Breaking News
Home / ರಾಜಕೀಯ / ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತೆ ಅನ್ನೋದಕ್ಕೆ ಪುಲ್ವಾಮಾ ದಾಳಿ ಉದಾಹರಣೆ! ಕೊಪ್ಪಳ ಸರ್ಕಾರಿ ಶಿಕ್ಷಕನ ವಿವಾದ

ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತೆ ಅನ್ನೋದಕ್ಕೆ ಪುಲ್ವಾಮಾ ದಾಳಿ ಉದಾಹರಣೆ! ಕೊಪ್ಪಳ ಸರ್ಕಾರಿ ಶಿಕ್ಷಕನ ವಿವಾದ

Spread the love

ಕೊಪ್ಪಳ: ಪುಲ್ವಾಮಾ ದಾಳಿಯು ಒಂದು ವ್ಯವಸ್ಥಿತ ಪಿತೂರಿ ಎಂದು ವಾಟ್ಸ್​ಆಯಪ್​ ಸ್ಟೇಟಸ್​ ಹಾಕುವ ಮೂಲಕ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಈ ರೀತಿಯಾಗಿ ಸ್ಟೇಟಸ್​​ ಹಾಕಿಕೊಂಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿಯಾಗಿದೆ. ಇಲ್ಲಿ ಅಧಿಕಾರಕ್ಕಾಗಿ ಏನೆಲ್ಲಾ ನಡೆಯುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಘಟನೆಯಲ್ಲಿ ಮಡಿದ ವೀರರಿಗೆ ಸ್ಮರಣೆಗಳು. ಇದೇ ವ್ಯವಸ್ಥೆ ನಮ್ಮಲ್ಲಿ ಮುಂದುವರಿದರೆ ಭಾರತದ ಭವಿಷ್ಯ ಕೂಡಾ ಬ್ಲಾಕ್ ಡೇ ಆಗಬಹುದು. ನಾವು ಎಚ್ಚೆತ್ತುಕೊಳ್ಳಬೇಕು ದೇಶ ಮೊದಲು ಅಂತಾ ಶಿಕ್ಷಕ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದರು.

ಕಳೆದ ಫೆ. 14ರಂದು ಪುಲ್ವಾಮಾ ದಾಳಿ 4 ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅನೇಕರು ದಾಳಿಯಲ್ಲಿ ಮಡಿದ ವೀರರಿಗೆ ಗೌರವ ಸಮರ್ಪಿಸಿದರು. ಇದೇ ದಿನ ಕೊಪ್ಪಳ ಶಿಕ್ಷಕ ಹಾಕಿಕೊಂಡಿದ್ದ ಸ್ಟೇಟಸ್​ನ ಸ್ಕ್ರೀನ್​ಶಾಟ್​ ವೈರಲ್​ ಆಗಿದ್ದು, ಅನೇಕರು ಶಿಕ್ಷಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಡೆದದ್ದೇನು?
2019ರ ಫೆ. 14ರ ಮುಂಜಾನೆ ಜಮ್ಮುವಿನಿಂದ 78 ವಾಹನಗಳಲ್ಲಿ 2,547 ಯೋಧರ ಕಾನ್ವಾಯ್​ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶ್ರೀನಗರದ ಕಡೆಗೆ ಹೊರಟಿತ್ತು. ಆವಂತಿಪೋರಾ ಸಮೀಪ ಲೆಥಾಪೋರಾದಲ್ಲಿ ಮಧ್ಯಾಹ್ನ 3.15ಕ್ಕೆ ಭದ್ರತಾ ಸಿಬ್ಬಂದಿಯಿದ್ದ ಒಂದು ಬಸ್​ಗೆ ಸ್ಫೋಟಕ ತುಂಬಿದ್ದ ಕಾರನ್ನು 22 ವರ್ಷದ ಅದಿಲ್​ ಅಹ್ಮದ್​ ದರ್​ ಎಂಬಾತ ಡಿಕ್ಕಿ ಹೊಡೆಸಿ ಸ್ಫೋಟಿಸಿದ, ಇದರಿಂದ 76ನೇ ಬೆಟಾಲಿಯನ್​ನ 40 ಯೋಧರು ಹುತಾತ್ಮರಾದರು. ಸ್ಫೋಟಕ್ಕೆ ಸುಮಾರು 80 ಕೆಜಿ ಸ್ಫೋಟಕ ಬಳಸಲಾಗಿತ್ತು. ಭಾರತದ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್​ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿಗಳು ಹತರಾದರು. ಏಳು ಜನರನ್ನು ಬಂಧಿಸಲಾಯಿತು.

ಪಾಕ್​ ನೆಲಕ್ಕೇ ನುಗ್ಗಿ ಭಯೋತ್ಪಾದಕರ ತಾಣ ಧ್ವಂಸ
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್​-ಎ-ಮೊಹಮ್ಮದ್​ ಸಂಟನೆಯ ಉಗ್ರಗಾಮಿಗಳ ತಾಣಗಳ ಮೇಲೆ ಫೆ. 26ರಂದು ಭಾರತೀಯ ವಾಯುಪಡೆಯು 12 ಫೈಟರ್​ ವಿಮಾನಗಳ ಮೂಲಕ ಬಾಂಬ್​ ದಾಳಿ ನಡೆಸಿತು. ಇದರಿಂದ ಉಗ್ರಗಾಮಿಗಳ ಅನೇಕ ಶಿಬಿರಗಳು ನಿರ್ನಾಮ ಆದವು. ಮರುದಿನ (ಫೆ.27) ಬೆಳಗ್ಗೆ ಪಾಕ್​ ವಿಮಾನಗಳು (ಅಮೆರಿಕದ ಎಫ್​​​​16 ಫೈಟರ್​ ಜೆಟ್​ ಸಹಿತ) ಭಾರತದೊಳಗೆ ನುಗ್ಗಿದವು. ಇದನ್ನು ಹಿಮ್ಮೆಟ್ಟಿಸಲು ಮಿಗ್​-21, ಸುಖೋಯ್​, ಮಿರಾಜ್​ 2000 ವಿಮಾನಗಳು ಮುಂದಾದವು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ