Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ನಂಬಿಕೆ ದ್ರೋಹ ಮಾಡಿದನೆಂದು ಸ್ನೇಹಿತನನ್ನೇ ದುಷ್ಕರ್ಮಿಗಳ ಕೊಲೆ

ನಂಬಿಕೆ ದ್ರೋಹ ಮಾಡಿದನೆಂದು ಸ್ನೇಹಿತನನ್ನೇ ದುಷ್ಕರ್ಮಿಗಳ ಕೊಲೆ

Spread the love

ಚಿಕ್ಕೋಡಿ : ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ಹಾರುಗೇರಿ ಗ್ರಾಮದ ಅಕ್ಬರ್ ಶಬ್ಬೀರ್ ಜಮಾದಾರ್ (22) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಕಳ್ಳತನದ ವ್ಯವಹಾರದಲ್ಲಿ ನಂಬಿಕೆ ದ್ರೋಹ ಎಸಗಿದ್ದಾನೆಂದು ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಮೃತನ ತಾಯಿ ಕೈರುಣ ಜಮಾದಾರ ಆರೋಪಿಸಿದರು. ಬಸ್ತವಾಡ ಗ್ರಾಮದ ಹೊರವಲಯದಲ್ಲಿ ಜಮಾದಾರ್​ನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದು, ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಳೆದ ಎರಡು ಮೂರು ವರ್ಷಗಳಿಂದ ಬಡಬ್ಯಾಕುಡ ಗ್ರಾಮದ ಸ್ನೇಹಿತರೊಂದಿಗೆ ಅಕ್ಬರ್ ಶಬ್ಬೀರ್ ಸೇರಿಕೊಂಡು ಜಾನುವಾರು ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ. ಕೊಲೆಯಾದ ಯುವಕ ಅಕ್ಬರ್ ಮನೆಯ ಪಕ್ಕದಲ್ಲಿ ಆತನ ಸ್ನೇಹಿತರು ಕಳೆದ ನಾಲ್ಕು ತಿಂಗಳ ಹಿಂದೆ ಎಮ್ಮೆ ಕದ್ದಿದ್ದಾರೆ. ಎಮ್ಮೆ ಕಳೆದುಕೊಂಡ ಕುಟುಂಬ ತೀರ ಬಡತನದಲ್ಲಿ ಬದುಕುತ್ತಿದ್ದರು. ಹೀಗಾಗಿ, ಕಳ್ಳತನ ಮಾಡಿದವರ ಮಾಹಿತಿಯನ್ನು ಆ ಮಾಲೀಕರಿಗೆ ಅಕ್ಬರ್ ನೀಡಿದ್ದಾನೆ. ಇದಾದ ಬಳಿಕ ಪೊಲೀಸರ ಸಮ್ಮುಖದಲ್ಲಿ ಕಳ್ಳರ ತಂಡ ಎಮ್ಮೆಯನ್ನು ಮರಳಿ ಮಾಲೀಕನಿಗೆ ಕೊಟ್ಟಿದ್ದರು.

ಹೀಗಾಗಿ, ಇನ್ನುಳಿದ ಸ್ನೇಹಿತರು ಅಕ್ಬರ್ ಮೇಲೆ ಹಗೆ ಸಾಧಿಸಿದ್ದು, ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಎರಡು ಬಾರಿ ಪ್ರಾಣ ಬೆದರಿಕೆ ಹಾಕಿದ್ದರು. ಕಳೆದ ಗುರುವಾರ ಸ್ನೇಹಿತರು ಪಾರ್ಟಿ ಮಾಡೋಣ ಬಾ ಎಂದು ಕರೆಸಿ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಹೊರವಲಯದಲ್ಲಿ ಅಕ್ಬರ್​ನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ” ಎಂದು ತಾಯಿ ಕೈರುಣ ಜಮಾದಾರ ಮಾಹಿತಿ ನೀಡಿದ್ದಾರೆ.

ಹಾರೂಗೇರಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

ಕುಟುಂಬದ ಬಗ್ಗೆ ಹಗುರವಾಗಿ ಮಾತು, ಸ್ನೇಹಿತನ ಕೊಲೆ : ಇನ್ನೊಂದೆಡೆ, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿ ರೈಲ್ವೆ ಹಳಿಯ ಬಳಿ ಎಸೆದು ಹೋಗಿರುವ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ (ಜುಲೈ 5-2022) ನಡೆದಿತ್ತು. ಯಮನೂರ (43) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಿರಂಜೀವಿಯನ್ನು ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದರು.


Spread the love

About Laxminews 24x7

Check Also

ಕುಗ ನೊಳಿ ಚೆಕ್ ಪೋಸ್ಟ್ ನಲ್ಲಿ 14ಲಕ್ಷ್ ರೂಪಾಯಿ ನಗ ದು ಪ ತ್ತೆ

Spread the loveಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ದಿನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ