Breaking News
Home / ರಾಜಕೀಯ / ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಪ್ರಕಟ, ಬಿಜೆಪಿಗೆ ಆಘಾತ

ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಪ್ರಕಟ, ಬಿಜೆಪಿಗೆ ಆಘಾತ

Spread the love

ಬೆಂಗಳೂರು, ಮಾರ್ಚ್ 11: ವಿಧಾನಸಭಾ ಚುನಾವಣೆಗೆ ಮಿಷನ್ 150 ಹೊತ್ತಿರುವ ಬಿಜೆಪಿ, ತನ್ನ ಟಾರ್ಗೆಟ್ ರೀಚ್‌ಗಾಗಿ ಸಮರಾಭ್ಯಾಸ ನಡೆಸುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಪ್ರಚಾರ ಕಾರ್ಯವನ್ನು ಆರಂಭಿಸಿದೆ.

ಈ ಬಾರಿಯ 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಇನ್ನೊಂದು ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಆಘಾತವಾಗಿದ್ದು, ಇನ್ನೂ ಕೆಲ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನು ಚುರುಕುಗೊಳಿಸಿದೆ.

 

ಹೌದು, ಈಗಾಗಲೇ ಗೆಲ್ಲುವ ತಂತ್ರಗಾರಿಕೆಯ ಜೊತೆಗೆ ಹಲವು ಸಮೀಕ್ಷೆಗಳನ್ನ ನಡೆಸಿರುವ ಪಕ್ಷಗಳು ಯಾವ ಕ್ಷೇತ್ರದಲ್ಲಿ ಸೋಲು ಉಂಟಾಗಿದಿಯೋ ಆ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತುಕೊಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಿದ್ದು, ಇದೀಗ ಲೋಕ್‌ಪೋಲ್‌ ಸಮೀಕ್ಷೆ ಪ್ರಕಟಗೊಂಡಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಬರಲಿದೆ ಎಂದು ಲೋಕ್‌ಪೋಲ್‌ ಸಮೀಕ್ಷೆ ಹೇಳಿದೆ. ಇದರಿಂದಾಗಿ ಆಡಳಿತರೂಢ ಬಿಜೆಪಿಗೆ ಆಘಾತವಾಗುವ ಸಾಧ್ಯತೆಯಿದೆ. ಲೋಕ್‌ಪೋಲ್‌ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ 116 ರಿಂದ 122 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯನ್ನ ರೂಪಿಸುತ್ತಿದೆ ಎಂದು ಹೇಳಲಾಗಿದೆ.

ಇನ್ನೂ ಆಡಳಿತರೂಢ ಬಿಜೆಪಿ ಪಕ್ಷ 140 ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿತ್ತು, ಆದರೆ, ಲೋಕ್‌ಪೋಲ್‌ ಸಮೀಕ್ಷೆಯಿಂದ ಭಾರೀ ಆಘಾತ ಉಂಟು ಮಾಡಿದೆ. ಸಮೀಕ್ಷೆಯ ಪ್ರಕಾರ ಬಿಜೆಪಿಗೆ 77 ರಿಂದ 83 ಸ್ಥಾನಗಳು ಸಿಕ್ಕರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಸರ್ವೇಯಲ್ಲಿ ಅಂದಾಜಿಸಲಾಗಿದೆ.

ಇನ್ನೂ ಪಕ್ಷೇತರರು 1 ರಿಂದ 4 ಮಂದಿ ಗೆಲುವು ಸಾಧಿಸಬಹುದು ಎಂದೂ ಸರ್ವೇಯಲ್ಲಿ ಹೇಳಲಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಶೇ 33 ರಿಂದ 36 ರಷ್ಟು ಮತಗಳು ಚಲಾವಣೆ ಆದರೆ ಕಾಂಗ್ರೆಸ್‌ಗೆ ಶೇ 39 ರಿಂದ 42 ರಷ್ಟು ಪ್ರಮಾಣದಲ್ಲಿ ಮತ ಸಿಗಬಹುದು. ಇನ್ನು ಜೆಡಿಎಸ್‌ಗೆ ಶೇ 15 ರಿಂದ 18 ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಇನ್ನೂ ಈ ಬಾರಿ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಈ ಬಾರಿಯೂ ನಿರಾಸೆ ಉಂಟಾಗಲಿದ್ದು, ಬಿಜೆಪಿಯ ನಿರೀಕ್ಷೆಗಿಂತ ಕಡಿಮೆ ಸ್ಥಾನವನ್ನು ಪಡೆಯಲಿದೆ. ಲೋಕ್‌ಪೋಲ್‌ ಸಮೀಕ್ಷೆ ಪ್ರಕಾರ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ರಿಂದ 13 ಸ್ಥಾನ, ಕಾಂಗ್ರೆಸ್‌ಗೆ 21-24 ಹಾಗೂ ಜೆಡಿಎಸ್‌ಗೆ 14- 17 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆಯಲ್ಲಿ ಹೇಳಿದೆ.

Image

ಇನ್ನು ಮುಂದಿನ ಬಿಬಿಎಂಪಿ ಚುನಾವಣೆಯ ಮೇಲೆ ಹೆಚ್ಚು ಹೊತ್ತು ಕೊಟ್ಟ ಬೆಂಗಳೂರು ವ್ಯಾಪಿಯ 28 ಕ್ಷೇತ್ರಗಳಲ್ಲಿ ಕನಿಷ್ಠ 23 ಸ್ಥಾನಗಳನ್ನ ತನ್ನ ಪಡೆಯುವ ಪ್ಲಾನ್‌ ನಡೆಸಿರುವ ಬಿಜೆಪಿಗೆ ಬೆಂಗಳೂರು ವ್ಯಾಪ್ತಿಯಲ್ಲೂ ಅಘಾತ ಎದುರಾಗಿದೆ. ಬೆಂಗಳೂರಿನಲ್ಲಿ ಬಿಜೆಪಿಗೆ 11 ರಿಂದ 14, ಕಾಂಗ್ರೆಸ್‌ಗೆ 19 ರಿಂದ 23 ಹಾಗೂ ಜೆಡಿಎಸ್‌ಗೆ 1ರಿಂದ 4 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಡಳಿತರೂಢ ಬಿಜೆಪಿಗೆ 9ರಿಂದ 13, ಕಾಂಗ್ರೆಸ್‌ಗೆ 24 ರಿಂದ 27 ಹಾಗೂ ಜೆಡಿಎಸ್‌ಗೆ 2 ಸ್ಥಾನಗಳು ದೊರಕಬಹುದು ಎಂದು ಅಂದಾಜಿಸಿದೆ. ಅದೇ ರೀತಿಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ 27ರಿಂದ 30, ಕಾಂಗ್ರೆಸ್‌ಗೆ 19 ರಿಂದ 22 ಹಾಗೂ ಜೆಡಿಎಸ್‌ಗೆ 1 ಸ್ಥಾನ ಸಿಗಬಹುದು ಸರ್ವೆ ಹೇಳಿದೆ.

ಇನ್ನೂ ಕರಾವಳಿ ಭಾಗದಲ್ಲಿ ಬಿಜೆಪಿಗೆ 14ರಿಂದ 17, ಕಾಂಗ್ರೆಸ್‌ಗೆ 7 ರಿಂದ 10 ಹಾಗೂ ಜೆಡಿಎಸ್‌ಗೆ 1 ಸ್ಥಾನ ದೊರಕಬಹುದು ಎಂದಿದೆ. ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10 ರಿಂದ 13, ಕಾಂಗ್ರೆಸ್‌ಗೆ 7ರಿಂದ 10 ಹಾಗೂ ಜೆಡಿಎಸ್‌ಗೆ 1 ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.

ಒಟ್ಟಿಲಿ 224 ಕ್ಷೇತ್ರಗಳ ಪೈಕಿ 113 ಸ್ಥಾನಗಳನ್ನು ಗೆಲ್ಲುವ ಪಕ್ಷ ಸರ್ಕಾರ ರಚನೆ ಮಾಡಬಹುದಾಗಿದ್ದು, ಈ ಸಮೀಕ್ಷೆಯನ್ನ ಆಧಾರಿಸಿದರೇ ಕಾಂಗ್ರೆಸ್‌ ಈ ಸರ್ವೆಯಲ್ಲಿ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದು, ಕಳೆದ ಹೈದಾರಬಾದ್‌ ಸಮೀಕ್ಷೆಯಲ್ಲೂ ಬಿಜೆಪಿ ಹಿನ್ನಡೆಯನ್ನ ಸಾಧಿಸಿದೆ. ಈಗಾಗಲೇ ಬಿಜೆಪಿ]ಯೂ ಸಾಕಷ್ಟು ಸಮೀಕ್ಷೆಗಳನ್ನ ನಡೆಸಿದ್ದು, ಚುನಾವಣಾ ಪ್ರಚಾರವನ್ನ ಇನ್ನಷ್ಟು ಚುರುಕುಗೊಳಿಸಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ