Breaking News

ಉಪ್ಪಿ ಮನವಿ ಈ ವರ್ಷದ ಗಣೇಶ ಹಬ್ಬದಂದು ರಿಯಲ್​ ಸ್ಟಾರ್​ ಉಪೇಂದ್ರ ಅಭಿಮಾನಿಗಳಿಗೆ ಡಬಲ್​ ಖುಷಿ. ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೆ ಎಂಟು ವರ್ಷಗಳ ಬಳಿಕ ಆಯಕ್ಷನ್ ಕಟ್​ ಹೇಳಿರುವ ಯುಐ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮವಿದೆ. ಹೀಗಾಗಿ ಉಪ್ಪಿ ಸೆಪ್ಟೆಂಬರ್​ 18ರಂದು ಫುಲ್​ ಬ್ಯುಸಿಯಾಗಿರುತ್ತಾರೆ. ​ಈ ಕಾರಣಕ್ಕಾಗಿ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಬರ್ತ್​ಡೇ ದಿನ ಮನೆಯಲ್ಲಿ ಸಿಗಲ್ಲ ಉಪ್ಪಿ!: “ಎಲ್ಲಾ ಅಭಿಮಾನಿ ದೇವರುಗಳಿಗೆ ನಮಸ್ಕಾರ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಪ್ಟೆಂಬರ್​ 18 ಈ ವರ್ಷ ಬಾರಿ ವಿಶೇಷ. ಯಾಕಂದ್ರೆ ಗಣೇಶ ಚತುರ್ಥಿ ಹಬ್ಬ ಆ ದಿನಾನೇ. ಅಭಿಮಾನಿಗಳ ಹಬ್ಬನೂ ಅದೇ ದಿನ. ನಿಮ್ಮೆಲ್ಲರ ಬಹುನಿರೀಕ್ಷಿತ ‘ಯುಐ’ ಸಿನಿಮಾದ ಟೀಸರ್​ ಕೂಡ ಅಂದೇ ಲಾಂಚ್​ ಮಾಡುತ್ತಿದ್ದೇವೆ. ಈ ಪ್ರಯುಕ್ತ ನಾನು ತುಂಬಾ ಬ್ಯುಸಿ ಇರುತ್ತೇನೆ. ಸೆಪ್ಟೆಂಬರ್​ 17ರ ರಾತ್ರಿ ಅಥವಾ 18ರ ಬೆಳಗ್ಗೆ ಕತ್ರಿಗುಪ್ಪೆ ಹಾಗೂ ಸದಾಶಿವನಗರದ ಮನೆಯಲ್ಲಿ ಸಿಗುವುದಿಲ್ಲ. ನನಗೆ ತುಂಬಾ ಕೆಲಸಗಳಿರುವುದರಿಂದ ಸೆಪ್ಟೆಂಬರ್​ 18ರಂದು ಮಧ್ಯಾಹ್ನ 2 ಗಂಟೆಯ ಮೇಲೆ ಊರ್ವಶಿ ಥಿಯೇಟರ್​ನಲ್ಲಿ ನಿಮಗಾಗಿ ಕಾಯುತ್ತಿರುತ್ತೇನೆ. ನೀವೆಲ್ಲರೂ ಅಲ್ಲೇ ಬನ್ನಿ. ಕೇಕ್​ ಕತ್ತರಿಸೋಣ. ಎಲ್ಲ ಸಂಭ್ರಮವನ್ನು ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೂ ಈ ಸಂಭ್ರಮಾಚರಣೆ ಇರುತ್ತದೆ. 6 ಗಂಟೆಯ ನಂತರ ಥಿಯೇಟರ್​ ಒಳಗಡೆ ‘ಯುಐ’ ಟೀಸರ್​ ಲಾಂಚ್ ಮಾಡುತ್ತೇವೆ. ಬನ್ನಿ, ಎಲ್ಲರೂ ಪಾಲ್ಗೊಳ್ಳೋಣ” ಎಂದು ರಿಯಲ್​ ಸ್ಟಾರ್​ ಉಪೇಂದ್ರ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆಯಕ್ಷನ್​ ಕಟ್​ ಕೂಡ ಹೇಳಿದ್ದಾರೆ. ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್​ ಕ್ಯಾಪ್​ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್ ಸೆಪ್ಟಂಬರ್​ 18ರಂದು ಅವರ ಹುಟ್ಟುಹಬ್ಬದ ದಿನವೇ ಅನಾವರಣಗೊಳ್ಳಲು ತಯಾರಾಗಿದೆ. ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್​ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್​ ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್​ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಹೊಸ ತಂತ್ರಜ್ಞಾನವನ್ನು ಜೇಮ್ಸ್​ ಕ್ಯಾಮರಾನ್​ ‘ಅವತಾರ್​ 2’ ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲ, ಸುಮಾರು 14 ಸಾವಿರ ವಿಎಫ್​ಎಕ್ಸ್​ ಶಾಟ್ಸ್​ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ. ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್​ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್​ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್​ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕು.

Spread the love

ಉಪ್ಪಿ ಮನವಿಈ ವರ್ಷದ ಗಣೇಶ ಹಬ್ಬದಂದು ರಿಯಲ್​ ಸ್ಟಾರ್​ ಉಪೇಂದ್ರ ಅಭಿಮಾನಿಗಳಿಗೆ ಡಬಲ್​ ಖುಷಿ.

ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೆ ಎಂಟು ವರ್ಷಗಳ ಬಳಿಕ ಆಯಕ್ಷನ್ ಕಟ್​ ಹೇಳಿರುವ ಯುಐ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮವಿದೆ. ಹೀಗಾಗಿ ಉಪ್ಪಿ ಸೆಪ್ಟೆಂಬರ್​ 18ರಂದು ಫುಲ್​ ಬ್ಯುಸಿಯಾಗಿರುತ್ತಾರೆ. ​ಈ ಕಾರಣಕ್ಕಾಗಿ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಬರ್ತ್​ಡೇ ದಿನ ಮನೆಯಲ್ಲಿ ಸಿಗಲ್ಲ ಉಪ್ಪಿ!: “ಎಲ್ಲಾ ಅಭಿಮಾನಿ ದೇವರುಗಳಿಗೆ ನಮಸ್ಕಾರ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಪ್ಟೆಂಬರ್​ 18 ಈ ವರ್ಷ ಬಾರಿ ವಿಶೇಷ. ಯಾಕಂದ್ರೆ ಗಣೇಶ ಚತುರ್ಥಿ ಹಬ್ಬ ಆ ದಿನಾನೇ. ಅಭಿಮಾನಿಗಳ ಹಬ್ಬನೂ ಅದೇ ದಿನ. ನಿಮ್ಮೆಲ್ಲರ ಬಹುನಿರೀಕ್ಷಿತ ‘ಯುಐ’ ಸಿನಿಮಾದ ಟೀಸರ್​ ಕೂಡ ಅಂದೇ ಲಾಂಚ್​ ಮಾಡುತ್ತಿದ್ದೇವೆ. ಈ ಪ್ರಯುಕ್ತ ನಾನು ತುಂಬಾ ಬ್ಯುಸಿ ಇರುತ್ತೇನೆ. ಸೆಪ್ಟೆಂಬರ್​ 17ರ ರಾತ್ರಿ ಅಥವಾ 18ರ ಬೆಳಗ್ಗೆ ಕತ್ರಿಗುಪ್ಪೆ ಹಾಗೂ ಸದಾಶಿವನಗರದ ಮನೆಯಲ್ಲಿ ಸಿಗುವುದಿಲ್ಲ. ನನಗೆ ತುಂಬಾ ಕೆಲಸಗಳಿರುವುದರಿಂದ ಸೆಪ್ಟೆಂಬರ್​ 18ರಂದು ಮಧ್ಯಾಹ್ನ 2 ಗಂಟೆಯ ಮೇಲೆ ಊರ್ವಶಿ ಥಿಯೇಟರ್​ನಲ್ಲಿ ನಿಮಗಾಗಿ ಕಾಯುತ್ತಿರುತ್ತೇನೆ. ನೀವೆಲ್ಲರೂ ಅಲ್ಲೇ ಬನ್ನಿ. ಕೇಕ್​ ಕತ್ತರಿಸೋಣ. ಎಲ್ಲ ಸಂಭ್ರಮವನ್ನು ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೂ ಈ ಸಂಭ್ರಮಾಚರಣೆ ಇರುತ್ತದೆ. 6 ಗಂಟೆಯ ನಂತರ ಥಿಯೇಟರ್​ ಒಳಗಡೆ ‘ಯುಐ’ ಟೀಸರ್​ ಲಾಂಚ್ ಮಾಡುತ್ತೇವೆ. ಬನ್ನಿ, ಎಲ್ಲರೂ ಪಾಲ್ಗೊಳ್ಳೋಣ” ಎಂದು ರಿಯಲ್​ ಸ್ಟಾರ್​ ಉಪೇಂದ್ರ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆಯಕ್ಷನ್​ ಕಟ್​ ಕೂಡ ಹೇಳಿದ್ದಾರೆ. ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್​ ಕ್ಯಾಪ್​ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್ ಸೆಪ್ಟಂಬರ್​ 18ರಂದು ಅವರ ಹುಟ್ಟುಹಬ್ಬದ ದಿನವೇ ಅನಾವರಣಗೊಳ್ಳಲು ತಯಾರಾಗಿದೆ.

ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್​ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್​ ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್​ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಹೊಸ ತಂತ್ರಜ್ಞಾನವನ್ನು ಜೇಮ್ಸ್​ ಕ್ಯಾಮರಾನ್​ ‘ಅವತಾರ್​ 2’ ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲ, ಸುಮಾರು 14 ಸಾವಿರ ವಿಎಫ್​ಎಕ್ಸ್​ ಶಾಟ್ಸ್​ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ.

ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್​ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್​ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್​ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ