Breaking News
Home / Uncategorized / ಧಾರ್ಮಿಕ ಕೃತಿಗಳನ್ನು ಪ್ರತಿಯೊಬ್ಬರೂ ಓದಿ

ಧಾರ್ಮಿಕ ಕೃತಿಗಳನ್ನು ಪ್ರತಿಯೊಬ್ಬರೂ ಓದಿ

Spread the love

ಹಂದಿಗುಂದ: ‘ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪುಸ್ತಕಗಳು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸಹಕಾರಿ. ಪ್ರತಿಯೊಬ್ಬರೂ ಈ ಗ್ರಂಥಗಳನ್ನು ಓದುವ ರೂಢಿ ಬೆಳೆಸಿಕೊಳ್ಳಿ’ ಎಂದು ಸಾಹಿತಿ ವಿ.ಎಸ್.ಮಾಳಿ ಹೇಳಿದರು.

ಹಂದಿಗುಂದ ಗ್ರಾಮದಲ್ಲಿ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಿದ್ದೇಶ್ವರ ಶಿವಯೋಗಿಗಳವರ ನೂತನ ಮಠದ ಲೋಕಾರ್ಪಣಾ ಕಾರ್ಯಕ್ರಮದ ಎರಡನೆಯ ದಿನವಾದ ಸೋಮವಾರ, ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದರು.

 

‘ಬಾಗೇನಾಡಿನ ಹಾಲುಮತದ ಪ್ರಮುಖ ಐದು ದೈವಗಳಾದ ಆಲಖನೂರಿನ ಕರಿಸಿದ್ಧೇಶ್ವರ, ಯಲ್ಪಾರಟ್ಟಿಯ ಅರಣ್ಯ ಸಿದ್ಧೇಶ್ವರ, ಕಂಕಣವಾಡಿಯ ಹಾಲಸಿದ್ಧೇಶ್ವರ, ಚಿಂಚಲಿಯ ಶಕ್ತಿಮಾತೆ ಮಾಯಕ್ಕ ಮತ್ತು ಬೆಕ್ಕೇರಿಯ ಲಕ್ಕವ್ವ ಈ ದೇವರನ್ನು ಪರಿಚಯಿಸುವಂತಹ ಮಹಾಪ್ರಬಂದವು, ಕುರುಬ ಜನಾಂಗದ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ’ ಎಂದರು.

‘ಜೊತೆಗೆ ಹಾಲುಮತದ ಆರಾಧನಾ ಕಲೆಗಳು, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆ, ನಂಬಿಕೆ, ಸಂಪ್ರದಾಯಗಳು, ಹಾಲುಮತ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆಗೆ ಈ ಪರಿಸರದ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಜನಾಂಗದ ಸಾಂಸ್ಕೃತಿಕ ಜೀವನದಲ್ಲಿ ಕಾಲ ಕಾಲಕ್ಕೆ ಉಂಟಾದ ತಲ್ಲಣಗಳನ್ನು ಸೂಕ್ಷ್ಮವಾಗಿ ವಿವೇಚಿಸುತ್ತಿದ್ದು, ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ’ ಎಂದರು.

ಸಾಹಿತಿ ಮಧುಸೂದನ ಬೀಳಗಿ ಅವರು ರಚಿಸಿದ ‘ರಾಯಬಾಗ ಪರಿಸರದ ಹಾಲುಮತ ಪರಂಪರೆ’ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.

ಬೆಳಗಾವಿ ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹಂದಿಗುಂದ ಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ, ಅತ್ತಿಗೇರಿಯ ಬಸವ ಧಾಮದ ಬಸವೇಶ್ವರಿ ತಾಯಿ ಅವರು ನೇತೃತ್ವ ವಹಿಸಿದ್ದರು. ವೇದಿಕೆಯ ಮೇಲೆ ಪ್ರಭು ಸ್ವಾಮಿಗಳು, ಗುರುಪಾದ ಸ್ವಾಮಿಗಳು, ಬಸವಕಿರಣ ಸ್ವಾಮಿಗಳು, ಗುರುದೇವ ಸ್ವಾಮಿಗಳು, ಶಿವಕುಮಾರ ಸ್ವಾಮಿಗಳು, ವಿವೇಕದೇವರು ಇದ್ದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮಳಗಲಿ, ಪಣಪ್ಪ ತೇಲಿ, ಕೃಷ್ಣಪ್ಪ ಮಂಟೂರ, ಶರಣವಾಗಿ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಸಾಹಿತಿ ಡಾ.ಅಶೋಕ ನರೋಡೆ, ಗೋಪಾಲ ಜಾಧವ, ಬೀರಪ್ಪ ತಡಸಲೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮನಗೌಡ ಪಾಟೀಲ, ರುದ್ರಪ್ಪ ಬದಶೆಟ್ಟಿ ರಮೇಶ ಬಂಡಿ, ಷಣ್ಮುಖ ತೇರದಾಳ, ಶ್ರೀಶೈಲ ಬಡಿಗೇರ, ಮುರಿಗೆಪ್ಪ ಅಂದಾನಿ, ರಾಯಬಾಗ ತಾಲ್ಲೂಕು ಕದಳಿ ವೇದಿಕೆಯ ಸರ್ವ ಸದಸ್ಯರು ಹಾಗೂ ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ