Breaking News
Home / ಜಿಲ್ಲೆ / ಬೆಳಗಾವಿ / ಶಾಲಾ ಬಾಲಕರಿದ್ದ ಬಸ್ಸನ್ನು ಪ್ರವಾಹದ ನೀರಿನಲ್ಲಿ ನುಗ್ಗಿಸಿದ ಚಾಲಕ

ಶಾಲಾ ಬಾಲಕರಿದ್ದ ಬಸ್ಸನ್ನು ಪ್ರವಾಹದ ನೀರಿನಲ್ಲಿ ನುಗ್ಗಿಸಿದ ಚಾಲಕ

Spread the love

ಬೆಳಗಾವಿ : ಮಳೆಯ ಆರ್ಭಟಕ್ಕೆ ಹಳ್ಳದಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಶಾಲಾ ಬಾಲಕರಿದ್ದ ಬಸ್ಸನ್ನು ಎಗ್ಗಿಲ್ಲದೆ ನುಗ್ಗಿಸಿ ಚಾಲಕ ಚಲಾಯಿಸಿದ್ದು, ಇನ್ನೇನು ಬಸ್ ನೀರಲ್ಲಿ ಕೊಚ್ವಿ ಹೋಗುವ ಮಟ್ಟಕ್ಕೆ ಬಂದಾಗ ಎಚ್ಚರಗೊಂಡ ಗ್ರಾಮಸ್ಥರು ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

 

ಹುಕ್ಕೇರಿ ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಅದೇ ರೀತಿಯಾಗಿ ಎಲಿ ಮುನ್ನೋಳಿ ಗ್ರಾಮದಲ್ಲಿ ಸಂಜೆ ಮಳೆಯ ಆರ್ಭಟಕ್ಕೆ ಗ್ರಾಮದ ಬಳಿ ಇರುವ ಹಳ್ಳದಲ್ಲಿ ಪ್ರವಾಹ ಉಂಟಾಗಿತ್ತು.

ಗ್ರಾಮದ ಖಾಸಗಿ ಶಾಲೆಯ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಬಸ್ಸನ್ನು ಚಾಲಕ ಗ್ರಾಮದಲ್ಲಿನ ಈ ಹಳ್ಳದಲ್ಲಿ ಉಂಟಾಗಿದ್ದ ಪ್ರವಾಹದ ನೀರಿಗೆ ನುಗ್ಗಿಸಿ ಚಲಾಯಿಸಿದ್ದಾನೆ.

ಬಳಿಕ ಬಸ್ಸು ಹಳ್ಳದಲ್ಲಿನ ಹೆಚ್ವಿನ‌ ನೀರಿನಲ್ಲಿ ನುಗ್ಗುತ್ತಿದ್ದಂತೆ ಬಸ್ಸು ಅರ್ಧ ಭಾಗ ಮುಳಗಡೆ ಆಗುತ್ತಿರುವದನ್ನು ಕಂಡ ಕೆಲ ಗ್ರಾಮಸ್ಥರು ಹಳ್ಳದ ದಂಡೆಯಲ್ಲಿ ನಿಂತು ಕೋಗಾಡುತ್ತಿರುವದನ್ನು‌ ಕಂಡು ಚಾಲಕ ಅರ್ಧದಲ್ಲಿ ಬಸ್ಸನ್ನು ನಿಲ್ಲಿಸಿದ್ದಾನೆ.

ಬಸ್ಸಿನಲ್ಲಿ ಇದ್ದ ಶಾಲಾ ಬಾಲಕರು ಕಿರುಚಾಟ ತೋಡಗಿದ್ದರು. ಬಳಿಕ ಎಚ್ವೆತ್ತ ಗ್ರಾಮಸ್ಥರು ಬಸ್ಸಿನಲ್ಲಿ ಇದ್ದ ಶಾಲಾ ಬಾಲಕನ್ನು ಬಸ್ಸಿನಿಂದ ಹೊರ ತೆಗೆದಿದ್ದಾರೆ. ಇದರಿಂದ ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ.


Spread the love

About Laxminews 24x7

Check Also

ಆರ್ಥಿಕ‌ ಹೊರೆ ಹಿನ್ನೆಲೆ: ಕೃಷಿ ಪಂಪ್​ ಸೆಟ್‌ಗಳ ಮೂಲಸೌಕರ್ಯ ವೆಚ್ಚ ಭರಿಸುವ ಪ್ರಸ್ತಾವನೆ ಮುಂದೂಡಿದ ಸಂಪುಟ ಸಭೆ

Spread the loveಬೆಳಗಾವಿ: ಕೃಷಿ ಪಂಪ್​ ಸೆಟ್‌ಗಳಿಗೆ ಮೂಲಸೌಕರ್ಯ ಒದಗಿಸುವ ವೆಚ್ಚನ್ನು ರೈತರೇ ಭರಿಸಬೇಕು ಎಂಬ ಆದೇಶ ಪರಿಷ್ಕರಿಸುವ ಪ್ರಸ್ತಾವನೆ ಸಂಬಂಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ