Breaking News
Home / ಜಿಲ್ಲೆ / ಕೊಪ್ಪಳ / ಕೊರೊನಾ ಹೊತ್ತಲ್ಲೇ ಕೊಪ್ಪಳದಲ್ಲಿ ಇಲಿ ಜ್ವರ ಕಾಟ!

ಕೊರೊನಾ ಹೊತ್ತಲ್ಲೇ ಕೊಪ್ಪಳದಲ್ಲಿ ಇಲಿ ಜ್ವರ ಕಾಟ!

Spread the love

ಕೊಪ್ಪಳ: ಒಂದೇಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ನಿರಾಳವಾಗುತ್ತಿದ್ದರು. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಇಲಿ ಜ್ವರ ಆರಂಭವಾಗಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ

ಹೌದು. ಕೊಪ್ಪಳ ಜಿಲ್ಲೆಯಲ್ಲಿ ಇಲಿ ಜ್ವರದ್ದೇ ಮಾತಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 6 ಜನರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿ ಮುಖವಾಗುತ್ತಿರುವುದು ನೆಮ್ಮದಿ ತಂದಿರುವ ಮಧ್ಯೆಯೇ ಇದೀಗ ಕೆಲವು ದಿನಗಳಿಂದ ಇಲಿಜ್ವರಕ್ಕೆ ಸಂಬಂಧಿಸಿದ 6 ಪ್ರಕರಣಗಳು ಪತ್ತೆಯಾಗಿದ್ದು, ಜನತೆಯಲ್ಲಿ ತಲ್ಲಣವನ್ನುಂಟು ಮೂಡಿಸಿದೆ.

ಕೊಪ್ಪಳ ತಾಲೂಕಿನ ಹೊಸಳ್ಳಿ, ಬಹದ್ದೂರಬಂಡಿ, ಕೆರೆಹಳ್ಳಿ, ಹೊಸಲಿಂಗಾಪುರ, ನರೇಗಲ್ ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ, ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಇಲಿ ಜ್ವರ ಇರುವುದು ಪರೀಕ್ಷೆ ಮೂಲಕ ಖಚಿತವಾಗಿದೆ. ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಲಿ ಜ್ವರ ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಇಲಿ ಜ್ವರ ಹರಡಲು ಸ್ಟ್ರೈರೋ ಕೀಟ ಎಂಬ ಸೂಕ್ಷ್ಮಾಣು ಜೀವಿ ಕಾರಣವಾಗಿದ್ದು, ಸಾಂಕ್ರಾಮಿಕ ರೋಗ ಸೋಂಕು ಹೊಂದಿರುವ ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಇತರ ಕಾಡು ಪ್ರಾಣಿಗಳ ಮೂತ್ರ ವಿಸರ್ಜನೆಯಿಂದ ರೋಗಾಣು ನೀರಿನಲ್ಲಿ ಸೇರಿಕೊಳ್ಳುತ್ತದೆ. ಜೊತೆಗೆ ಚರಂಡಿ ಶುದ್ಧ ಇರದಿರುವುದು ಹಾಗೂ ಮೂತ್ರ ವಿಸರ್ಜನೆಯಂತಹ ನೀರು ಮನುಷ್ಯನ ದೇಹ ಸೇರಿದರೆ ಅಥವಾ ಗಾಯ ಅಥವಾ ಬಾಯಿ, ಮೂಗು, ಕಣ್ಣುಗಳ ಒಳಭಾಗದ ಮೂಲಕ ವೈರಸ್ ಕನಗಳು ದೇಹ ಸೇರಿ ಇಲಿ ಜ್ವರ ಬರುತ್ತದೆ. ಹೀಗಾಗಿ ಜನರು ಜಾಗೃತರಾಗಿರಬೇಕು. ಆದರೆ ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

 


Spread the love

About Laxminews 24x7

Check Also

ಆಗಸ್ಟ್​ ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ

Spread the love ಕೊಪ್ಪಳ: ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾನೂನು ಜಾರಿಗೆ ತರಲಾಗಿದೆ. ನಾವು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ