Breaking News
Home / ರಾಜಕೀಯ / ರೈತರಿಗಾಗಿ ಬೃಹತ್‌ ಗೋದಾಮು ಸಿದ್ಧ

ರೈತರಿಗಾಗಿ ಬೃಹತ್‌ ಗೋದಾಮು ಸಿದ್ಧ

Spread the love

ಮುನವಳ್ಳಿ: ‘ಸುತ್ತಲಿನ ಹಳ್ಳಿಗಳ ರೈತರ ಧಾನ್ಯ ಸಂಗ್ರಹಕ್ಕಾಗಿ ನಬಾರ್ಡ್‌ ನೆರವಿನೊಂದಿಗೆ ಗೋದಾಮು ನಿರ್ಮಿಸಲಾಗಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಕಟಕೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೇವಾ ಕೇಂದ್ರದಿಂದ ನಬಾರ್ಡ್‌ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ತೋರಗಲ್, ಚುಂಚನೂರ, ತೊರನಗಟ್ಟಿ ಹಾಗೂ ಕಟಕೋಳ ಸಹಕಾರ ಸಂಘಗಳ ನೂತನ ಗೋದಾಮನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

 

‘ಗೋದಾಮು ಇಲ್ಲದ ಕಾರಣ ರೈತರು ತಮ್ಮ ಉತ್ಪನ್ನಗಳನ್ನು ಕೈಗೆ ಬಂದ ದರಕ್ಕೆ ಮಾಡುತ್ತಿದ್ದರು. ಇಂಥ ನಷ್ಟ ಇನ್ನು ಮುಂದೆ ಆಗುವುದಿಲ್ಲ. ರೈತರು ಇಲ್ಲಿ ತಮ್ಮ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟು, ಉತ್ತಮ ದರ ಬಂದಾಗಲೇ ಮಾರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

‘ತಾಲ್ಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ 2006ರಲ್ಲಿ ನಷ್ಟದಲ್ಲಿದ್ದವು. 2023 ಜನವರಿವರೆಗೆ ರೈತರಿಗೆ ನೀಡಿದ ಸಾಲ ಶೇ 100ರಷ್ಟು ವಸೂಲಿ ಮಾಡಲಾಗಿದೆ. ಡಿಸಿಸಿ ಬ್ಯಾಂಕ್‌ ಅಡಿಯಲ್ಲಿ ತಾಲ್ಲೂಕಿನಾದ್ಯಂತ ಎಲ್ಲ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ’ ಎಂದರು.

‘ಈಗಾಗಲೇ ತಾಲ್ಲೂಕಿನ ಎಲ್ಲ ಕೃಷಿ ಪತ್ತಿನ ಸಂಘಗಳೂ ಹೊಸ ಪತ್ತನ್ನು ಬರೆದಿದ್ದು, ರೈತರು ಅದನ್ನು ಪಡೆದುಕೊಳ್ಳಬೆಕು. ಕೃಷಿ ಸಲಕರಣೆಗಳು ಈ ಸಂಘಗಳ ಮೂಲಕ ಕಡಮೆ ಬೆಲೆಯಲ್ಲಿ ಸಿಗುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲುವಾರು ಯೋಜನೆಗಳನ್ನು ಜಾರಿ ಮಾಡಿವೆ. ಸಂಘಗಳ ಮೂಲಕ ಅವುಗಳನ್ನೂ ಬಳಸಿಕೊಳ್ಳಬೇಕು’ ಎಂದರು.

ಸಂಘದ ನಿವೃತ್ತ ವ್ಯವಸ್ಥಾಪಕ ನಿಂಗಣ್ಣ ದಂಡಿನದುರ್ಗ ಪ್ರಾಸ್ತಾವಿಕ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್.ಎಸ್.ಢವಣ ಮಾತನಾಡಿದರು. ಸಂಘದ ಅಧ್ಯಕ್ಷ ಮಹಾದೇವ ಆತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ಎಸ್.ಕೆ.ಅಳಗುಂಡಿ ರೈತರಿಗಾಗಿ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ