Breaking News
Home / ರಾಜಕೀಯ / ಗುಜರಾತ್​ನಲ್ಲಿ ಹಾವು ಕಡಿತ: ಉತ್ತರ ಪ್ರದೇಶದಲ್ಲಿ ಚಿಕಿತ್ಸೆ… 1300ಕಿ.ಮೀ ಕ್ರಮಿಸಿ ಬದುಕುಳಿದ ಧೀರ

ಗುಜರಾತ್​ನಲ್ಲಿ ಹಾವು ಕಡಿತ: ಉತ್ತರ ಪ್ರದೇಶದಲ್ಲಿ ಚಿಕಿತ್ಸೆ… 1300ಕಿ.ಮೀ ಕ್ರಮಿಸಿ ಬದುಕುಳಿದ ಧೀರ

Spread the love

ಕಾನ್ಪುರ(ಉತ್ತರ ಪ್ರದೇಶ): ಗುಜರಾತಿನಲ್ಲಿ ಹಾವು ಕಡಿತಕ್ಕೊಳಗಾದ ಯುವಕನೊಬ್ಬ ಚಿಕಿತ್ಸೆಗಾಗಿ ಸುಮಾರು 1,300 ಕಿ.ಮೀ ಕ್ರಮಿಸಿ ಉತ್ತರ ಪ್ರದೇಶದ ಕಾನ್ಪುರ ತಲುಪಿ ಬದುಕುಳಿದಿರುವ ಅಚ್ಚರಿಯ ಘಟನೆ ನಡೆದಿದೆ.

ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮ ಫತೇಪುರದ ಸುನಿಲ್​ ಕುಮಾರ್​ (20) ನೇ ಹೀಗೆ ಬದುಕುಳಿದ ಯುವಕನಾಗಿದ್ದಾನೆ.

ಈತ ಗುಜರಾತ್​ನ ರಾಜ್​ಕೋಟ್​ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 15ರಂದು ಆತನಿಗೆ ಹಾವು ಕಚ್ಚಿದೆ. ತಕ್ಷಣವೇ ಅವನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಸುನಿಲ್​ ಆರೋಗ್ಯ ಹಾವು ಕಡಿತದಿಂದ ಹದಗೆಡುತ್ತಾ ಹೊರಟಿತ್ತು. ಅಲ್ಲದೆ ಆತ ಪ್ರಜ್ಞಾಹೀನಾಗಿದ್ದ. ಕುಟುಂಬದವರಿಗೆಲ್ಲ ಒಂದು ಬಾರಿ ಹೃದಯ ಬಡಿತ ನಿಂತಂತಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಡಮಾಡದೇ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು.

ಆದರೆ, ಗುಜಾರತ್​ನಿಂದ ಉತ್ತರಪ್ರದೇಶದ ಕಾನ್ಪುರ ಆಸ್ಪತ್ರೆಗೆ ಸುಮಾರು 1.300 ಕಿ.ಮೀ ದೂರವಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಅಷ್ಟು ದೂರ ಕ್ರಮಿಸಿ ಸುನಿಲ್​ನನ್ನು ಉಳಿಸಿಕೊಳ್ಳುವುದು ಕುಟುಂಬದವರಿಗೆ ಸವಾಲಾಗಿತ್ತು. ತಕ್ಷಣವೇ ಗುಜರಾತ್​ನಲ್ಲಿ 51,000 ರೂಪಾಯಿಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಆಂಬ್ಯುಲೆನ್ಸ್​ನ್ನು ಬಾಡಿಗೆಗೆ ಪಡೆದು ಸುನಿಲ್​ನ್ನು 1300 ಕಿಮೀ ಪ್ರಯಾಣಿಸಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದರು.

ಆಸ್ಪತ್ರೆಗೆ ತಲುಪಿದ ಕೂಡಲೇ ಸುನಿಲ್​ನನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ಆರಂಭಿಸಲಾಯಿತು. ತುರ್ತು ಚಿಕಿತ್ಸೆ ನೀಡಿ ಪ್ರತಿ ನಿಮಿಷ ಸುನಿಲ್​ ಆರೋಗ್ಯದ ಮೇಲೆ ನಿಗಾ ಇಡಲಾಯಿತು. ಅದೃಷ್ಟವಶಾತ್​ ಸುನಿಲ್​ ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಾ ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ಅಂತಿಮವಾಗಿ ಶನಿವಾರ ಆತನಿಗೆ ಅಳವಡಿಸಿದ್ದ ವೆಂಟಿಲೇಟರ್​ನ್ನು ತೆಗೆಯಲಾಗಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ