Breaking News
Home / Uncategorized / ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನೂರಾರು ಉದ್ಯಾನಗಳು ಈಗ ನಿರ್ವಹಣೆ ಇಲ್ಲದೇ ಸೊರಗಿವೆ.

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನೂರಾರು ಉದ್ಯಾನಗಳು ಈಗ ನಿರ್ವಹಣೆ ಇಲ್ಲದೇ ಸೊರಗಿವೆ.

Spread the love

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನೂರಾರು ಉದ್ಯಾನಗಳು ಈಗ ನಿರ್ವಹಣೆ ಇಲ್ಲದೇ ಸೊರಗಿವೆ. ಮಳೆಗಾಲದಲ್ಲಿ ನೈಸರ್ಗಿಕ ನೀರಿನ ಕಾರಣ ದಟ್ಟ ಹಸಿರು, ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸುತ್ತಿದ್ದ ಉದ್ಯಾನಗಳು ಈಗ ಹಾಳು ಕೊಂಪೆ

ಯಾಗಿವೆ. ನೆರಳು, ನೆಮ್ಮದಿ ಹುಡುಕಿ ಬಂದವರಿಗೆ ಮುಳ್ಳು-ದಾರಿಗಳಾಗಿವೆ.

‘ಸ್ಮಾರ್ಟ್‌ಸಿಟಿ’ ಯೋಜನೆ ಕಾರ್ಯಗತವಾಗಿರುವ ಬೆಳಗಾವಿ ನಗರದಲ್ಲಿ 120ಕ್ಕೂ ಹೆಚ್ಚು ಉದ್ಯಾನಗಳಿವೆ. ಇವುಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 88 ಉದ್ಯಾನಗಳಿವೆ. ಅದರ ಪೈಕಿ 60 ಉದ್ಯಾನಗಳು ಸುಸ್ಥಿತಿಯಲ್ಲಿದ್ದು, ಉಳಿದವು ಮೂಲಸೌಕರ್ಯಗಳಿಂದ ವಂಚಿತವಾಗಿವೆ ಎಂದು ಪಾಲಿಕೆ ಅಧಿಕಾರಿಗಳೇ ಹೇಳುತ್ತಾರೆ.

ಆದರೆ, ವಾಸ್ತವದಲ್ಲಿ ಅರ್ಧದಷ್ಟು ಉದ್ಯಾನಗಳಿಗೆ ದಿಕ್ಕೇ ಇಲ್ಲ. ಹುಲ್ಲು ಒಣಗಿ ಹಾಳು ಮಣ್ಣು ಸುಸುತ್ತಿದೆ. ಮಕ್ಕಳ ಆಟಿಕೆಗಳು ಮುರಿದು
ಹೋಗಿವೆ. ವಾಕಿಂಗ್‌ ಪಾಥ್‌ಗಳು ಕಿತ್ತುಹೋಗಿವೆ. ಹಿರಿಯರ ವಿಶ್ರಾಂತಿಗೆ ಕುಳಿತುಕೊಳ್ಳಲು ನಿರ್ಮಿಸಿದ ಸಿಮೆಂಟ್‌ ಕುರ್ಚಿಗಳು ಕಿತ್ತುಹೋಗಿವೆ. ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಬಳಲುತ್ತಿವೆ.

ಎಂ.ಕೆ.ಹುಬ್ಬಳ್ಳಿ ವರದಿ: ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ 8ವರ್ಷ ಕಳೆದರೂ ಪಟ್ಟಣದಲ್ಲಿ ಉದ್ಯಾನವೇ ಇಲ್ಲ.

ಪಟ್ಟಣದ ವಿದ್ಯಾನಗರ ಹಾಗೂ ಬಸವ ನಗರದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚ
ದಲ್ಲಿ ಪಟ್ಟಣ ಪಂಚಾಯ್ತಿಯಿಂದ ನಿರ್ಮಿಸಿದ ಉದ್ಯಾನವನಗಳು ಪೂರ್ಣಗೊಂಡಿಲ್ಲ. ಸುತ್ತಲು ತಂತಿಬೇಲಿ ಹಾಕಿದ್ದು ಬಿಟ್ಟರೆ ಬೇರಾವ ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆದಿಲ್ಲ. ಹೊಸದಾಗಿ ರಚನೆಗೊಳ್ಳುವ ಬಡಾವಣೆಗಳಲ್ಲೂ ಉದ್ಯಾನಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದ್ದು, ಪಟ್ಟಣದ ಜನತೆ ಉದ್ಯಾನದಿಂದ ವಂಚಿತಗೊಂಡಂತಾಗಿದೆ.

ಮುನವಳ್ಳಿ ವರದಿ: ಪಟ್ಟಣವು ಪುರಸಭೆಯಾಗಿ ಮೆಲ್ದರ್ಜೆಗೆ ಏರಿದ ನಂತರವೂ ಒಂದು ಉದ್ಯಾನ ಇಲ್ಲ. ಸಾರ್ವಜನಿಕರು ಸಹ ಆಸಕ್ತಿ ತೋರಿ ಹೋರಾಟ ಮಾಡಿಲ್ಲ. ಹೀಗಾಗಿ, ಉದ್ಯಾನ ನಿರ್ಮಾಣ ಇನ್ನೂ ಮರೀಚಿಕೆಯಾಗಿದೆ. ಜನರು ವಾಯು ವಿಹಾರಕ್ಕೆ ರಸ್ತೆಗಳನ್ನೇ ಅವಲಂಬಿಸಬೇಕಾಗಿದೆ.

ಚನ್ನಮ್ಮನ ಕಿತ್ತೂರು ವರದಿ: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿರುವ ತುಂಬುಗೆರೆ ದಂಡೆಯ ಮೇಲಿನ ಮತ್ತು ಸಂಗೊಳ್ಳಿ ರಸ್ತೆಯಲ್ಲಿ ಬರುವ ಅಗಳದ ಮೇಲಿನ ಉದ್ಯಾನಗಳು ‘ಸ್ಮಾರಕ’ ರೂಪ ಪಡೆದುಕೊಂಡು ಅನಾಥವಾಗಿ ನಿಂತಿವೆ. ತುಂಬುಗೆರೆ ದಂಡೆಯ ಮೇಲಿನ ಉದ್ಯಾನ ನಿರ್ಮಾಣಕ್ಕೆ ₹ 80 ಲಕ್ಷ ಹಾಗೂ ಅಗಳ ಮೇಲಿನ ಉದ್ಯಾನ ನಿರ್ಮಾಣಕ್ಕೆ ₹25 ಲಕ್ಷಕ್ಕೂ ಅಧಿಕ ದುಡ್ಡು ವೆಚ್ಚ ಮಾಡಲಾಗಿತ್ತು. ಇಷ್ಟೊಂದು ಬೃಹತ್ ಮೊತ್ತ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ವ್ಯರ್ಥವಾಗಿ ಹೋಗಿದೆ ಎಂಬುದು ಸಾರ್ವ
ಜನಿಕರ ದೂರು. ಕಸಗಂಟಿ ಬೆಳೆದಿರುವ ಈ ಸ್ಥಳದ ಸುತ್ತಲೂ ಹಾಕಲಾಗಿರುವ ಕಬ್ಬಿಣದ ಬೇಲಿ ತುಕ್ಕು ಹಿಡಿದಿದೆ. ತುಂಬು
ಗೆರೆಯ ಈ ಉದ್ಯಾನದಲ್ಲಿ ಹಾಕಲಾಗಿರುವ ಬಣ್ಣದ ಸಿಮೆಂಟ್ ಬೆಂಚುಗಳನ್ನು ಮುರಿದು ಹಾಕಿದ್ದಾರೆ. ರಾತ್ರಿ ವೇಳೆ ಮುರಿದ ಬೆಂಚಿನಲ್ಲಿ ಕುಳಿತು ಮದ್ಯಪಾನ ಮಾಡಲಾಗುತ್ತದೆಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.


Spread the love

About Laxminews 24x7

Check Also

ಶೂ ವ್ಯಾಪಾರಿ ನಿವಾಸದಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಕ್ಕೆ IT RAID

Spread the love ಉತ್ತರ ಪ್ರದೇಶದ ಆಗ್ರಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಫಲವಾಗಿ 40 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ