Breaking News
Home / ರಾಜಕೀಯ / ಫೇಸ್‌ಬುಕ್‌ನಲ್ಲಿ ಬಂದ ಯುವತಿಯ ‘ಫ್ರೆಂಡ್ ರಿಕ್ವೆಸ್ಟ್’ಗೆ ಮರುಳಾಗಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡ ಉದ್ಯೋಗಿ

ಫೇಸ್‌ಬುಕ್‌ನಲ್ಲಿ ಬಂದ ಯುವತಿಯ ‘ಫ್ರೆಂಡ್ ರಿಕ್ವೆಸ್ಟ್’ಗೆ ಮರುಳಾಗಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡ ಉದ್ಯೋಗಿ

Spread the love

ಎಲ್ಲಿಯವರೆಗೆ ಮೋಸ ಹೋಗುವರು ಇರತ್ತಾರೋ ಅಲ್ಲಿಯವರೆಗೆ ಮೋಸ ಮಾಡುವರು ಇದ್ದೇ ಇರುತ್ತಾರೆ. ಅದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಆಧುನಿಕ ಕಾಲದಲ್ಲಿ ಇಂತಹ ಮೋಸ ಸರ್ವೆ ಸಾಮಾನ್ಯ ಅನ್ನೋ ಹಾಗಿದೆ. ಹೀಗೆಯೇ ಫೇಸ್‌ಬುಕ್‌ನಲ್ಲಿ ಬಂದ ಯುವತಿಯ ‘ಫ್ರೆಂಡ್ ರಿಕ್ವೆಸ್ಟ್’ಗೆ ಮರುಳಾಗಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡ ಉದ್ಯೋಗಿಯೋರ್ವ ಇದೀಗ ತಪ್ಪಿನ ಅರಿವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.ಹೌದು, ಇಂತಹ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ನಿವಾಸಿ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಹಣ ಕಳೆದುಕೊಂಡ ಉದ್ಯೋಗಿ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಆದಿತ್ಯ ನಗರದ ಆದಿಬಟ್ಟಲ ಗ್ರಾಮದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈತ ಒಂದಲ್ಲ ಎರಡಲ್ಲ ಬರೋಬ್ಬರಿ 39,04,870 ರೂಪಾಯಿ ಕಳೆದುಕೊಂಡಿದ್ದಾನೆ.

ಇನ್ನೂ ಪ್ರಕರಣ ನೋಡೊದಾದ್ರೆ ಇದೇ 2022ರ ಜೂ. 29ರಂದು ಬೆಳಗ್ಗೆ 9.10ಕ್ಕೆ ಸಿಂದಗಿಯಲ್ಲಿದ್ದ ಪರಮೇಶ್ವರ್‌ಗೆ ಮಂಜುಳಾ ಕೆ.ಆರ್. ಎಂಬ ಫೇಸ್‌ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಅದನ್ನು ಕನ್‌ಫರ್ಮ್ ಮಾಡಿದಾಗ ಮೆಸೆಂಜರ್‌ನಲ್ಲಿ ‘ಹಾಯ್’ ಎಂಬ ಸಂದೇಶ ಬರುತ್ತದೆ.ಅಲ್ಲಿಂದ ಪರಮೇಶ್ವರ್ ಹಾಗೂ ಮಂಜುಳಾ ಪ್ರತಿ ದಿನ ಪರಸ್ಪರ ಮೆಸೇಜ್ ಮಾಡುತ್ತಾ ಬಂದಿದ್ದಾರೆ. 2022ರ ಆ. 14ರಂದು ಮಂಜುಳಾ ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ 700 ರೂ. ಫೋನ್ ಪೇ ಮಾಡು ಎಂದು ಸಂದೇಶ ಕಳುಹಿಸಿದ್ದಾಳೆ. ಇದನ್ನು ನಂಬಿದ ಪರಮೇಶ್ವರ್ 700 ರೂಪಾಯಿ ಫೋನ್ ಪೇ ಮಾಡಿದ್ದಾನೆ.

ಬಳಿಕ 2000 ರೂ. ಕೇಳಿದ್ದು, ಅದನ್ನೂ ಫೋನ್ ಪೇ ಮಾಡಿದ್ದಾನೆ. ಮರುದಿನ ತಾಯಿ ಮರಣ ಹೊಂದಿದ್ದಾಳೆ, ಅದಕ್ಕೆ 2000 ರೂ. ಬೇಕೆಂದಾಗ ಮತ್ತೆ ಫೋನ್ ಪೇ ಮಾಡಿದ್ದಾನೆ. ಬಳಿಕ ತಿಥಿ ಕಾರ್ಯಕ್ಕೆ 5000 ರೂ. ಬೇಕೆಂದಾಗ ಮತ್ತೆ ಹಣ ಹಾಕಿದ್ದಾನೆ.ಕೆಲವು ದಿನಗಳ ಬಳಿಕ ಪರಮೇಶ್ವರ್‌ಗೆ ಫೋನ್ ಮಾಡಿದ ಮಂಜುಳಾ ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದು ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಖರ್ಚಿಗೆ ಹಣ ಇಲ್ಲ. ಹಣಕಾಸಿನ ಸಹಾಯ ಮಾಡಿದರೆ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ.

ಅದನ್ನೂ ನಂಬಿದ ಪರಮೇಶ್ವರ್ ಒಂದೇ ದಿನ ಐವ ಸಾವಿರ ರೂಪಾಯಿಯನ್ನು ಎರಡು ಕಂತಿನಲ್ಲಿ ಕಳಿಸಿದ್ದಾನೆ. ಇದರಿಂದ ಮತ್ತಷ್ಟು ಸಲುಗೆ ಹೆಚ್ಚಾಗಿದೆ. ಕೆಲವು ದಿನಗಳ ಬಳಿಕ ಮಂಜುಳಾ ಮತ್ತಷ್ಟು ಸಲುಗೆಯಿಂದ ನಡೆದುಕೊಂಡಿದ್ದು ಅದನ ನಂಬಿದ ಪರಮೇಶ್ವರ್ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 40,86,800 ರೂಪಾಯಿಗಳನ್ನು ಮಂಜುಳಾ ಖಾತೆಗೆ ರವಾನಿಸಿದ್ದಾನೆ. ಅಲ್ಲದೇ, ಫೋನ್ ಪೇ ಹಣ ಸೇರಿ ಒಟ 41,26,800 ರೂ. ಮಂಜುಳಾಗೆ ನೀಡಿದ್ದಾನೆ.ಆ ಬಳಿಕ ಮಂಜು ಹತ್ತಿರವೇ ತನ್ನ ಖರ್ಚಿಗೆ ಹಣವಿಲ್ಲವೆಂದು ಮರಳಿ 2,21,930 ರೂ. ವಾಪಸ್ ಪಡೆದಿದ್ದಾನೆ. ಮಂಜುಳಾ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರಿಂದ ಸಂಶಯ ಬಂದು ತಾನು ಮೋಸ ಹೋಗುತ್ತಿರುವುದಾಗಿ ತಿಳಿದು ಇದೀಗ ಅಂದರೆ ನ.15ರಂದು ಆಕೆಯ ಮೇಲೆ ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣ ಭೇದಿಸಲಾಗುವುದು. ದೂರುದಾರನಿಗೆ ನ್ಯಾಯ ಕೊಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಒಬ್ಬ ವಿದ್ಯಾವಂತ ಯುವಕನು ಕೂಡಾ ಯುವತಿಯೊಬ್ಬಳ ಮಾಯಾಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡಿದ್ದು, ಇದೀಗ ಪೊಲೀಸರು ಆರೋಪಿ ಬಂಧನಕ್ಕೆ ಹಾಗೂ ಹಣ ರಿಕವರಿಗಾಗಿ ಜಾಲ ಬೀಸಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ