Breaking News
Home / ಜಿಲ್ಲೆ / ಬಳ್ಳಾರಿ / ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕತ೯ವ್ಯವಾಗಿದೆ-: ನ್ಯಾಯಾಧೀಶ ಕೆ.ಎ.ನಾಗೇಶ

ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕತ೯ವ್ಯವಾಗಿದೆ-: ನ್ಯಾಯಾಧೀಶ ಕೆ.ಎ.ನಾಗೇಶ

Spread the love

ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕತ೯ವ್ಯವಾಗಿದೆ-ನ್ಯಾಯಾಧೀಶ ಕೆ.ಎ.ನಾಗೇಶಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಕೊರೋನಾ ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕಥ೯ವ್ಯವಾಗಿದೆ

ಎಂದು, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾ.ಕಾ.ಸೇ.ಸಮಿತಿ ಅಧ್ಯಕ್ಷರಾದ ಕೆ.ಎ.ನಾಗೇಶ ರವರು ನುಡಿದರು.ಅವರು ಅ17ರಂದು ಕೂಡ್ಲಿಗಿ ಪಟ್ಟಣದಲ್ಲಿ ಕ.ರಾ.ಕಾ.ಸೇ.ಪ್ರಾಧಿಕಾರ ನಿಧೇ೯ಶನದಂತೆ,ತಾಲೂಕು ವಕೀಲರ ಸಂಘ, ತಾ.ಕಾ.ಸೇ.ಸಮಿತಿ,ತಾಲೂಕು ಆಡಳಿತ ಹಾಗೂ ತಾಪಂ ಮತ್ತು ಪಪಂ,ಆರೋಗ್ಯ ಇಲಾಖೆ,ನ್ಯಾಯಾಂಗ ಇಲಾಖೆ,

ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ.ಏಪ೯ಡಿಸಲಾಗಿದ್ದ ಕೋವಿಡ್19 ಸಾವ೯ಜನಿಕ ಜಾಗ್ರತಿ ಹಾಗೂ ನಿಯಂತ್ರಣ ಪ್ರಚಾರ ಆಂದೋಲನ ಜಾಥಾ ಕಾಯ೯ಕ್ರಮದಲ್ಲಿ,ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಪ್ರಪಂಚದ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ,ಆರೋಗ್ಯ ಇಲಾಖೆ ಸೂಚಿಸಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು, ಎಲ್ಲರೂ ಪಾಲಿಸಲೇಬೇಕು ಎಂದರು.ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಕಾ.ಸೇ.ಸಮಿತಿ ಸದಸ್ಯ ಕಾಯ೯ದಶಿ೯ ಮುರುಗೇಂದ್ರ ತುಬಾಕೆ ರವರು ಜಾಥಾಕ್ಕೆ ಹಸಿರು ನಿಶಾನೆ ತೋರೋ ಮೂಲಕ ಚಾಲನೆ ನೀಡಿದರು.ಮದಕರಿ ವೃತ್ತದಲ್ಲಿ ಸಾವ೯ಜನಿಕರನ್ನುದ್ದೇಶಿಸಿ ತಾಲೂಕು ವೈದ್ಯಾಧಿಕಾರಿ ಡಾ” ಷಣ್ಮುಖ ನಾಯ್ಕ ಮಾತನಾಡಿದರು,ಸೋಂಕು ನಿಯಂತ್ರಣದಲ್ಲಿ ಜಿಲ್ಲೆ ಮುಂದೆ ಸಾಗಿದೆ,ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ,ಇತರೆ ಇಲಾಖೆಗಳ ಸಹಯೋಗದೊಂದಿಗೆ,ಸೋಂಕು ತಡೆಗೆ ಶತಾಯ ಗತಾಯ ಪ್ರಾಮಾಣಿಕ ಪ್ರಯತ್ನ ನಡೆಸಿದೆ.ಬೇರೆ ತಾಲೂಕಿಗೆ ಹೋಲಿಸಿದರೆ ಕೂಡ್ಲಿಗಿ ತಾಲೂಕು ಸೋಂಕು ನಿಯಂತ್ರಣದಲ್ಲಿ ಮುಂದಿದೆ,ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಾವ೯ಜನಿಕರ ಸಹಕಾರ ಅತ್ಯಗತ್ಯ ಎಂದರು.

ತಾ.ಪಂ.ಕಾ.ಅಧಿಕಾರಿ ಜಿ.ಎಂ.ಬಸಣ್ಣ ಹಾಗೂ ಸಿಬ್ಬಂದಿ ಮತ್ತು ಪಪಂ ಆರೊಗ್ಯಾಧಿಕಾರಿ ಗೀತಾ ಹಾಗೂ ಸಿಬ್ಬಂದಿ, ಪೊಲೀಸ್ ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ,ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ನೇತೃದಲ್ಲಿ ಎಲ್ಲಾ ವಕೀಲರು, ಕಾ.ಸೇ.ಸಮಿತಿ ಪದಾಧಿಕಾರಿಗಳು, ಸ.ಸ.ಅಭಿಯೋಜಕರಾದ ಹೊಸವಡ್ರು ಅಣ್ಣೇಶ ಹಾಗೂ ನ್ಯಾಯಾಲದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಥಾದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.

ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತ್ತು ವೃತ್ತಗಳಲ್ಲಿ ಸಂಚರಿಸಿತು,ಸಾವ೯ಜನಿಕ ಸ್ಥಳಗಳಲ್ಲಿ ತೆರಳಿ ಜಾಗ್ರತಿ ಮೂಡಿಸುವಲ್ಲಿ ಯಶಸ್ವಿಯಾಯಿತು.ವಕೀಲರು ಹಾಗೂ ಕಾಮಿ೯ಕ ಮುಖಂಡ ವಿರುಪಾಕ್ಷಪ್ಪ ಜಾಥಾ ನಿರೂಪಿಸಿದರು.


Spread the love

About Laxminews 24x7

Check Also

ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಸೋಮಶೇಖರ್ ರೆಡ್ಡಿ

Spread the love ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ