾಡಕರ್, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ, ರಾಜು ಕೊಚಾರಿ, ಅಮೊಲ್ ಬಾತ್ಕಂಡೆ, ಭರಮಾ ಮನ್ನೋಳಕರ್, ಅರುಣ ಬೆಳಗಾಂವಕರ್, ಸಂಜು ತರಳೆ, ದೇವಪ್ಪ ಮನ್ನೋಳಕರ್, ಶಿವಾಜಿ ಚೌಗುಲೆ, ಬಾಬು ತರಳೆ, ರಾಜು ತರಳೆ, ಅಶೋಕ ಯಳಗುಕರ್, ಪಿ​ ಡಿ​ ​ಕೋ​ಲಕಾರ, ಪರುಶರಾಮ ತರಳೆ, ಮಾರುತಿ ಕಾ​ಕ​ತಕರ್ ಹಾಗೂ ಭಾಗ್ಯ ಲಕ್ಷ್ಮೀ ಕೋ-ಆಪ್ ಸೊಸೈಟಿ ಮತ್ತು ಯಶ್ ಕೋ ಆಪ್ ಸೊಸೈಟಿಯ ಎಲ್ಲ ಪದಾಧಿಕಾರಿಗಳು, ಸಂಚಾಲಕರು ಉಪಸ್ಥಿತರಿದ್ದರು.
​ 
​  ಅಂಬೇವಾಡಿ ಗ್ರಾಮದ ಶ್ರೀ ಮಸ​ಣಾ​ಯಿ ದೇವಸ್ಥಾನದ ಕಟ್ಟಡದ ಭೂಮಿ ಪೂಜೆಗೆ ಚಾಲನೆಯ ನೀಡುವ ಸಂದರ್ಭದಲ್ಲಿ ಸುಮಾರು 100 ವರ್ಷದ ವೃದ್ದರೋರ್ವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಭೇಟಿಗಾಗಿ ಕಾದು ಕುಳಿತಿದ್ದರು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಅವರ ಬಳಿ ತೆರಳಿ ಯೋಗಕ್ಷೇಮವನ್ನು ವಿಚಾರಿಸಿ ಆಶೀರ್ವಾದ​ ಪಡೆದ ಹೆಬ್ಬಾಳಕರ್, ​ ಏನಾದ್ರು ಸಹಾಯ​ ಬೇಕಾ ಎಂದು ವಿಚಾರಿಸಿದರು. ಏನಾದರೂ​ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿ​ದರು.

Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ