Breaking News
Home / ಜಿಲ್ಲೆ / ಚಿಕ್ಕ ಬಳ್ಳಾಪುರ / ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ಪ್ರವಾಸಿಗರು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ಪ್ರವಾಸಿಗರು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

Spread the love

ಚಿಕ್ಕಬಳ್ಳಾಪುರ: ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ರಾಜಧಾನಿಗೆ ಹತ್ತಿರದಲ್ಲೇ ಇರುವ ಜಲಾಶಯವೊಂದು ಮೈಮನ ತಣಿಸುತ್ತಿದೆ. ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ಪ್ರವಾಸಿಗರು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಕೊರೊನಾಗೆ ಅಧಿಕೃತವಾಗಿ ಇನ್ನೂ ಲಸಿಕೆ ಬಂದಿಲ್ಲ. ಆದರೆ ಜನ ಈಗಾಗಲೇ ಡೆಡ್ಲಿ ವೈರಸ್ ಅನ್ನು ಮರೆತಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಶ್ರೀನಿವಾಸಸಾಗರ ಜಲಾಶಯ. ಇಲ್ಲಿ ಪ್ರವಾಸಿಗರು ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶ್ರೀನಿವಾಸ ಸಾಗರ ಜಲಾಶಯ ತುಂಬಿ ಕೋಡಿ ಹರಿಯುತ್ತಿದೆ. ಅದರಲ್ಲಿ 80 ಅಡಿ ಮೇಲಿಂದ ನೀರು ಬೀಳುವ ದೃಶ್ಯ ಮನಮೋಹಕವಾಗಿದ್ದು, ನೀರಿನ ವೈಯಾರ ನೋಡಲು ಜನಸಾಗರವೇ ಹರಿದು ಬರುತ್ತಿದೆ.

ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಇದ್ದು ಇದ್ದು ಬೇಜಾರಾಗಿದ್ದ ಗೃಹಿಣಿಯರು, ತಾವೇನು ಕಡಿಮೆ ಅಂತ ತಮ್ಮ ಗಂಡಂದಿರರಿಗೆ ಸೆಡ್ಡು ಹೊಡೆದವರಂತೆ ಮಕ್ಕಳ ಸಮೇತ ಜಲಾಶಯ ಗೊಡೆ ಮೇಲೇರಿ ಧುಮ್ಮಿಕ್ಕುವ ನೀರಿನಲ್ಲಿ ಒದ್ದೆಯಾಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಇಲ್ಲಿನ ಸ್ಥಳೀಯ ಪೊಲೀಸರಿಗೆ ಪ್ರವಾಸಿಗರನ್ನು ನಿಭಾಯಿಸೋದೇ ದೊಡ್ಡ ಸವಾಲಾಗಿದೆ.

ಒಟ್ಟಿನಲ್ಲಿ ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದರೂ ಪ್ರವಾಸಿಗರು ಕೇಳುವ ಪರಿಸ್ಥಿತಿಯಲ್ಲೇ ಇರಲ್ಲ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ


Spread the love

About Laxminews 24x7

Check Also

ಪೂಜೆ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಪೂಜಾರಿ ಸಾವು; ನೋಡನೋಡುತ್ತಿದ್ದಂತೆ ನೂರಾರು ಅಡಿ ಆಳಕ್ಕೆ ಉರುಳಿದ ದೇಹ..

Spread the loveಚಿಕ್ಕಬಳ್ಳಾಪುರ: ಪೂಜೆಯ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿಯೊಬ್ಬರು ಮೃತಪಟ್ಟಿದ್ದು, ನೆರೆದಿದ್ದ ಭಕ್ತರೆಲ್ಲ ನೋಡನೋಡುತ್ತಿದ್ದಂತೆ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ