Breaking News
Home / ಅಂತರಾಷ್ಟ್ರೀಯ / ಅಥಣಿ ತಾಲ್ಲೂಕಿನ ಸತ್ತಿ ಹೊರವಲಯದಲ್ಲಿ ಅಬಕಾರಿ ದಾಳಿ 1.31 ಕೆ ಜಿ ಗಾಂಜಾ ವಶ ಒಬ್ಬನ ಬಂಧನ

ಅಥಣಿ ತಾಲ್ಲೂಕಿನ ಸತ್ತಿ ಹೊರವಲಯದಲ್ಲಿ ಅಬಕಾರಿ ದಾಳಿ 1.31 ಕೆ ಜಿ ಗಾಂಜಾ ವಶ ಒಬ್ಬನ ಬಂಧನ

Spread the love

 

 

ಅಥಣಿ ತಾಲೂಕಿನ ಸತ್ತಿ ಗ್ರಾಮದ ದೇವಪ್ಪ ಈರಪ್ಪ ರುದ್ರಗೌಡರ ಇವರ ಸ್ವಂತ   ಜಮೀನಿನಲ್ಲಿ ದಿನಾಂಕ : 17-10-2020 ರಂದು ಸ್ವಂತ ಲಾಭಕ್ಕಾಗಿ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ಬಗ್ಗೆ ಬಂದ ಖಚಿತ ಮಾಹಿತಿ  ಮೇರೆಗೆ ಡಾ : ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು , ಬೆಳಗಾವಿ ವಿಭಾಗ ರವರ ಮಾರ್ಗದರ್ಶನದಲ್ಲಿ ಕೆ ಅರುಣಕುಮಾರ ಅಬಕಾರಿ ಉಪ ಆಯುಕ್ತರು

ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ರವರ ನೇತೃತ್ವದಲ್ಲಿ ಎಲ್ ಎಸ್ ಸಲಗರೆ ಅಬಕಾರಿ ಉಪ ಅಧೀಕ್ಷಕರು ಅಥಣಿ ಉಪ ವಿಭಾಗ , ಮಹೇಶ ಧೂಳಪ್ಪನವರ ಅಬಕಾರಿ ನಿರೀಕ್ಷಕರು ಅಥಣಿ ವಲಯ , ಬಿ ಎಸ್ ಮುಡಶಿ , ಅಬಕಾರಿ ಉಪ ನಿರೀಕ್ಷಕರು ಅಥಣಿ ವಲಯ , ಎಸ್ ಬಿ ಅಸ್ಕಿ   ಅಬಕಾರಿ ಉಪ ನಿರಿಕ್ಷಕರು

 

 

ಅಥಣಿ ವಲಯ ಹಾಗೂ ಸಿಬ್ಬಂದಿಯೊಂದಿಗೆ ಸದರಿ ಸ್ಥಳದ ಮೇಲೆ ಅಬಕಾರಿ ದಾಳಿ ನಡೆಸಿ ಒಟ್ಟು 131 ಕೆಜಿ ಹಸಿ -ಗಾಂಜಾವನ್ನು ಜಪ್ತು ಪಡಿಸಿಕೊಂಡಿದ್ದು , ಅದರ ಒಟ್ಟು ಮೌಲ್ಯ 5,೦೦,೦೦೦ ರೂಗಳಾಗಿದ್ದು , ಆರೋಪಿತ ಹಾಗೂ ಜಮೀನಿನ ಮಾಲೀಕನಾದ ದೇವಪ್ಪ ಈರಪ್ಪ ರುದ್ರಗೌಡರ ಇತನನ್ನು ಸ್ಥಳದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದೆ .

ಬೆಳಗಾವಿ ಜಿಲ್ಲೆ ಉತ್ತರ ಅಬಕಾರಿ ಉಪ ಆಯುಕ್ತರಾದ ಕೆ ಅರುಣ್ ಕುಮಾರ್ ಪತ್ರಿಕಾಗೋಷ್ಠಿಯನ್ನು ನಡೆಸಿ ನಮ್ಮ ಅಬಕಾರಿ ಸಿಬ್ಬಂದಿ ಬಹು ಮಹತ್ತರವಾಗಿರತಕ್ಕಂತಹ ದಾಳಿಯನ್ನು ನಡೆಸಿದ್ದಾರೆ ಬರುವ ದಿನಮಾನದಲ್ಲಿ ಕೂಡ ಇಂತಹ ದಾಳಿಗಳು ನಿರಂತರವಾಗಿರುತ್ತದೆ ದಾಳಿಗಳು ಮುಂದುವರಿಯಲಿದ್ದು ಸಾರ್ವಜನಿಕರು ಸುಳಿವು ಸಿಕ್ಕಲ್ಲಿ ನಮ್ಮ ಇಲಾಖೆಗೆ ಮಾಹಿತಿ ನೀಡಬೇಕೆಂದು ಹೇಳಿದರು

ದಾಳಿಯಲ್ಲಿ ವಲಯ ಅಬಕಾರಿ ರಕ್ಷಕರಾದ ಮೊಹನ ಕಾಂಬಳೆ , ಎನ್ ಸಿ ದಾನಪ್ಪನವರ , ಎಸ್ ಐ ಬಂಡಗರ , ಎಸ್ ಎಸ್ ನಾಯಕ , ಎಸ್ ಮಂಗಸೂಳಿ , ಆರ್ ಡಿ ದಿಗ್ಗೇವಾಡಿ , ಆರ್.ಎನ್ ಬಡಿಗೇರ , ವಿಜಯ ಉಪ್ಪಾರ , ಬಿ ಎಂ ಸವದಿ , ಡಿ ಎ ಮುಲ್ಲಾ , ಸಿದ್ಲಿಂಗ್   ಮಾದರ ದಾಳಿಯಲ್ಲಿ ಭಾಗವಹಿಸಿದ್ದರು .

ವರದಿ :ಮಲ್ಲೇಶ ಪಟ್ಟಣ


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ