Breaking News
Home / ಹುಬ್ಬಳ್ಳಿ / ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ನಾಳೆ `ರೈತ ಶಕ್ತಿ’ ಸೇರಿ ಹಲವು ರೈತ ಕಲ್ಯಾಣ ಯೋಜನೆಗಳಿಗೆ ಸಿಎಂ ಚಾಲನೆ

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ನಾಳೆ `ರೈತ ಶಕ್ತಿ’ ಸೇರಿ ಹಲವು ರೈತ ಕಲ್ಯಾಣ ಯೋಜನೆಗಳಿಗೆ ಸಿಎಂ ಚಾಲನೆ

Spread the love

ಧಾರವಾಡ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಾಳೆ ರೈತ ಶಕ್ತಿ ಸೇರಿದಂತೆ ಕೃಷಿ ಇಲಾಖೆಯ ನೂತನ ಯೋಜನಾ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಇಲಾಖೆಯ ಕ್ರೀಡಾಂಗಣ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ.

 

ರೈತ ಶಕ್ತಿ

ರಾಜ್ಯದ ಎಲ್ಲಾ ವರ್ಗದ ರೈತರಿಗೆ ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಠ 95 ಎಕರೆಗೆ ರೂ.1250/- ಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹಕ್ಕೆ ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿತಗೊಳಿಸಲು ಡೀಸಲ್ ವೆಚ್ಚಕ್ಕೆ 51.80 ಲಕ್ಷ ಫಲಾನುಭವಿಗಳಿಗೆ ರೂ.385.15 ಕೋಟಿ ಸಹಾಯಧನ.

ಭೂರಹಿತ ಕೃಷಿ ಉರ್ಮಿಕ ಹಾಗೂ ರೈತರ ಮಕ್ಕಳಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ

ರೈತರ/ಕೃಷಿ ಕಾರ್ಮಿಕರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹಾಗೂ 10ನೇ ತರಗತಿ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ರೂ.2000/- ರಿಂದ ರೂ.11000/-ಗಳವರೆಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 4.55 ಲಕ್ಷ ವಿದ್ಯಾರ್ಥಿಗಳಿಗೆ ರೂ. 241.86 ಕೋಟಿ ವಿದ್ಯಾರ್ಥಿ ವೇತನ ವರ್ಗಾವಣೆ.

ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ

ರಾಜ್ಯದ ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ, ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿದ ರೈತರಿಗೆ 9 ‘ಕೃಷಿ ಪಂಡಿತ’ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಲು 23 ‘ಕೃಷಿ ಪ್ರಶಸ್ತಿ’ಗಳನ್ನು ಪ್ರದಾನಿಸಿ ಸನ್ಮಾನಿಸುವುದು.

ಕೃಷಿ ಸಂಜೀವಿನಿ

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಪ್ರಮುಖವೆನಿಸಿರುವ ಮಣ್ಣು ಮತ್ತು ನೀರಿನ ಪರೀಕ್ಷೆ, ಕೀಟ ಮತ್ತು ರೋಗಗಳನ್ನು ಪತ್ತೆ ಹಚ್ಚುವಿಕೆ ಹಾಗೂ ನಿಯಂತ್ರಣಾ ಕ್ರಮಗಳ ಕುರಿತು ಮಾಹಿತಿಯನ್ನು ರೈತರ ಕ್ಷೇತ್ರ ಭೇಟಿಯ ಮೂಲಕ ನೀಡುವುದಕ್ಕೆ ರೂ.1.52 ಕೋಟಿ ಅನುದಾನದಲ್ಲಿ 14 ಸಂಚರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳ ಲೋಕಾರ್ಪಣೆ,

ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ

ನೈಸರ್ಗಿಕ ಕೃಷಿಯಲ್ಲಿ ರೈತರನ್ನು ಪ್ರೇರೇಪಿಸಲು ಹಾಗೂ ತೊಡಗಿಸಿಕೊಳ್ಳಲು ರಾಜ್ಯದ ಎಲ್ಲಾ ಕೃಷಿ/ತೋಟಗಾರಿಕಾ ವಿಶ್ವವಿದ್ಯಾನಿಲಯಗಳಲ್ಲಿ ತಲಾ 1000 ಎಕರೆ ಪ್ರದೇಶದಲ್ಲಿ ಸಂಶೋಧನೆ ಹಾಗೂ ಸಹಾಯಧನಕ್ಕಾಗಿ ರೂ.10 ಕೋಟ ಅನುದಾನ.

ಡಾ. ಎಸ್.ವಿ. ಪಾಟೀಲ್ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಲೋಕಾರ್ಪಣೆ:

ಡಾ. ಎಸ್‌.ವಿ. ಪಾಟೀಲ್, ದೇಶ ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ ಹಾಗೂ ಗಾಂಧಿವಾದಿ, ಇವರು ಜನಿಸಿ ದಿನಾಂಕ : 25-1-2022 ಕ್ಕೆ ನೂರು ವರುಷಗಳು ತುಂಬಿರುವ ಪ್ರಯುಕ್ತ ಅವರ ಅಮೂಲ್ಯ ಸಾಧನೆಯನ್ನು ಗುರುತಿಸಿ, ರಾಜ್ಯ ಸರ್ಕಾರವು ಇವರ ಹೆಸರಿನಲ್ಲಿ ರೈತರ ಶ್ರೇಯೋಭಿವೃದ್ಧಿ ಪೀಠ ವನ್ನು ಸ್ಥಾಪಿಸಿ ಲೋಕಾರ್ಪಣೆ.


Spread the love

About Laxminews 24x7

Check Also

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

Spread the loveಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ