Breaking News
Home / ರಾಜಕೀಯ / ಕಾಂಗ್ರೆಸ್‌ಗೆ ಗೆಲುವಿನ ಮುನ್ಸೂಚನೆ ನೀಡಿದ ಮಹತ್ವದ ಸಮೀಕ್ಷೆ- ಯಾವ ಭಾಗದಲ್ಲಿ ಎಷ್ಟು ಸ್ಥಾನ ತಿಳಿಯಿರಿ

ಕಾಂಗ್ರೆಸ್‌ಗೆ ಗೆಲುವಿನ ಮುನ್ಸೂಚನೆ ನೀಡಿದ ಮಹತ್ವದ ಸಮೀಕ್ಷೆ- ಯಾವ ಭಾಗದಲ್ಲಿ ಎಷ್ಟು ಸ್ಥಾನ ತಿಳಿಯಿರಿ

Spread the love

ಬೆಂಗಳೂರು, : ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣಾ ( Karnataka Assembly Election 2023 ) ಪೂರ್ವ ಸಮೀಕ್ಷೆಗಳು ಹೊರಬರುತ್ತಿವೆ. ಈ ಹಿಂದೆ ಬಂದಿರುವ ಸಮೀಕ್ಷೆಗಳನ್ನು ನೋಡುವುದಾದರೆ, ಕರ್ನಾಟಕದ ಮತದಾರರು ಆಡಳಿತಾರೂಢ ಬಿಜೆಪಿಗೆ ( BJP ) ಹೆಚ್ಚಿನ ಮನ್ನಣೆ ನೀಡುತ್ತಿಲ್ಲ ಎನ್ನುವುದು ತಿಳಿದುಬರುತ್ತದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ( Congress ) ಲಾಭವಾಗಬಹುದು ಎಂಬುದನ್ನು ಮಹತ್ವದ ಚುನಾವಣಾ ಸಮೀಕ್ಷೆಗಳು ಬಹಿರಂಗ ಪಡಿಸಿವೆ.

ಸೋಮವಾರ ಹೊರ ಬಂದಿರುವ ಲೋಕ್‌ಪೋಲ್‌ ( Lok poll ) ಸಮೀಕ್ಷೆಯು ಕರ್ನಾಟಕದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ. ಮಾರ್ಚ್ ಅಂತ್ಯದವರೆಗೆ ನಡೆದಿರುವ ವಿಸ್ತೃತ ಸಮೀಕ್ಷೆಯು ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಪಕ್ಷವು 128 ರಿಂದ 131 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿಯು 66 ರಿಂದ 69 ಸ್ಥಾನಗಳಲ್ಲಿ ಗೆಲ್ಲಲಿದೆ, 21 ರಿಂದ 25 ಕ್ಷೇತ್ರಗಳಲ್ಲಿ ಜೆಡಿಎಸ್‌ ಜಯ ಸಾಧಿಸಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಹೇಳಿದೆ.

ಯಾವ ಭಾಗದಲ್ಲಿ ಎಷ್ಟು ಸ್ಥಾನ?

ಕರ್ನಾಟಕದಲ್ಲಿ ಮಾರ್ಚ್ ಕೊನೆಯ ವಾರದವರೆಗೆ ವಲಯವಾರು ಡೇಟಾವನ್ನು ಲೋಕ್‌ಪೋಲ್‌ ಸರ್ವೇ ಮಾಡಿದೆ. ಈ ವಲಯವಾರ ಸರ್ವೇ ಅಲ್ಲಿ ಕರ್ನಾಟಕವನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಹಳೇ ಮೈಸೂರು, ಬೆಂಗಳೂರು, ಕಲ್ಯಾಣ ಕರ್ನಾಟಕ ( ಹೈದರಾಬಾದ್‌ ಕರ್ನಾಟಕ ), ಕಿತ್ತೂರು ಕರ್ನಾಟಕ ( ಮುಂಬೈ ಕರ್ನಾಟಕ ), ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನಾಗಿ ವಿಂಗಡಿಸಲಾಗಿದೆ.

ಹಳೇ ಮೈಸೂರು

ಹಳೇ ಮೈಸೂರು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 27 ರಂದ 30 ಸ್ಥಾನಗಳು ಸಿಗಲಿವೆ. ಬಿಜೆಪಿಗೆ ಬಿಜೆಪಿಗೆ 5 ರಿಂದ ಆರು ಸ್ಥಾನಗಳು ದೊರೆಯಲಿವೆ. ಜೆಡಿಎಸ್‌ಗೆ 20 ರಿಂದ 22 ಸ್ಥಾನಗಳು ಒಲಿಯಲಿವೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವವಿದೆ. ಇಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಭಾರೀ ಪೈಪೋಟಿ ಏರ್ಪಡಲಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು.

ಬೆಂಗಳೂರು

ಬೆಂಗಳೂರು ನಗರ ಭಾಗದಲ್ಲಿಯೂ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದು ಸಮೀಕ್ಷೆ ಹೇಳಿದೆ. ಬೆಂಗಳೂರಿನ ಒಟ್ಟು 28 ಕ್ಷೇತ್ರಗಳಲ್ಲಿ 22 ರಿಂದ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ. ಆಡಳಿತಾರೂಢ ಬಿಜೆಪಿ 9 ರಿಂದ 11 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಒಂದರಿಂದ ನಾಲ್ಕು ಸ್ಥಾನಗಳಲ್ಲಿ ಜೆಡಿಎಸ್‌ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಕಲ್ಯಾಣ ಕರ್ನಾಟಕ

ಕಲ್ಯಾಣ ಕರ್ನಾಟಕದಲ್ಲಿ 27 ರಿಂದ 30 ಸ್ಥಾನಗಳು ಬಿಜೆಪಿಗೆ ಒಲಿಯಲಿವೆ. ಆಡಳಿತಾರೂಢ ಬಿಜೆಪಿಗೆ ಎಂಟರಿಂದ ಹನ್ನೊಂದು ಸ್ಥಾನಗಳು ಸಿಗಲಿವೆ. ಜೆಡಿಎಸ್‌ಗೆ ಕೇವಲ ಎರಡು ಸ್ಥಾನಗಳು ಬರಬಹುದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಜಯಭೇರಿ ಬಾರಿಸಬಹುದು ಎಂದು ಲೋಕ್‌ಪೋಲ್‌ ಸಮೀಕ್ಷೆ ಹೇಳಿದೆ. ಈ ಭಾಗದಲ್ಲಿ ಲಿಂಗಾಯತ ಹಾಗೂ ಒಬಿಸಿ ಮತಗಳು ನಿರ್ನಾಯಕವಾಗಲಿವೆ.

ಕಿತ್ತೂರು ಕರ್ನಾಟಕ

ಕಿತ್ತೂರು ಕರ್ನಾಟಕ ಅಥವಾ ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 26 ರಿಂದ 28 ಸ್ಥಾನಗಳು ಬರುಬಹುದು. ಬಿಜೆಪಿ 21 ರಿಂದ 23 ಕ್ಷೇತ್ರಗಳಲ್ಲಿ ಜಯಗಳಿಸಬಹುದು. ಜೆಡಿಎಸ್‌ ಪಕ್ಷಕ್ಕೆ ಕೇವಲ ಒಂದು ಸ್ಥಾನ ಸಿಗಬಹುದು ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ. ಈ ಭಾಗದಲ್ಲಿ ಲಿಂಗಾಯತ ಸಮುದಾಯದ ಪ್ರಭಾವವಿದ್ದು, ಕಳೆದ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿ ಆಗಿತ್ತು.

ಕರಾವಳಿ ಕರ್ನಾಟಕ

ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 8 ರಿಂದ 10 ಸ್ಥಾನಗಳು ದೊರೆಯಬಹುದು. ಬಿಜೆಪಿಗೆ 14 ರಿಂದ 16 ಸ್ಥಾನಗಳು ಸಿಗಬಹುದು. ಜೆಡಿಎಸ್‌ಗೆ ಒಂದು ಕ್ಷೇತ್ರವಷ್ಟೇ ಒಲಿಯಬಹುದು ಎಂದು ಸಮೀಕ್ಷೆ ಹೇಳಿದೆ. ಹಿಂದುತ್ವದ ಅಲೆ ಇರುವ ಕರಾವಳಿ ಭಾಗದಲ್ಲಿ ಬಿಜೆಪಿಗೆ ಬಹುದೊಡ್ಡ ಮತಬ್ಯಾಂಕ್‌ ಇದೆ. ಆದರೂ, ಈ ಭಾಗದಲ್ಲಿ ಕಾಂಗ್ರೆಸ್‌ಗೆ ಇಷ್ಟು ಸ್ಥಾನಗಳು ಬರುವುದು ಗಮನಿಸಿದರೆ, ಅಧಿಕಾರ ವಿರೋಧಿ ಅಲೆ ದಟ್ಟವಾಗಿದೆ ಎಂದು ಹೇಳಬಹುದು.

ಮಧ್ಯ ಕರ್ನಾಟಕ

ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 9 ರಿಂದ 10 ಸ್ಥಾನಗಳು ಒಲಿಯಬಹುದು. ಬಿಜೆಪಿಗೆ 10 ರಿಂದ 12 ಸ್ಥಾನಗಳು ಸಿಗಬಹುದು. ಜೆಡಿಎಸ್‌ಗೆ ಒಂದು ಸ್ಥಾನ ದೊರೆಯಬಹುದು ಎಂದು ಸಮೀಕ್ಷೆ ಹೇಳಿದೆ


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ