Breaking News
Home / ರಾಜಕೀಯ / ಅಂಗದ್​ನ ಜನನದ ಹಿನ್ನೆಲೆಯಲ್ಲಿ ನೇಪಾಳ ಪಂದ್ಯಕ್ಕೂ ಮುನ್ನ ಭಾರತಕ್ಕೆ ಮರಳಿದ್ದ ಬುಮ್ರಾ ಈಗ ಮತ್ತೆ ಏಷ್ಯಾಕಪ್​ ತಂಡವನ್ನು ಸೇರಿಕೊಂಡಿದ್ದಾರೆ.

ಅಂಗದ್​ನ ಜನನದ ಹಿನ್ನೆಲೆಯಲ್ಲಿ ನೇಪಾಳ ಪಂದ್ಯಕ್ಕೂ ಮುನ್ನ ಭಾರತಕ್ಕೆ ಮರಳಿದ್ದ ಬುಮ್ರಾ ಈಗ ಮತ್ತೆ ಏಷ್ಯಾಕಪ್​ ತಂಡವನ್ನು ಸೇರಿಕೊಂಡಿದ್ದಾರೆ.

Spread the love

ಕೊಲಂಬೊ (ಶ್ರೀಲಂಕಾ): ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ ಫೋರ್ ಪಂದ್ಯಕ್ಕೆ ಮುನ್ನ ಭಾರತದ ವೇಗದ ಬೌಲಿಂಗ್ ಮುಂಚೂಣಿಯಲ್ಲಿರುವ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ.

ತನ್ನ ಮಗ ಮೊದಲ ಮಗುವಿನ ಜನನದ ( ಅಂಗದ್‌) ಕಾರಣ ಪಲ್ಲೆಕೆಲೆಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ನಂತರ ಭಾರತಕ್ಕೆ ಮರಳಿದ್ದರು. ಇದರಿಂದ ಗುಂಪು ಹಂತದ ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ, ಭಾರತ ನೇಪಾಳದ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿ ಸೂಪರ್​ ಫೋರ್​ಗೆ ಪ್ರವೇಶ ಪಡೆದುಕೊಂಡಿದೆ.

ಬುಮ್ರಾ ಸೂಪರ್​ ಫೋರ್​ ಹಂತದ ಮೊದಲ ಪಂದ್ಯಕ್ಕೆ ಈಗ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಭಾರತ ಸೆಪ್ಟೆಂಬರ್​ 10 ರಂದು ಪಾಕಿಸ್ತಾನದ ವಿರುದ್ಧ ಏಷ್ಯಕಪ್​ನ ಸೂಪರ್​ ಫೋರ್ ಹಂತದ ಮೊದಲ ಪಂದ್ಯವನ್ನು ಎದುರಿಸಲಿದೆ. ನಂತರ 12 ರಂದು ಶ್ರೀಲಂಕಾ ಮತ್ತು 15 ರಂದು ಬಾಂಗ್ಲಾದೇಶದ ಜೊತೆಗೆ ಹಣಾಹಣಿ ಇರಲಿದೆ. ಈ ಎಲ್ಲ ಪಂದ್ಯಗಳಲ್ಲಿ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಬ್ಬ ಪ್ರಮುಖ ವೇಗಿಯಾಗಿ ಶಮಿ ಮತ್ತು ಸಿರಾಜ್​ ಅವರನ್ನು ಪಿಚ್​​ಗೆ ತಕ್ಕಂತೆ ಆಯ್ಕೆ ನಡೆಯಲಿದೆ. ಏಷ್ಯಾಕಪ್​ಗೆ ಆಯ್ಕೆ ಆಗಿರುವ ಪ್ರಸಿದ್ಧ ಕೃಷ್ಣಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ.

ಬುಮ್ರಾ ಶುಕ್ರವಾರ ಸಂಜೆ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಅಭ್ಯಾಸ ಸೆಷನ್‌ಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರತಿಕೂಲ ಹವಾಮಾನವನ್ನು ನೋಡಿಕೊಂಡು ಆಟಗಾರು ಒಳಾಂಗಣ ಅಥವಾ ಹೊರಾಂಗಣದಲ್ಲಿ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಾರೆ. ಗುರುವಾರ ಮಳೆಯ ಹಿನ್ನಲೆ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದರು. ಇಂದು ಎಸಿಸಿ ಟ್ವಿಟರ್​ನಲ್ಲಿ ಹವಾಮಾನ ತಿಳಿ ಆಗಿರುವುದರ ಚಿತ್ರಣವನ್ನು ಪೋಸ್ಟ್​ ಮಾಡಿತ್ತು.

ಗಾಯದಿಂದ ಚೇತರಿಸಿಕೊಂಡ ನಂತರ ಬುಮ್ರಾ ಏಕದಿನ ಕ್ರಿಕೆಟ್​ ಆಡಿಲ್ಲ. ಐರ್ಲೆಂಡ್​ ವಿರುದ್ಧದ ಟಿ20 ಸರಣಿಯ ಮುಂದಾಳತ್ವ ವಹಿಸಿದ್ದ ಬುಮ್ರಾ ಯಶಸ್ವಿಯಾಗಿದ್ದರು. ನಂತರ ಏಷ್ಯಾಕಪ್​ ತಂಡಕ್ಕೆ ಬುಮ್ರಾ ಆಯ್ಕೆ ಆಗಿದ್ದರು. ಏಷ್ಯಾಕಪ್​ನ ಗುಂಪು ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್​ ಮಾತ್ರ ಮಾಡಲು ಸಾಧ್ಯವಾಯಿತು, ಬೌಲಿಂಗ್​ಗೆ ಮಳೆ ಅಡ್ಡಿಪಡಿಸಿತ್ತು.

ಭಾನುವಾರ ನಡೆಯುವ ಭಾರತ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇರುವ ಕಾರಣ ಸೋಮವಾರವನ್ನು ಮೀಸಲು ದಿನ ಎಂದು ಎಸಿಸಿ ಪ್ರಕಟಿಸಿದೆ. ಹೀಗಾಗಿ ಈ ಪಂದ್ಯ ಸಪ್ಟೆಂಬರ್​ 10ರಂದು ನಡೆಯದಿದ್ದರು 11ಕ್ಕೆ ಪಂದ್ಯ ನಡೆಯಲಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ