Breaking News
Home / ರಾಜಕೀಯ / ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಗ್ರೀನ್ ಸಿಗ್ನಲ್

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಗ್ರೀನ್ ಸಿಗ್ನಲ್

Spread the love

ಹುಬ್ಬಳ್ಳಿ: ನಗರದ ವಿವಾದಿತ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿದಂತೆ ಅರ್ಜಿ ಸಲ್ಲಿಸುವ ಎಲ್ಲಾ ಮಹಾಪುರುಷರ ಜಯಂತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಷರತ್ತು ವಿಧಿಸಿ ಅನುಮತಿ ನೀಡುವ ಬಗ್ಗೆ ಹು-ಧಾ ಮಹಾನಗರ ಪಾಲಿಕೆ ನಿರ್ಧರಿಸಿದೆ.

 

ಸರ್ವ ಪಕ್ಷಗಳ ಸಭೆಯ ನಂತರಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಮೇಯರ್ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೈರಾಜು ಜಂಟಿ ಸುದ್ದಿ ಗೋಷ್ಠಿ ನಡೆಸಿದರು.‌ಆದರೆ ಸುದ್ದಿಗೋಷ್ಠಿಯಲ್ಲಿಯೇ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ, ಅಸಮಾಧಾನ ಸ್ಫೋಟಗೊಂಡಿತು.‌ ಹಾಗಾದರೆ ನಡೆದಿದ್ದಾದರು ಏನು ಅಂತೀರಾ? ಈ ಸ್ಟೋರಿ ನೋಡಿ….

 

ಹುಬ್ಬಳ್ಳಿ ಈದ್ಗಾ ಮೈದಾನ ಈಗ ಮತ್ತೆ ಸುದ್ದಿಯಲ್ಲಿದೆ. ಕಳೆದ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶಕ್ಕೆ ಆಗ್ರಹಿಸಿ ಹಿಂದು ಪರ ಸಂಘಟನೆಗಳು ಪಟ್ಟು ಹಿಡಿದು ಆಚರಣೆಯನ್ನು ಮಾಡಿದವು. ಆದರೆ ಈಗ ಅದೇ ಹೋರಾಟ ಹಿಂದು ಪರ ಸಂಘಟನೆಗಳಿಗೆ ತಿರುಗಬಾಣವಾಗಿದೆ. ಏಕೆಂದರೆ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸೇರಿದಂತೆ ಎಲ್ಲ ಜಯಂತಿ ಆಚರಣೆಗೆ ಅನುಮತಿ ನೀಡಲಾಗಿದ್ದು, ಕೆಲವು ನೀತಿ ನಿಯಮಗಳನ್ನು ಹಾಕಿ ಅನುಮತಿ ನೀಡಲಾಗಿದೆ ಎಂದು ಸರ್ವ ಪಕ್ಷಗಳ ಸಭೆಯ ನಂತರ ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ಎಐಎಂಐಎಂ ಪಕ್ಷದ ಜಿಲ್ಲಾ ಸ‌ಂಯೊಜಕ ವಿಜಯ ಗುಂಟ್ರಾಳ ಆಚರಣೆಗೆ ಅನುಮತಿ ಕೇಳಿದ್ದರು. ಆದ್ದರಿಂದ ಇನ್ನು ಮುಂದೆ ಈದ್ಗಾ ಮೈದಾನದಲ್ಲಿ ಎಲ್ಲ ಜಯಂತಿಗೆ ಗ್ರೀನ್ ಸಿಗ್ನಲ್‌ ನೀಡಲಾಗಿದೆ. ಇನ್ನೂ ಮುಂದೆ ಈದ್ಗಾ ಮೈದಾನದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಬಹುದು. ಯಾರೇ ಕಾರ್ಯಕ್ರಮ ಮಾಡಿದರೆ ಹತ್ತು ಸಾವಿರ ಠೇವಣಿ ಇಡಬೇಕು. ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಎಂದು ಮಹಾನಗರ ಪಾಲಿಕೆ ಮೇಯರ್ ಹೇಳುತಿದ್ದಂತೆ ಪಕ್ಕದಲ್ಲಿಯೇ ಇದ್ದ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ್ ಆಕ್ರೋಶಗೊಂಡು ಮೊದ ಮೊದಲು ಮೇಯರ್ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಬೇಡ ಅಂದಿದ್ರು ಆದ್ರೆ ಅವರಿಗೆ ಸಭೆಯ ನಡೆಯುವ ವೇಳೆ ಬಿಜೆಪಿ ಅಧ್ಯಕ್ಷರ ಫೋನ್ ಬಂದ ಮೇಲೆ ಅವಕಾಶ ಕೊಟ್ಟಿದ್ದಾರೆ. ಇದು ರಾಜಕೀಯ ಟಿಪ್ಪು ಜಯಂತಿಗೆ ಈದ್ಗಾ ಮೈದಾನದಲ್ಲಿ ಅವಕಾಶ ಬೇಡಾ ಎಂದರು.

ಇನ್ನು ಸಭೆ ನಡೆಯುವ ವೇದಿಕೆಗೆ ಆಗಮಿಸಿದ ಎಐಎಂಐಎಂ ಜಿಲ್ಲಾ ಅಧ್ಯಕ್ಷ ನಜೀರ್ ಹೊನ್ನಾಳ ಯಾವುದೇ ಕಾರಣಕ್ಕೋ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡಾ ಇದಕ್ಕೆ ನಮ್ಮ ಸಹಮತ ಇಲ್ಲಾ. ನಮ್ಮ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೀಡಿದ ಪರವಾಗಿಗೆ ನಮ್ಮ ಪಕ್ಷದ ನಿಲುವು ಅಲ್ಲಾ, ಗುಂಟ್ರಾಳ ವಿರುದ್ಧ ಕ್ರಮ ಆಗೇ ಆಗುತ್ತದೆ ಎಂದರು. ಇನ್ನೂ ಪಾಲಿಕೆಯ ನಿರ್ಣಯ ವಿರುದ್ಧ ಹಿಂದು ಪರ ಸಂಘಟನೆಗಳು ಸಹ ಆಕ್ರೋಶ ವ್ಯಕ್ತಪಡಿಸಿದ್ದು ಹೋರಾಟಕ್ಕೆ ಸಜ್ಜಾಗಿವೆ. ಈ ಈದ್ಗಾ ವಿವಾದ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾಲವೇ ಉತ್ತರ ನೀಡಬೇಕಾಗಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ