Breaking News
Home / ರಾಜಕೀಯ / ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ದೇಗುಲ ಸಜ್ಜು

ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ದೇಗುಲ ಸಜ್ಜು

Spread the love

ಕೆಜಿಎಫ್‌: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಹಬ್ಬದ ದಿನ ಮತ್ತು ಮಾರನೆ ದಿನ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಪ್ರತಿ ವರ್ಷದ ಜನವರಿ ಒಂದನೇ ತಾರೀಖೀ ನಂದು ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮಹಾಶಿವರಾತ್ರಿ ಹಬ್ಬದಂದು ಆರು ದಿನ ಜಾತ್ರೆ ವೈಭವದಿಂದ ನಡೆಯಲಿದೆ.

ಎರಡು ಮೂರು ತಿಂಗಳಿನಿಂದ ದೇವಾಲಯದ ಒಳ, ಹೊರಭಾಗದಲ್ಲಿರುವ ಶಿವಲಿಂಗಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ನಡೆದಿದ್ದು, ಸಕಲ ರೀತಿಯಲ್ಲೂ ಕಮ್ಮಸಂದ್ರ ಸಿಂಗಾರಗೊಂಡು, ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ಶಿವರಾತ್ರಿಯಂದು ದೇಗುಲದಲ್ಲಿ ಜಾಗರಣೆ ಮಾಡುವ ಭಕ್ತರಿಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಿತ್ಯ ಪೂಜಾ ಕೈಂಕರ್ಯ: ಶಿವರಾತ್ರಿ ಹಬ್ಬದ ದಿನ ದಂದು ಇಲ್ಲಿನ ಮಂಜುನಾಥಸ್ವಾಮಿ ದೇಗುಲದಲ್ಲಿ ದಿನದ 24 ಗಂಟೆ ಕಾಲ ಶಿವನ ಆರಾಧನೆ ನಡೆಯುತ್ತದೆ. ದೇವಾಲಯದ ಸಂಸ್ಥಾಪಕರಾದ ಸಾಂಭಶಿವಮೂರ್ತಿ ಅವರು ಬದುಕಿರುವವರೆಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದು, ಈಗ ಆಡಳಿತಾಧಿಕಾರಿ ಕೆ.ವಿ.ಕುಮಾರಿ ಅವರು ಕೋಟಿ ಲಿಂಗಗಳಿಗೆ ಹೋಮ ಹವನ, ಪಂಚಾಮೃತಾಭಿ ಷೇಕ ಸೇರಿ ಸಕಲ ರೀತಿಯ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ.

ಲಿಂಗಗಳ ಸಂಖ್ಯೆ 90 ಲಕ್ಷ ದಾಟಿದೆ: 47 ವರ್ಷ ಹಿಂದೆ ಸ್ಥಾಪನೆಯಾದ ಕೋಟಿಲಿಂಗೇಶ್ವರ ದೇಗುಲ ದಲ್ಲಿ ಹಂತವಾಗಿ ಪ್ರತಿ ವರ್ಷ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು, ಸ್ಥಾಪನೆ ಗೊಂಡಿರುವ ಶಿವಲಿಂಗಗಳ ಸಂಖ್ಯೆ ಈಗ 90 ಲಕ್ಷ ದಾಟಿದೆ. ನಿತ್ಯ ಅನ್ನದಾನ: ದೇವಾಲಯಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಇರುತ್ತದೆ. ಅನ್ನದಾನ ಕ್ಕಾಗಿ ವಿಶೇಷ ಅಡುಗೆ ಕೋಣೆ, ಭೋಜನಾಲಯ ಸ್ಥಾಪಿಸಲಾಗಿದೆ. ವಿಶ್ರಾಂತಿ ಗೃಹಗಳನ್ನು ಸಹ ಸ್ಥಾಪಿಸಿರುವುದರಿಂದ ದೂರದಿಂದ ಬರುವ ಭಕ್ತರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ವಿವಿಧ ದೇಗುಲಗಳ ನಿರ್ಮಾಣ: ದೇಗುಲದ ಆವ ರಣದಲ್ಲಿ ವಿಘ್ನೇಶ್ವರ ದೇವಾಲಯ, ಬ್ರಹ್ಮ, ವಿಷ್ಣು, ಮಹೇಶ್ವರ, ಮಂಜುನಾಥ, ವೆಂಕಟರಮಣಸ್ವಾಮಿ, ಅಯ್ಯಪ್ಪ, ಅನ್ನಪೂರ್ಣೇಶ್ವರಿ, ರಾಘವೇಂದ್ರ ಸ್ವಾಮಿ, ಸಂತೋಷ ಮಾತೆ, ಪಾಂಡುರಂಗಸ್ವಾಮಿ, ಪಂಚಮುಖೀ ಗಣಪತಿ, ಶ್ರೀರಾಮಚಂದ್ರ ದೇವಾ ಲಯ, ಪಂಚಮುಖಿ ಆಂಜನೇಯ, ಕನ್ನಿಕಾ ಪರಮೇಶ್ವರಿ, ದತ್ತಾತ್ರೇಯ, ಕರಿಮಾರಿಯಮ್ಮ, ಶನೇಶ್ವರಸ್ವಾಮಿ, 18 ಓಂ ಶಕ್ತಿ ದೇಗುಲ, 108 ಅಡಿ ಬೃಹತ್‌ ಶಿವಲಿಂಗ, 56 ಅಡಿ ಎತ್ತರದ ನಂದಿ, ಜಲಕಂಠೇಶ್ವರ ದೇವಾಲಯ, ಶಿರಡಿ ಸಾಯಿಬಾಬ ಮಂದಿರ ಮೊದಲಾದ ದೇವರುಗಳ ದೇವಾ ಲಯಗಳ ಸಮುತ್ಛಯವನ್ನು ಒಂದೇ ಕಡೆ ನಿರ್ಮಾಣ ಮಾಡಲಾಗಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಎಸ್‌.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ, ಜೆ.ಎಚ್‌.ಪಟೇಲ್‌, ಧರಂಸಿಂಗ್‌, ತೆಲುಗಿನ ಖ್ಯಾತ ನಟ ಚಿರಂಜೀವಿ ಸೇರಿ ಸಿನಿಮಾ ರಂಗದ ಪ್ರಮುಖರು, ರಾಜಕಾರಣಿಗಳು, ಉದ್ಯಮಿಗಳು ತಮ್ಮ ಹೆಸರಿನಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿರುವುದು ಈ ಕ್ಷೇತ್ರದ ವಿಶೇಷವಾಗಿದೆ.

ಕೋಟಿಲಿಂಗ ಗಳ ದರ್ಶನ ಪಡೆಯಲು ಶಿವರಾತ್ರಿಯಂದು ಶ್ರೀಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳ ಜತೆಗೆ, ನೆರೆಯ ಆಂಧ್ರ, ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ