Breaking News
Home / Uncategorized / ಇಂದು ರಾಜ್ಯಕ್ಕೆ ಮುಂಬೈ ಕಂಟಕ………ಒಂದೇ ದಿನ 299 ಜನರಲ್ಲಿ ಕೊರೊನಾ……

ಇಂದು ರಾಜ್ಯಕ್ಕೆ ಮುಂಬೈ ಕಂಟಕ………ಒಂದೇ ದಿನ 299 ಜನರಲ್ಲಿ ಕೊರೊನಾ……

Spread the love

ಬೆಂಗಳೂರು: ಇಂದು ರಾಜ್ಯಕ್ಕೆ ಮುಂಬೈ ಕಂಟಕ ತಾಗಿದ್ದು, ಇವತ್ತು ಒಂದೇ ದಿನ 299 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 3221 ಕ್ಕೇರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 21, ಯಾದಗಿರಿ 44, ಕಲಬುರಗಿ 28, ಮಂಡ್ಯ 13, ರಾಯಚೂರು 83, ಉಡುಪಿ 10, ಬೀದರ್ 33, ಬೆಳಗಾವಿ 13, ದಾವಣಗೆರೆ 6, ದಕ್ಷಿಣ ಕನ್ನಡ 14, ವಿಜಯಪುರ 26, ಬಳ್ಳಾರಿ 1, ಶಿವಮೊಗ್ಗ 1, ಕೋಲಾರ 1 ಪ್ರಕರಣ ಬೆಳಕಿಗೆ ಬಂದಿವೆ. 299 ಪ್ರಕರಣಗಳಲ್ಲಿ 255 ಜನರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಏಳು ಜನ ಅಂತರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ.

ಒಟ್ಟು 221 ಮಂದಿ ಕೊರೊನಾದಿಂದ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 1218 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 3221ರಲ್ಲಿ 1950 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

1. ರಾಯಚೂರು: 50 ವರ್ಷದ ಪುರುಷ (ರೋಗಿ 2567) ರಾಯಚೂರು ಜಿಲ್ಲೆಯ ನಿವಾಸಿಯಾಗಿದ್ದು, ಮೇ 21ರಂದು ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಮೇ 28ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತಿ. ಚಿಕಿತ್ಸೆ ಫಲಕಾರಿತಯಾಗದೇ ಮೇ 29ರಂದು ನಿಧನ ಹೊಂದಿದ್ದಾರೆ.

2. ಬೀದರ್: 75 ವರ್ಷದ ವೃದ್ಧ (ರೋಗಿ 2965) ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ನಿವಾಸಿಯಾಗಿದ್ದು, ರಕ್ತದೊತ್ತಡ , ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮೇ 29ರಂದು ನಿವಾಸದಲ್ಲಿ ನಿಧನ ಹೊಂದಿದ್ದರು. ವೃದ್ಧನ ಕೋವಿಡ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ.


Spread the love

About Laxminews 24x7

Check Also

ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

Spread the loveನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ