Breaking News
Home / Uncategorized / ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ

Spread the love

ಬೆಂಗಳೂರು : ಸಿರಾ ಕ್ಷೇತ್ರದಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎಂದು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಟಿಬಿ ಜಯಚಂದ್ರ ನೈಸ್‌ ಸಂಸ್ಥೆಯ ಹಗರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೇ ಆ ವರದಿಯನ್ವಯ ನೈಸ್‌ ಸಂಸ್ಥೆಯ ಮೇಲೆ ಕ್ರಮ ಜಾರಿಗೊಳಿಸುವಂತೆ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದರು.

ಅಂದಿನಿಂದಲೂ ಜಯಚಂದ್ರರಿಗೆ ಸತತವಾಗಿ ಬೇರೆ ಬೇರೆ ನಂಬರುಗಳಿಂದ ದೂರವಾಣಿ ಕರೆ ಬರಲಾರಂಭಿಸಿವೆ. ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಆದ್ದರಿಂದ ಕೂಡಲೇ ಕಾರ್ಯ ಪ್ರವೃತ್ತರಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಚಂದ್ರರ ವಿಶೇಷ ಕರ್ತವ್ಯಾಧಿಕಾರಿ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.

ನಗರದ ಡಾಲ​ರ್ಸ್​ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಇದ್ದ ವೇಳೆ ಜಯಚಂದ್ರ ಅವರಿಗೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಅವರು, ಜಯಚಂದ್ರ ಅವರ ಮನೆಗೆ ತೆರಳಿ ಮಾಹಿತಿ ಪಡೆದಿದ್ದಾರೆ.

ಮಾಜಿ ಸಚಿವ ಜಯಚಂದ್ರಗೆ ಸೂಕ್ತ ಭದ್ರತೆ : 2014 ಮತ್ತು 2016ರ ನಡುವೆ ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್‌ನಲ್ಲಿ (ನೈಸ್) ನಡೆದಿರುವ ಅಕ್ರಮಗಳ ಕುರಿತು ಮಾಜಿ ಸಚಿವ ಮತ್ತು ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಅವರು ವರದಿ ನೀಡಿದ್ದರು. ಇದರ ಬೆನ್ನಲ್ಲೇ ಜೀವ ಬೆದರಿಕೆ ಕರೆ ಬಂದಿದೆ. ಹೀಗಾಗಿ ಅವರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್​ಕೆ ಪಾಟೀಲ್ ಹೇಳಿದರು.

 


Spread the love

About Laxminews 24x7

Check Also

ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

Spread the love ಹುಬ್ಬಳ್ಳಿ: ಇಲ್ಲಿನ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ. 4 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ