Breaking News
Home / ಜಿಲ್ಲೆ / ಬೆಳಗಾವಿ / ಕಾಗವಾಡ / ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ

ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ

Spread the love

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳನ್ನು ಡಾಂಬರಿಕರಣ ಮಾಡುವಗೋಸ್ಕರ ೨೦೦ ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದು, ಎಲ್ಲ ಕಾಮಗಾರಿಗಳು ಭರದಿದಂದ ಸಾಗಿವೆಯೆಂದು ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಗುರುವಾರ ರಂದು ಕಾಗವಾಡ ಮತಕ್ಷೇತ್ರದ ಜಕಾರಟ್ಟಿ ಗ್ರಾಮದಲ್ಲಿ ೪ ಕೋಟಿ ರೂ. ವೆಚ್ಚದ ಮದಭಾವಿ-ಸಂಬರಗಿ ಹಾಗೂ ಜಕಾರಟ್ಟಿಯಿಂದ ಖುಟ್ಟಿ ತೋಟದವರೆಗಿನ ರಸ್ತೆಗೆ ೧.೫೦ ಕೋಟೆ ರೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ಹಲವಾರು ರಸ್ತೆಗಳು ಹದಗೆಟ್ಟು ಹೋಗಿದ್ದವು, ಕ್ಷೇತ್ರದ ಎಲ್ಲ ಜನರು ರಸ್ತೆಗಳನ್ನು ರಿಪೇರಿ ಮಾಡಿಸುವಂತೆ ನನಗೆ ಆಗ್ರಹಿಸುತ್ತಿದ್ದರು.

ಕಳೆದ ಎರಡು ವರ್ಷ ಮಹಾಮಾರಿ ಕೊರೊನಾ ಬಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆ ಕಾರಣಕ್ಕಾಗಿ ಕೆಲವು ಕಾಮಗಾರಿಗಳು ಕುಂಟಿತಗೊAಡಿದ್ದವು. ನಾನು ಸ್ವತಃ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ಮುಖ್ಯಮಂತ್ರಿಗಳು ಕಾಗವಾಡ ಮತಕ್ಷೇತ್ರ ಲೊಕೋಪಯೋಗಿ ಇಲಾಖೆಯೊಂದಕ್ಕೆ ೨೦೦ ಕೋಟಿ ರೂ. ಅನುದಾನ ಕೊಟ್ಟಿರುತ್ತಾರೆ. ಸಾಲದಿದ್ದರೆ ಮತ್ತಷ್ಟು ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಮತ್ತೇ ಬೇರೆ ರಸ್ತೆಗಳು ಉಳಿದಿದ್ದರೆ ಹೇಳಿ ಆವುಗಳನ್ನು ಕೂಡ ಡಾಂಬರೀಕರಣ ಮಾಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.


Spread the love

About Laxminews 24x7

Check Also

ಐವರು ಶತಾಯುಷಿಗಳಿಗೆ ಸನ್ಮಾನ

Spread the love ಅಂಕಲಗಿ: ಹಿರಿಯರು ನಮ್ಮ ಇಂದಿನ ಬಹು ದೊಡ್ಡ ಆಸ್ತಿ. ಅವರ ನಡೆ, ನುಡಿ, ಆದರ್ಶಗಳು ನಮಗೆಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ