Breaking News
Home / ರಾಜಕೀಯ / ಕಾರ್‌ನ ಡಿಕ್ಕಿಯಲ್ಲಿತ್ತು 3 ಕೋಟಿ ರೂಪಾಯಿ, ಹಣ ಎಣಿಕೆ ಯಂತ್ರ: ಪುಣೆ ಪೊಲೀಸರಿಂದ ಜಪ್ತಿ

ಕಾರ್‌ನ ಡಿಕ್ಕಿಯಲ್ಲಿತ್ತು 3 ಕೋಟಿ ರೂಪಾಯಿ, ಹಣ ಎಣಿಕೆ ಯಂತ್ರ: ಪುಣೆ ಪೊಲೀಸರಿಂದ ಜಪ್ತಿ

Spread the love

ಪುಣೆ (ಮಹಾರಾಷ್ಟ್ರ): ಪುಣೆ-ಸೊಲ್ಲಾಪುರ ಹೆದ್ದಾರಿಯ ಹಡಪ್ಸರ್ ಪ್ರದೇಶದಲ್ಲಿ 3 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಮಹತ್ವ ಪಡೆದಿದೆ.

ಹಡಪ್ಸರ್ ಪ್ರದೇಶದ ದ್ರಾಕ್ಷಿ ಸಂಶೋಧನಾ ಕೇಂದ್ರದ ಬಳಿ ಅಪರಾಧ ವಿಭಾಗದ ಸಹಾಯದಿಂದ ಪೊಲೀಸರು 3 ಕೋಟಿ 42 ಲಕ್ಷಕ್ಕೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ. ಹಣ ಎಣಿಕೆ ಯಂತ್ರಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಕಾರ್ ಚಾಲಕ ಪ್ರಶಾಂತ ಧನಪಾಲ್ ಗಾಂಧಿ (47) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಮೂಲಗಳ ಪ್ರಕಾರ, “ಪುಣೆ ಪೊಲೀಸರು ಕಳೆದ ಕೆಲವು ದಿನಗಳಿಂದ ವಿವಿಧೆಡೆ ನಾಕಾಬಂದಿ ಹಾಕಿ ರಾತ್ರಿ ವೇಳೆ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ 11:30ರ ಸುಮಾರಿಗೆ ಹಡಪ್ಸರ್ ಪ್ರದೇಶದ ಶೆವಾಲೆವಾಡಿ ಪ್ರದೇಶದ ದ್ರಾಕ್ಷಿ ಸಂಶೋಧನಾ ಕೇಂದ್ರದ ಬಳಿ ಪೊಲೀಸರು ಶಂಕಿತ ವಾಹನವನ್ನು ಪರಿಶೀಲಿಸುತ್ತಿದ್ದರು. ಕಾರ್‌ನಲ್ಲಿದ್ದ ವ್ಯಕ್ತಿಯ ಚಲನವಲನದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಡಿಕ್ಕಿ ತೆರೆದು ನೋಡಿದ್ದಾರೆ. ಅನುಮಾನಾಸ್ಪದವಾಗಿ ಕೆಲವು ಚೀಲಗಳು ಅಲ್ಲಿದ್ದವು. ಬ್ಯಾಗ್ ತೆರೆದು ನೋಡಿದಾಗ ನೋಟುಗಳ ಕಂತೆಗಳು ಸಿಕ್ಕಿವೆ. ಕಾರು ಸಮೇತ ಚಾಲಕನನ್ನು ಠಾಣೆಗೆ ಕರೆತರಲಾಯಿತು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರಾಫಿಕ್ ಬ್ರಾಂಚ್, ಲೋನಿ ಕಲ್ಭೋರ್ ಪೊಲೀಸ್ ಠಾಣೆ, ಹಡಪ್ಸರ್ ಪೊಲೀಸ್ ಠಾಣೆ ಹಾಗೂ ಅಪರಾಧ ವಿಭಾಗದ ಘಟಕ 5ರ ಪೊಲೀಸರು ಕಾರು ಹಾಗೂ ಚಾಲಕನನ್ನು ಹಡಪ್ಸರ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕಾರ್‌ನಲ್ಲಿ ಒಟ್ಟು 3 ಕೋಟಿ 42 ಲಕ್ಷದ 66 ಸಾವಿರ ರೂ. ಪತ್ತೆಯಾಗಿದೆ. ಇಬ್ಬರು ನ್ಯಾಯಾಧೀಶರ ಮುಂದೆ ಹಣವನ್ನು ಎಣಿಕೆ ಮಾಡಿ ಸೀಲ್ ಮಾಡಲಾಗಿದೆ.

ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 41(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮದ ಬಗ್ಗೆ ಪುಣೆಯ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ವಿಚಾರಣೆಯಲ್ಲಿ ಚಾಲಕ ಪ್ರಶಾಂತ ಧನಪಾಲ್ ಗಾಂಧಿ, ಹಣವನ್ನು ತಮ್ಮ ನಿವಾಸದಿಂದ ಮಹಾರಾಷ್ಟ್ರ ಬ್ಯಾಂಕ್‌ಗೆ ಪಾವತಿಸಲು ಸಾಗಿಸಲಾಗುತ್ತಿತ್ತು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ವಶಪಡಿಸಿಕೊಂಡ ಹಣವನ್ನು ನಿಖರ ಉದ್ದೇಶಕ್ಕಾಗಿ ತರಲಾಗಿತ್ತಾ? ಅಥವಾ ಕರ್ನಾಟಕ ಚುನಾವಣೆಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ? ಈ ಹಣವನ್ನು ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ಹಡಪ್ಸರ್ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ