Breaking News
Home / ರಾಜಕೀಯ / ಬಸವಕಲ್ಯಾಣದಲ್ಲಿ ಮಾರ್ಚ್‌ 4ರಿಂದ ಲಿಂಗಾಯತ ಮಹಾ ಅಧಿವೇಶನ: ಬಸವರಾಜ ರೊಟ್ಟಿ

ಬಸವಕಲ್ಯಾಣದಲ್ಲಿ ಮಾರ್ಚ್‌ 4ರಿಂದ ಲಿಂಗಾಯತ ಮಹಾ ಅಧಿವೇಶನ: ಬಸವರಾಜ ರೊಟ್ಟಿ

Spread the love

ಬೆಳಗಾವಿ: ‘ಮಾರ್ಚ್‌ 4 ಮತ್ತು 5ರಂದು ಬಸವಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾದಿವೇಶನ ನಡೆಸಲಾಗುತ್ತಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಳ್ಳಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.

 

’12ನೇ ಶತಮಾನದಲ್ಲಿ ಬಸವಣ್ಣನವರಿಂದ ಅವೈದಿಕ ಲಿಂಗಾಯತ ಧರ್ಮ ಸ್ಥಾಪಿತವಾಗಿದ್ದು ಬಸವ ಕಲ್ಯಾಣದಲ್ಲಿ. ಅನುಭವ ಮಂಟಪ ಸ್ಥಾಪನೆಯಾದದ್ದು ಕೂಡ ಅಲ್ಲಿಯೇ. ಹೀಗಾಗಿ ಬಸವಕಲ್ಯಾಣವು ಲಿಂಗಾಯತರಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಆ ಕಾರಣಕ್ಕಾಗಿ ಪ್ರಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನವನ್ನು ಅಲ್ಲಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲಿಂಗಾಯಿತರ ಸಂಘಟನೆಗಳಾದ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್‌, ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವೇಶ್ವರ ಪಂಚ ಕಮಿಟಿ- ಬಸವಕಲ್ಯಾಣ ಹಾಗೂ ಇನ್ನೂ ಅನೇಕ ಸಂಘಟನೆಗಳ ಸಹಯೋಗದಲ್ಲಿ ಈ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಅಲ್ಲದೆ ವಿದೇಶಗಳಿಂದ ಸಹ ಅಪಾರ ಸಂಖ್ಯೆಯ ಲಿಂಗಾಯತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ಗೋಷ್ಠಿಯ ವಿಷುಗಳು:ಮೀಸಲಾತಿ ಮತ್ತು ಲಿಂಗಾಯತರು, ಸ್ವತಂತ್ರ ಧರ್ಮದ ಹೋರಾಟದಲ್ಲಿ ಲಿಂಗಾಯತರು, ಜನಗಣತಿ ಮತ್ತು ಲಿಂಗಾಯತರು, ಲಿಂಗಾಯತರನ್ನು ಸಂಘಟಿಸುವಲ್ಲಿ ಮತ್ತು ಲಿಂಗಾಯತ ನಿಜಾಚರಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರ, ಸ್ಥಳೀಯ ಲಿಂಗಾಯತ ಮಠಗಳ ಮಾರ್ಗದರ್ಶನದಲ್ಲಿ ಲಿಂಗಾಯತ ಸಮಾಜದ ವಿವಿಧ ಪಂಗಡಗಳನ್ನು ಒಂದುಗೂಡಿಸುವಲ್ಲಿ ಲಿಂಗಾಯತ ಮಹಿಳೆಯರ ಪಾತ್ರ, ಲಿಂಗಾಯತ ಮಹಿಳೆಯರನ್ನು ಒಂದುಗೂಡಿಸಿ ಲಿಂಗಾಯತ ಸಮಾಜವನ್ನು ಸಂಘಟಿಸುವ ಮಹಿಳೆಯರ ಪಾತ್ರ, ವೈದಿಕದತ್ತ ವಾಲುತ್ತಿರುವ ಲಿಂಗಾಯತರಿಗೆ ನಿಜಾಚರಣೆಗಳನ್ನು ಜಾರಿಗೊಳಿಸುವಲ್ಲಿ ಲಿಂಗಾಯತ ಮಹಿಳೆಯರ ಪಾತ್ರ, ಲಿಂಗಾಯತ ಸಮಾಜದ ಸಂಘಟನೆ ವಿವಿಧ ಪಂಗಡಗಳು ಏಕೀಕರಣ ಹಾಗೂ ಲಿಂಗಾಯತ ನಿಜಾಚರಣೆಗಳ ಪ್ರಚಾರದಲ್ಲಿ ಯುವಕ ಯುವತಿಯರ ಪಾತ್ರ, ನಗರ ಗ್ರಾಮ ತಾಲ್ಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಯುವ ಘಟಕಗಳನ್ನು ಸಂಘಟಿಸಲು ವಿವಿಧ ಮಾರ್ಗಗಳು ಮತ್ತು ಕ್ರಮಗಳು ಯುವಕರ ತರಬೇತಿಗಾಗಿ ವಿವಿಧ ಮಟ್ಟದಲ್ಲಿ ಶರಣ ತತ್ವ ಸಿದ್ಧಾಂತ ಮತ್ತು ಮಹತ್ವದ ಬಗ್ಗೆ ತಿಳಿವಳಿಕೆ ನೀಡಲು ಸರಳ ಪಠ್ಯಕ್ರಮ ಮತ್ತು ಸಣ್ಣ ಸಣ್ಣ ಸಾಮಗ್ರಿ ತಯಾರಿಕೆ, ನೂತನ ಅನುಭವ ಮಂಟಪದ ವಿವರಗಳು, ಕಾರ್ಯ ಯೋಜನೆಗಳು.

ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಹಿರಿಯ ಉಪಾಧ್ಯಕ್ಷ ಎ.ವೈ. ಬೆಂಡಿಗೇರಿ, ನಗರ ಘಟಕದ ಅಧ್ಯಕ್ಷ ಎಸ್.ಜಿ.ಸಿದ್ನಾಳ, ಸಿ.ಎಂ. ಬೂದಿಹಾಳ ಮತ್ತು ಶೋಭಾ ಶಿವಳ್ಳಿ ಇದ್ದರು.

ಗೊ.ರು.ಚ ಸರ್ವಾಧ್ಯಕ್ಷ
‘ಮಾರ್ಚ್ 4ರಂದು ಬಸವಕಲ್ಯಾಣದಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಮಹಾ ಅಧಿವೇಶನದ ಸರ್ವಾಧ್ಯಕ್ಷರನ್ನಾಗಿ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ನಾಡಿನ 200ಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಎರಡೂ ದಿನಗಳ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ’ ಎಂದು ಬಸವರಾಜ ರೊಟ್ಟಿ ಹೇಳಿದರು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ