Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು: ರಕ್ಷಣಾ ವೇದಿಕೆಯ ಪ್ರತಿಭಟನೆ

ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು: ರಕ್ಷಣಾ ವೇದಿಕೆಯ ಪ್ರತಿಭಟನೆ

Spread the love

ಗೋಕಾಕ : ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಆಚರಿಸುವ ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ, ಸರ್ಕಾರ, ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ಗಡಿ ಜಿಲ್ಲೆ ಬೆಳಗಾವಿಯಲ್ಲಿಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿ ಸರಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಿದೆ. ಇದು ಕನ್ನಡಿಗರ ಸಂತೋಷದ ವಿಷಯವಾಗಿದೆ.

 ಜಿಲ್ಲೆಯಲ್ಲಿ ಎಂಇಎಸ್ ಪುಂಡರು ಕಳೆದ ಹಲವು ವರ್ಷಗಳಿಂದ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆ ಮಾಡುತ್ತಾನೆ ಬಂದಿದ್ದಾರೆ. ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ ಎಂದು ಹೇಳುತ್ತಲ್ಲೇ , ಕನ್ನಡ ವಿರೋಧಿಗಳಿಗೆ ಕರಾಳ ದಿನ ಆಚರಣೆಗೆ ಅನುಮತಿ  ನೀಡುತ್ತಾನೇ ಬಂದಿದ್ದಿರಾ.

ಆದರೆ ಈ ಬಾರಿ ಎಂಇಎಸ್ ಮುಖಂಡರಿಗೆ ಕರಾಳ ದಿನ ಆಚರಣೆಗೆ ಅನುಮತಿ ನೀಡಿದ್ದೇ, ಆದ್ರೆ ಕರವೇ ಕಾರ್ಯಕರ್ತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಯಾವುದೇ ಅನಾಹುತಗಳ ನಡೆದ್ರು ಜಿಲ್ಲಾಡಳಿ, ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಕರವೇ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ಖಾನಪ್ಪನವರ,  ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಶೆಟ್ಟೆಪ್ಪಾ ಗಾಡಿವಡ್ಡರ, ಮುಗುಟ ಪೈಲ್ವಾನ್ , ಅಶೋಕ ಬಂಡಿವಡ್ಡರ , ನಿಜಾಮ ನಧಾಪ , ರಮೇಶ ಕಮತಿ , ರಾಮ ಕುಡೆಮ್ಮಿ , ಮಂಜುನಾಥ ಪ್ರಭುನಟ್ಟಿ , ಯಲ್ಲಪ್ಪಾ ಧರ್ಮಟ್ಟಿ , ಶಂಕರಲಿಂಗ ಗಾಡಿವಡ್ಡರ , ಮಾರುತಿ ಗಾಡಿವಡ್ಡರ , ಶಂಕರ ಗಾಡಿವಡ್ಡರ ,ಮಹಾಂತೇಶ ಹಿರೇಮಠ , ರಾಜೇಂದ್ರ ಕೆಂಚನಗುಡ್ಡ , ಸತ್ತಾರ ಬೇಪಾರಿ , ವಿಠ್ಠಲ ಹಂಜಿ , ಪ್ರತೀಕ ಪಾಟೀಲ , ಸಂತೋಷ ಕೋಲಕಾರ ಇತರರು ಇದ್ದರು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ