Breaking News
Home / ಅಂತರಾಷ್ಟ್ರೀಯ / ಇಂದು ಆರ್‌ಸಿಬಿ-ಡಿಸಿ ಫೈಟ್, ದುಬೈ ಪಿಚ್‍ನಲ್ಲಿ ಟಾಸ್ ನಿರ್ಣಾಯಕ

ಇಂದು ಆರ್‌ಸಿಬಿ-ಡಿಸಿ ಫೈಟ್, ದುಬೈ ಪಿಚ್‍ನಲ್ಲಿ ಟಾಸ್ ನಿರ್ಣಾಯಕ

Spread the love

ದುಬೈ, ಅ.5- ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ವಿರುದ್ಧ ಗೆಲುವು ಸಾಸಿದ ನಂತರ ಹ್ಯಾಟ್ರಿಕ್ ಜಯದ ಲೆಕ್ಕಾಚಾರದಲ್ಲಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್‍ಸಿಬಿ ಇಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿರುವ ಡೆಲ್ಲಿ ಹಾಗೂ ಬೆಂಗಳೂರು ತಂಡಗಳು ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗುವ ರೇಸ್‍ನಲ್ಲಿವೆ.

ಬ್ಯಾಟಿಂಗ್ ಮಾಡಿದರೆ ಗೆಲುವು:
ದುಬೈ ಪಿಚ್ ಬ್ಯಾಟ್ಸ್‍ಮನ್‍ಗಳ ಸ್ವರ್ಗವೆಂದೇ ಬಿಂಬಿಸಿಕೊಂಡಿದ್ದು ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆದ್ದಿರುವುದರಿಂದ ಟಾಸ್ ನಿರ್ಣಾಯಕವೆನಿಸಿದೆ.

ಈ ಹಿಂದೆ ಕೊಹ್ಲಿ ನಾಯಕತ್ವದ ಆರ್‍ಸಿಬಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಎರಡು ಪಂದ್ಯಗಳಲ್ಲೂ ಜಯಗಳಿಸಿದ್ದರೆ ಶ್ರೇಯಾಸ್ ಅಯ್ಯರ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ 3 ಬಾರಿ ಜಯ ಗಳಿಸಿದೆ. ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 6 ಬಾರಿ ಜಯಿಸಿದ್ದರೆ, 1 ಬಾರಿ ಮಾತ್ರ ಫೀಲ್ಡಿಂಗ್ ತಂಡ ಗೆಲುವು ಸಾಸಿದೆ.

# ಕ್ರೀಸ್ ಮೊರಿಸ್ ಎಂಟ್ರಿ:
ಐಪಿಎಲ್ ಬಿಡ್ಡಿಂಗ್‍ನಲ್ಲಿ 10 ಕೋಟಿಗೆ ಆರ್‍ಸಿಬಿ ತಂಡದ ಪಾಲಾಗಿರುವ ಕ್ರಿಸ್‍ಮೋರಿಸ್ ಗಾಯದ ಸಮಸ್ಯೆಯಿಂದ ಗುಣಮುಖರಾಗಿದ್ದು ಇಂದಿನ ಪಂದ್ಯದಲ್ಲಿ ಕ್ರೀಸ್‍ಗೆ ಇಳಿಯುವುದು ಬಹುತೇಕ ನಿಶ್ಚಯವಾಗಿದ್ದು ದುಬಾರಿ ಬೌಲರ್ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಸ್ಥಾನ ತೆರವುಗೊಳಿಸಬೇಕಾಗಿದೆ.

ಮೊರಿಸ್ ಆಗಮನದಿಂದ ಬೌಲಿಂಗ್ ವಿಭಾಗ ಸದೃಢವಾಗಲಿದ್ದು ವಾಷಿಂಗ್ಟನ್ ಸುಂದರ್, ನವದೀಪ್‍ಸೈನಿ, ಪರ್ಪಲ್ ಕ್ಯಾಪ್ ಧರಿಸಿರುವ ಯಜುವೇಂದ್ರ ಚಹಾಲ್ ಡೆಲ್ಲಿ ಆಟಗಾರರ ರನ್ ದಾಹಕ್ಕೆ ಬ್ರೇಕ್À ಹಾಕಲು ಕಾತರಿಸುತ್ತಿದ್ದಾರೆ.

ರಬಡಾ- ಚಹಾಲ್ ಪೈಪೋಟಿ :
ಪರ್ಪಲ್ ಕ್ಯಾಪ್ ರೇಸ್‍ನಲ್ಲಿರುವ ಆರ್‍ಸಿಬಿಯ ಯಜುವೇಂದ್ರ ಚಹಾಲ್ ಡೆಲ್ಲಿಯ ಸೋಟಕ ಆಟಗಾರರಾದ ಧವನ್, ಪೃಥ್ವಿಶಾ, ಅಯ್ಯರ್, ಪಂಥ್‍ರ ಸೋಟಕ ಬ್ಯಾಟಿಂಗ್‍ಗೆ ಬ್ರೇಕ್ ಹಾಕಲು ಸಜ್ಜಾಗಿದ್ದರೆ, ದಕ್ಷಿಣ ಆಫ್ರಿಕಾದ ವೇಗಿ ಕಗಸೊ ರಬಾಡ ಆರ್‍ಸಿಬಿಯ ಬ್ಯಾಟಿಂಗ್ ಬೆನ್ನೆಲುಬಾಗಿರುವ ಪಡಿಕ್ಕಲ್, ಫಿಂಚ್, ಕೊಹ್ಲಿ, ಎಬಿಡಿಗೆ ಲಗಾಮು ಹಾಕಲು ಕಾತರಿಸುತ್ತಿದ್ದಾರೆ.
ತಂಡಗಳ ವಿವರ:

# ಆರ್‍ಸಿಬಿ:
ದೇವದತ್ ಪಡಿಕ್ಕಲ್, ಆರೋನ್‍ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿಡಿವಿಲಿಯರ್ಸ್(ವಿಕೆಟ್ ಕೀಪರ್), ಗುರುಕೀರ್ತ್‍ಸಿಂಗ್/ ಪಾರ್ಥಿವ್ ಪಟೇಲ್, ಶಿವಂದುಬೆ, ಇಸುರು ಉಡಾನಾ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್, ನವದೀಪ್‍ಸೈನಿ, ಯಜುವೇಂದ್ರ ಚಹಾಲ್

# ಡೆಲ್ಲಿ ಕ್ಯಾಪಿಟಲ್ಸ್‍ಣ:
ಪೃಥ್ವಿಶಾ, ಶಿಖರ್‍ಧವನ್, ಶ್ರೇಯಾಸ್ ಅಯ್ಯರ್(ನಾಯಕ), ರಿಷಭ್‍ಪಂತ್ (ವಿಕೆಟ್ ಕೀಪರ್), ಶಿಮೋರನ್ ಹಿಟ್ಮೆಯಾರ್, ಮಾರ್ಕಸ್ ಸ್ಟೋನಿಸ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಸೊ ರಬಾಡ, ಅಮಿತ್‍ಮಿಶ್ರಾ, ಎನ್‍ರಿಚ್ ನೋಟ್ರಿಜ್.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ